ಮಾನ್ಯರೆ,
ಪತ್ರಿಕೆಯನ್ನು
ಓದಿದೆ. ಪತ್ರಿಕೆ ಹೇಗಿರಬೇಕೆಂದು ತಮಗೆ ಹೇಳುವುದು ಉಚಿತವಲ್ಲ. ಯಾಕೆಂದರೆ,
ತುಂಬ ದುಡಿದವರು ನೀವು. ಪ್ರತಿಭಾವಂತರ ಜೊತೆ ಇದ್ದವರು. ಕರ್ನಾಟಕದ ಬಗ್ಗೆ ಕನಸು
ಕಾಣುವವರು. ಅದನ್ನು ನನಸಾಗಿಸಲು ಈಗ ಪತ್ರಿಕೆ ಬಳಸಿರಿ.
ಅತ್ಯುತ್ತಮ ಅಭಿಪ್ರಾಯಗಳನ್ನು ರೂಪಿಸುವ ಕೆಲಸ ನಿಮ್ಮ ಪತ್ರಿಕೆಯಿಂದ
ಸಾಧ್ಯವಾಗಲಿ. ೨೧ನೇ ಶತಮಾನದ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು
ದಾಟಲು ಯುವತಿ-ಯುವಕರನ್ನು ಸಜ್ಜುಗೊಳಿಸಲು ಪ್ರಯತ್ನಿಸಿರಿ.
-ಅಮರೇಶ ನುಗಡೋಣಿ
*
ಮಾನ್ಯರೆ,
ತರಂಗ, ಸುಧಾ
ವಾರ ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ ಬಹಳ ವರ್ಷವಾಯಿತು. ಆದರೆ ವಿಕ್ರಾಂತ ಕರ್ನಾಟಕ
ಪುನಃ ನನ್ನನ್ನು ವಾರಪತ್ರಿಕೆ ಓದುವಂತೆ ಪ್ರೇರೇಪಿಸಿದೆ.
ಪ್ರತಿ ಪುಟಗಳಲ್ಲಿ ಹೊಸತನ, ಸುಂದರ ಛಾಯಾಚಿತ್ರಗಳು ಹಾಗೂ
ಗ್ಲೇಜ್ಡ್ ಪುಟಗಳಿಂದ ನಿಜವಾಗಲೂ ವಾರಪತ್ರಿಕೆ ಕಂಗೊಳಿಸುತ್ತಿದೆ.
ವಿಕ್ರಾಂತ ಕರ್ನಾಟಕ ರಾಜ್ಯದ ಇನ್ನೊಂದು ಇಂಡಿಯಾ ಟುಡೇ,
ಔಟ್‌ಲುಕ್ ರೀತಿಯಲ್ಲಿ ಕಂಡು ಬರುತ್ತಿದೆ. ವೀಕ್ ಪತ್ರಿಕೆಯ ಜಾಡೇ ಕಂಡು ಬಂದರೂ ಹೊಸ
ಹೊಸ ವಿಚಾರಗಳು ಓದುಗರನ್ನು ಸೆರೆ ಹಿಡಿಯುತ್ತವೆ.
ಪತ್ರಿಕೆ ನಿಜಕ್ಕೂ ತುಂಬ ಸುಂದರವಾಗಿ ಮುದ್ರಣವಾಗುತ್ತಿದೆ. ನಿಮ್ಮ
ಪ್ರಯತ್ನ ಯಶಸ್ಸಿನ ಹಾದಿಯಲ್ಲಿ ಸಾಗಿರುವುದು ಪತ್ರಿಕೆ ನೋಡಿದರೆ ಗೊತ್ತಾಗುತ್ತದೆ.
ದಿನೇ ದಿನೇ ವಿಕ್ರಾಂತ ಕರ್ನಾಟಕ ವಾರಪತ್ರಿಕೆ ಓದುಗರ ಹಸಿವನ್ನು
ಉತ್ತಮ ವಿಚಾರಧಾರೆಯಿಂದ ಇಂಗಿಸಲಿ. ನಿಮ್ಮ ಹೊಸ ಪ್ರಯತ್ನಕ್ಕೆ ನಮ್ಮಗಳ ಸಂಪೂರ್ಣ
ಬೆಂಬಲವಿದೆ.
-ಸಿ.ಪಿ. ಮೂರ್ತಿ
ಮಂಡ್ಯ
*
ಮಾನ್ಯರೆ,
ನಿಮ್ಮ ನೂತನ
`ವಿಕ್ರಾಂತ ಕರ್ನಾಟಕ' ಕನ್ನಡ ವಾರಪತ್ರಿಕೆಯನ್ನು ಕುತೂಹಲಕ್ಕಾಗಿ ಕೊಂಡು ಓದಿ ನೋಡಿದೆ.
