ನಮ್ಮ ವೆಬ್‌ಸೈಟ್ ಕುರಿತು ಹಿರಿಯರ ಸಲಹೆ ಸೂಚನೆ
ಅಂತರ್ಜಾಲ ತಾಣದಲ್ಲಿ
ಕೆಲಸ ಮಾಡಿದ ಹಿರಿಯರು ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪಳಗಿದವರು ತಮ್ಮ
ಸಲಹೆ, ಹಾರೈಕೆ ಮತ್ತು ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ನಮ್ಮ ಬೆನ್ನು
ತಟ್ಟಿದವರಿಗೆ, ತಿದ್ದಿದವರಿಗೆ ಕೃತಜ್ಞತೆ ಸೂಚಿಸುತ್ತಾ, ಅವರ ಅಭಿಪ್ರಾಯಗಳನ್ನು
ನಿಮ್ಮ ಓದಿಗಾಗಿ
ಇಲ್ಲಿ ಕೊಡುತ್ತೇವೆ:
ಇದು ಪುರುಸೊತ್ತಿಲ್ಲದವರ ಮಾಧ್ಯಮ
*
ನಿರಂಜನ ವಾನಳ್ಳಿ,
ಪತ್ರಿಕೋದ್ಯಮ
ವಿಭಾಗದ ಮುಖ್ಯಸ್ಥರು, ಮಾನಸ ಗಂಗೋತ್ರಿ
ಇದೊಂದು ಹೊಸ ಮಾಧ್ಯಮ ಕನ್ನಡದಲ್ಲಿ ವಾರ ಪತ್ರಿಕೆ ಹಾಗೂ
ವೆಬ್‌ಸೈಟ್ ಎರಡನ್ನೂ ಹೊರತರುವ ವಿಕ್ರಾಂತ ಪ್ರಕಾಶನದ ವಿನೂತನ ಪ್ರಯೋಗ ಶ್ಲಾಘನೀಯ.
ಒಂದರ್ಥದಲ್ಲಿ ಅಂತರ್ಜಾಲ ಎಂಬುದು ಪುರುಸೊತ್ತಿಲ್ಲದ ಜನರ ಮಾಧ್ಯಮ. ಚಿಕ್ಕದರಲ್ಲಿ
ಚೊಕ್ಕವಾಗಿ ಎಲ್ಲವನ್ನೂ ಹೇಳಿಕೊಂಡುಬಿಡಬೇಕು. ದೃಶ್ಯಾವಳಿಗಳ ಮೂಲಕ ಈ ಮಾಧ್ಯಮ
ಜನಮನ ಗೆಲ್ಲಲು ಸಾಧ್ಯ. ನಿಮ್ಮ ಪತ್ರಿಕೆ ಹಾಗೂ ವೆಬ್‌ಸೈಟ್ ಹೊಸ ಹೊಸ
ಪ್ರಯೋಗಗಳಿಗೆ ನಾಂದಿ ಹಾಡಹಾಡಬೇಕು. ಯುವ ಬರಹಗಾರರಿಗೆ ಇದು ವೇದಿಕೆಯಾಗಲಿ.
ಪತ್ರಿಕೆ ಬೆಳೆಯಲಿ.
*
ಅನುಕರಣೆ ತಪ್ಪಲ್ಲ...
ಪ್ರತಾಪ್
ಸಿಂಹ
ಅಂಕಣಕಾರ ವಿಜಯ ಕರ್ನಾಟಕ
ಕನ್ನಡದ ಹೊಸ ಪತ್ರಿಕೆಯೊಂದರ ಹೊಸ ವೆಬ್‌ಸೈಟ್ ಅಂತರ್ಜಾಲಕ್ಕೆ
ಪ್ರವೇಶಿಸಿರುವುದು ನಿಜಕ್ಕೂ ಖುಷಿ ತಂದಿದೆ. ಹೊಸತನದೊಂದಿಗೆ ಹುಟ್ಟಿ ಬರುವ
ವೆಬ್‌ಸೈಟ್‌ಗಳಿಗೆ ಸವಾಲುಗಳು ಸಹಜ. ಸ್ವಂತಿಕೆಯ ಜೊತೆಗೆ ಒಳ್ಳೆಯದನ್ನು ಬೇರೆಯವರಿಂದ
ಅನುಕರಣೆ ಮಾಡಿದರೆ ತಪ್ಪಲ್ಲ. ಆ ಅನುಕರಣೆ ಅಭಿವೃದ್ಧಿಗೆ ದೀವಿಗೆಯಾಗಬೇಕು. ಮೊದಲಿಗೆ
ಒಳ್ಳೆಯ ವೆಬ್‌ಸೈಟನ್ನು ಮಾದರಿಗಿಟ್ಟುಕೊಳ್ಳಿ. ನಂತರ ನೀವೇ ಬೇರೊಬ್ಬರಿಗೆ ಮಾದರಿಯಾಗುತ್ತೀರಿ.
