ನಮ್ಮ ವೆಬ್‌ಸೈಟ್ ಕುರಿತು ಹಿರಿಯರ ಸಲಹೆ ಸೂಚನೆ
ಅಂತರ್ಜಾಲ ತಾಣದಲ್ಲಿ
ಕೆಲಸ ಮಾಡಿದ ಹಿರಿಯರು ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪಳಗಿದವರು ತಮ್ಮ
ಸಲಹೆ, ಹಾರೈಕೆ ಮತ್ತು ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ನಮ್ಮ ಬೆನ್ನು
ತಟ್ಟಿದವರಿಗೆ, ತಿದ್ದಿದವರಿಗೆ ಕೃತಜ್ಞತೆ ಸೂಚಿಸುತ್ತಾ, ಅವರ ಅಭಿಪ್ರಾಯಗಳನ್ನು ದಿನಕ್ಕೆರಡರಂತೆ
ನಿಮ್ಮ ಓದಿಗಾಗಿ
ಇಲ್ಲಿ ಕೊಡುತ್ತೇವೆ:
ಬರಹಗಳಲ್ಲಿ
ಆತ್ಮೀಯತೆ ಇರಬೇಕು !

-ಎಸ್ಕೆ. ಶಾಮ
ಸುಂದರ
ಸಂಪಾದಕರು,
ದಟ್ಸ್‌ಕನ್ನಡ.ಕಾಂ
ನಿಮ್ಮ ಸೈಟ್ ಓಕೆ.
ಚೆನ್ನಾಗಿ ಬರ್‍ತಾ ಇದೆ. ನಿಮ್ಮ ಸ್ಟ್ರೆಂಥ್ ಏರಿಯಾವನ್ನು ಗುರುತಿಸಿಕೊಳ್ಳಬೇಕು. ಯಾವ
ಕ್ಷೇತ್ರಕ್ಕೆ ಒತ್ತು ಕೊಡುತ್ತೀರಿ ಅನ್ನೋದನ್ನ ನಿರ್ಧರಿಸಿಕೊಳ್ಳಬೇಕು. ಬರಹಗಳಲ್ಲಿ ಬರೀ
ಸುದ್ದಿ ಹೇಳಿದರೆ ಸಾಲದು. ಅಲ್ಲಿ ಆತ್ಮೀಯತೆ ಇರಬೇಕು, ಅಂದರೆ ಬರಹವನ್ನು ಓದಿ
ಮುಗಿಸಿದ ನಂತರವೂ ಅದರಲ್ಲಿ ಏನೋ ಒಂದು ಪದ, ಸಾಲು, ವಿಷಯ ಓದುಗನನ್ನು
ಕಾಡಬೇಕು.
*
ಎನ್ನಾರೈಗಳನ್ನು
ಓಲೈಸಬೇಡಿ

-ಬೇಳೂರು ಸುದರ್ಶನ್
ಕತೆಗಾರ, ಪತ್ರಕರ್ತ
ನನ್ನ ನಿರೀಕ್ಷೆಯ ವಿಕ್ರಾಂತ ಕರ್ನಾಟಕ ಹೀಗಿರಬೇಕು
ಅದು
ಬ್ಯೂರೋಕ್ರಸಿಗಳ ಕಣ್ಣು ಸೆಳೆಯುವಂತಿರಬೇಕು ಜೊತೆಗೆ ಸಮಾಜದಲ್ಲಿರುವ ಎಲ್ಲ
ತರದ ಓದುಗ ವರ್ಗವನ್ನೂ ಆಕರ್ಷಿಸಬೇಕು. ಬರೀ ಸುದ್ದಿಗಳನ್ನು ಆಕರ್ಷಿಸುವುದಷ್ಟೆ
ವೆಬ್‌ಸೈಟ್‌ನ ಗುರಿಯಾಗಿರಬಾರದು.
ವಿಶೇಷ ರೀತಿಯ ಸಂಶೋಧನಾತ್ಮಕ
ಪತ್ರಿಕೋದ್ಯಮಕ್ಕೆ ಒತ್ತುಕೊಡಬೇಕು. ಅದು ಮುದ್ರಣ ಮಾಧ್ಯಮದವರಿಗೆ ಅಚ್ಚರಿ
ಹುಟ್ಟಿಸಿ ಅವರೂ ಇತ್ತ ಕಣ್ಣು ಹರಿಸುವಂತಿರಬೇಕು.
ಅಭಿವೃದ್ದಿ ಮತ್ತು ಮೂಲಭೂತ
ಸೌಕರ್‍ಯಗಳ ಬಗ್ಗೆ ವಿಶೇಷ ಲೇಖನಗಳು ಬರಬೇಕು. ಅದು ಓದುವುದಕ್ಕೆ
ಆಸಕ್ತಿದಾಯಕವಾಗಿರಬೇಕು.
ಎನ್‌ಆರ್‌ಐಗಳನ್ನು
ಓಲೈಸುವ ಸಲುವಾಗಿ ಈ ವೆಬ್ ಸೈಟ್ ಎನ್‌ಆರ್‌ಐ ಬರಹಗಳನ್ನು ಮತ್ತು ದೇಶದಲ್ಲಿರುವ
ಬರಹಗಾರರ ಬರಹಗಳನ್ನು ಮಿಶ್ರ ಮಾಡಬಾರದು.