ತುಂಬಾ ಚೆನ್ನಾಗಿದೆ. ನಿಮ್ಮ ಕಾರ್ಯ ಶ್ಲಾಘನೀಯವಾದುದು. ಲೇಖನ ವಿಚಾರಗಳು
ಹಿಡಿಸಿತು. ಕನ್ನಡ ಪತ್ರಿಕೋದ್ಯಮ ಪ್ರಪಂಚದಲ್ಲಿ `ವಿಕ್ರಾಂತ ಕರ್ನಾಟಕ'ವು ಹೊಸ
ರೀತಿಯ ಕ್ರಾಂತಿಯನ್ನು ಮಾಡಿ ಇತಿಹಾಸ ನಿರ್ಮಿಸುವಂತಾಗಲಿ. ಓದುಗರ ಕಣ್ಮಣಿಯಾಗಿ
ಕರ್ನಾಟಕದಲ್ಲಷ್ಟೇ ಅಲ್ಲದೇ ನಮ್ಮ ದೇಶ ಹಾಗೂ ವಿದೇಶದಲ್ಲಿರುವ ಇತರ ಕನ್ನಡಿಗರನ್ನು
ಇಂಟರ್‌ನೆಟ್ ಮೂಲಕ ತಲುಪುವಂತಾಗಲಿ. ನಿಮಗೆ ಹೆಚ್ಚಿನ ಯಶಸ್ಸು ದೊರಕಲಿ.
-ಡಿ. ಭರತ್.
ಬೆಂಗಳೂರು.
*
ಪ್ರಿಯ ಸತ್ಯಮೂರ್ತಿ
ಆನಂದೂರು,
ನಿಮ್ಮ ಸಂಪಾದಕತ್ವದ `ವಿಕ್ರಾಂತ ಕರ್ನಾಟಕ' ನೋಡಿದೆ, ಕೊಂಡು
ಓದಿದೆ. ತುಂಬ ನುಣುಪಾದ ಕಾಗದದಲ್ಲಿ, ನಯವಾದ ಬರವಣಿಗೆಗಳು ಚೆನ್ನಾಗಿವೆ.
ಕಾಂತಾಸಂಹಿತೆಯ ನಿಮ್ಮ ಟೀಕೆಗಳೂ, ಮೃದು ಹಾಸ್ಯಗಳು ನನ್ನ ಮನಸ್ಸಿಗೆ ಮುದ
ಕೊಟ್ಟವು. ಅದಕ್ಕಾಗಿ ಧನ್ಯವಾದಗಳು.
ಈ ವಾರಪತ್ರಿಕೆ ಆರಂಭಿಸಿರುವ ನಿಮ್ಮ ಸಾಹಸ ಪ್ರಿಯತೆ ಪ್ರಶಂಸನೀಯ.
ಈ ನಿಮ್ಮ ಸಾಹಸ ಯಶಸ್ವಿಯಾಗಲೆಂದು ಹಾಡಿ, ಹರಸಿ, ಹಾರೈಸುತ್ತೇನೆ.
ಅಂದಹಾಗೆ ಒಂದು ಮಾತು; ನಮ್ಮ `ವಿಕ್ರಾಂತ ಕರ್ನಾಟಕ'ದಲ್ಲಿ
ಯಾವುದೇ ಧಾರಾವಾಹಿಗಳು ಬೇಡ- ಖಂಡಿತಾ ಬೇಡ. ಚಿಕ್ಕ ಪುಟ್ಟ ಅಥವಾ ಪುಟಗಟ್ಟಲೆಯಾದರೂ,
ಲೇಖನಗಳು ಒಂದೇ ಸಾರಿಗೆ, ಒಂದೇ ಸಂಚಿಕೆಯಲ್ಲಿ ಮೂಡಿಸಬೇಕು. ಆಗ ನನ್ನಂಥ
ಓದುಗರಿಗೆ ಸಮಾಧಾನ, ಸಂತೋಷ, ಸಂಪೂರ್ಣ ಓದಿದ್ದರ ಬಗ್ಗೆ ತೃಪ್ತಿಯಾಗುತ್ತದೆ.
ನಿಮಗೂ ನಿಮ್ಮ ಪತ್ರಿಕಾ ಬಳಗಕ್ಕೂ ನನ್ನ ಶುಭಾಶಯಗಳು.
-ಕೋಣಂದೂರು ಲಿಂಗಪ್ಪ
ಮಾಜಿ ಶಾಸಕರು
ಶಿವಮೊಗ್ಗ
*
ಪ್ರೀತಿಯ ಸತ್ಯಮೂರ್ತಿ
ಆನಂದೂರರಿಗೆ ನಮಸ್ಕಾರಗಳು,
ನಿಮ್ಮ ಸಂಪಾದಕತ್ವದಲ್ಲಿ ಬರುತ್ತಿರುವ `ವಿಕ್ರಾಂತ ಕರ್ನಾಟಕ'ವನ್ನು
ನೋಡಿದೆ. ತುಂಬಾ ಸಂತೋಷವಾಯಿತು. ಪತ್ರಿಕೆಯ ಗುಣಮಟ್ಟ ಯಾವುದೇ ಇಂಗ್ಲಿಷ್
ಪತ್ರಿಕೆಗಳಿಗೂ ಕಡಿಮೆಯಿಲ್ಲದಷ್ಟು ಉತ್ತಮವಾಗಿದೆ. ಪತ್ರಿಕೆ ತರುವ ಹಿಂದಿನ ಕಷ್ಟಗಳನ್ನು
ಹತ್ತಿರದಿಂದ ಬಲ್ಲ ನಾನು ಇಂಥದೊಂದು ಪತ್ರಿಕೆ ಬದುಕಿ ಬಾಳಬೇಕು, ಮಾದರಿ ಪತ್ರಿಕೆಯಾಗಬೇಕು
ಎಂಬ ಕಾಳಜಿಯಿಂದ ತತ್‌ಕ್ಷಣವೇ ಪತ್ರಿಕೆಯ ವಾರ್ಷಿಕ ಚಂದಾ ಹಣವನ್ನು
ಕಳುಹಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ.
ಪತ್ರಿಕೆಯ ಪ್ರತಿಪುಟದಲ್ಲಿಯೂ ವರ್ಣರಂಜಿತವಾಗಿ ವಿಜೃಂಭಿಸುತ್ತಿದೆ.
ವೈವಿಧ್ಯತೆ ಇದೇ (ಲೇಖನಗಳಲ್ಲಿ) ಎಲ್ಲಕ್ಕಿಂತ ಹೆಚ್ಚಿನದಾಗಿ ಸದಭಿರುಚಿಯ ಆಶಯವಿದೆ.
ಮನೆಮಂದಿಯೆಲ್ಲ ಖುಷಿಯಿಂದ ಓದಬಹುದು. ಪತ್ರಿಕೆ ಈ ಒಳಿತನ್ನು ಮುಂದುವರೆಸಿಕೊಂಡು
ಬರಲಿ.
ಸಣ್ಣ ಸಲಹೆಯೂ ಇದೆ. ಪ್ರಚಲಿತ ವಿದ್ಯಮಾನಗಳ ಕುರಿತು ಬರುತ್ತಿರುವ
ಲೇಖನಗಳು ಕೇವಲ ವಿಶ್ಲೇಷಣಾತ್ಮಕ ಲೇಖನವಾಗಿರದೆ, ಇನ್ನಷ್ಟು ಖಚಿತತೆಯಿಂದ ಕೂಡಿರಲಿ.
ನೇರವಾಗಿದ್ದು ತಿದ್ದುಕೊಳ್ಳುವಂತಿದ್ದು ಅವರಿಗೆ ನೋವುಂಟಾಗದಂತಹ ಬರಹಗಳಿದ್ದರೆ
ಒಳ್ಳೆಯದೇನೇ.
ಗ್ರಾಮೀಣ ಬದುಕಿನ ಸೊಗಡು, ಕೃಷಿ ಬದುಕನ್ನು ತೆರೆದಿಡುವುದು
ಲೇಖನಗಳ ಜತೆಗಿದ್ದರೆ ಹಳ್ಳಿ ಸೇರಿರುವ ನಿಮ್ಮಂತಹವರಿಗೂ ಒಂಥರಾ ಖುಷಿ- ಹೆಚ್ಚು
ತೃಪ್ತಿ.
ನಿಮ್ಮ ಪ್ರಯತ್ನ ಹೆಚ್ಚಿನ ಯಶಸ್ಸುಗಳಿಸಲಿ ಎಂಬ
ಶುಭಹಾರೈಕೆಗಳು.
-ನಾಗೇಂದ್ರ ಸಾಗರ್
ಚಿಪ್ಪಳಿ
*
ಸತ್ಯಮೂರ್ತಿ ಆನಂದೂರು
ಅವರಿಗೆ,
ಎರಡು ಸಂಚಿಕೆಗಳನ್ನು ನೋಡಿದ್ದೇನೆ. ನಿಮ್ಮ ತಣ್ಣನೆಯ ಬೆಂಕಿಯಂಥ
ಸಂಪಾದಕೀಯವನ್ನು ಗಮನಿಸಿದ್ದೇನೆ. ವಿಕ್ರಾಂತ ಕರ್ನಾಟಕದ ಮುದ್ರಣದಲ್ಲಿ ಬಣ್ಣಬಣ್ಣದಲ್ಲಿ
ಆಕರ್ಷಕವಾಗಿದೆ. ಲೇಖನಗಳು ವರದಿಗಳು ಸಕಾಲಿಕವಾಗಿವೆ, ಸೂಕ್ತವಾಗಿವೆ.
ಸಿ.ಎಸ್. ಗುಬ್ಬಿಯವರೂ ತಮ್ಮ ಜೊತೆಗೆ ಇದ್ದುದು ಸಂತೋಷ.
ನಿಮಗೆ ಗೆಲುವಾಗಲಿ.
- ತಂಗಣ್ಣ ಸತ್ಯಪೇಟೆ
ಗುಲ್ಬರ್ಗ
*
ಮಾನ್ಯರೆ,
ಕನ್ನಡ ವಾರ ಪತ್ರಿಕೆಗಳ ಮಟ್ಟಿಗೆ `ವಿಕ್ರಾಂತ ಕರ್ನಾಟಕ' ವರ್ಣರಂಜಿತವಾಗಿ
ಬರುತ್ತಿರುವುದು ಹೊಸ ಪ್ರಯತ್ನ, ಪ್ರಯೋಗವೇ ಸರಿ. ಹಾಳೆಗಳು ಕಲರ್‌ಫುಲ್
ಆದರೆ ಸಾಲದು. ಇದು ನಮ್ಮ ಪತ್ರಿಕೆ, ಸಂಗ್ರಹಯೋಗ್ಯ ಸಂಚಿಕೆ ಎಂಬಷ್ಟರಮಟ್ಟಿಗೆ
ತೆಗೆದಿಟ್ಟು ಕೊಳ್ಳುವಂತಾಗಬೇಕು. ಎನಿವೇ, ನಿಮ್ಮ ಹೊಸತನದ ಸಾಹಸಕ್ಕೆ ಶುಭ
ಕೋರುತ್ತೇನೆ.
- ಪ್ರಜ್ವಲ್
ತುಮಕೂರು.
ಇನ್ನಷ್ಟು
ನಿಮ್ಮ ಬರಹ, ಅನಿಸಿಕೆ ಮತ್ತು ಪ್ರಶ್ನೆಗಳಿಗೆ ಸದಾ
ಸ್ವಾಗತ
ವೆಬ್‌ಸೈಟ್ ಕುರಿತು ಅಬ್ದುಲ್ ರಶೀದ್ ಮತ್ತು ಶೇಖರ್‌ಪೂರ್ಣ
ನಮ್ಮ ವೆಬ್‌ಸೈಟ್ ಕುರಿತು ಹಿರಿಯರ ಸಲಹೆ ಸೂಚನೆ
ಓದುಗರ ಪತ್ರಗಳು, ಹಾರೈಕೆ-ಸಲಹೆಗಳು
ನಮ್ಮ ವೆಬ್‌ಸೈಟ್ ಕುರಿತು ಹಿರಿಯರ ಸಲಹೆ ಸೂಚನೆ
ಜಯಮಾಲಮ್ಮಂಗೆ ಮಾಡಲು ಬೇರೆ ಕೆಲಸ ಇಲ್ವಾ?
ರೊಕ್ಕಸ್ಥರ ಅಕ್ಕ ಸಮ್ಮೇಳನವಿದು
AKKAನಿಗೊಂದು
ಪತ್ರ...
ಮ್ಯಾಗಜೀನ್ ಕದ್ದುಕೊಂಡು ಹೋದ್ರಪ್ಪಾ
ಓದುಗರ ಪತ್ರಗಳು, ಹಾರೈಕೆ-ಸಲಹೆಗಳು
ವಿಕ್ರಾಂತ ಪ್ರಕಾಶನಕ್ಕೆ ಓದುಗರ ಶುಭಾಶಯಗಳು, ಸಲಹೆಗಳು
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