ಕನ್ನಡದಲ್ಲಿ ಸಾಕಷ್ಟು ಮಾಧ್ಯಮಗಳಿವೆ. ಕನ್ನಡ ವೆಬ್‌ಸೈಟ್‌ಗಳ ಮೂಲ ಓದುಗರು
ಎನ್‌ಆರ್‌ಐಗಳೇ ಆದ್ದರಿಂದ ಕನ್ನಡದ ಕಂಪನ್ನು ಹೊರದೇಶದಲ್ಲಿ ಪಸರಿಸಲು ಈ ಸೈಟ್ ವೇದಿಕೆಯಾಗಬೇಕು.
ಸೈಟ್‌ನ ವಿನ್ಯಾಸ ಇನ್ನೂ ಸುಧಾರಣೆಯಾಗಬೇಕಿದೆ. ವಿಷಯದ ಆಯ್ಕೆಯಲ್ಲಿ ಹೊಸತನವಿರಲಿ.
ಸೈಟ್ ಬೆಳೆಯಲಿ. ಶುಭವಾಗಲಿ.
ಸುದ್ದಿಯ ಮಿತಿಯನ್ನು
ದಾಟಬೇಕು
ಇಂದ್ರಜಿತ್
ಲಂಕೇಶ್,
ಲಂಕೇಶ್ ಪತ್ರಿಕೆ ಸಂಪಾದಕರು,
ಚಿತ್ರ ನಿರ್ದೇಶಕ

ಎಷ್ಟೇ ವೆಬ್‌ಸೈಟ್‌ಗಳಿರಲಿ, ಹೊಸ ವೆಬ್‌ಸೈಟ್‌ಗೆ ಜಾಗ ಇಲ್ಲ
ಎಂಬ ಪ್ರಮೇಯವೇ ಇರುವುದಿಲ್ಲ. ಹಳ್ಳಿಗಳಿಗೆ, ಅಲ್ಲಿನ ಯುವಕರಿಗೆ ಮಾಹಿತಿ ನೀಡುವಂತಹ
ವೆಬ್‌ಸೈಟ್ ಇವತ್ತು ಅಗತ್ಯವಿದೆ. ಸುದ್ದಿ ಅಥವಾ ಮಾಹಿತಿಯನ್ನು ಕೊಡುವ ಸೈಟ್‌ಗಳು
ಬೇಕಾದಷ್ಟು ಇವೆ. ಆದರೆ ಸುದ್ದಿಗಿಂತ ಹೊರತಾಗಿ ಭಿನ್ನವಾಗಿ, ನಿಮ್ಮದೇ ಐಡೆಂಟಿಟಿಯನ್ನು
ಗುರುತಿಸಿಕೊಂಡು ಅಂತರ್ಜಾಲದಲ್ಲಿ ನಿಮ್ಮ ತಾಣವನ್ನು ನೀವು ಗುರುತಿಸಿಕೊಳ್ಳಬೇಕು.
ಎಲ್ಲೂ ಸಿಗದೇ ಇರುವಂತಹ ಮಾಹಿತಿಗಳನ್ನು ನೀವು ಅಪ್‌ಲೋಡ್ ಮಾಡಿದಲ್ಲಿ ವೆಬ್‌ಸೈಟ್‌ಗೆ
ಹೆಚ್ಚು ಗುರುತಿಸಿಕೊಳ್ಳುತ್ತದೆ. ವೆಬ್‌ಗ್ಯಾಲರಿ, ಸಿನೆಮಾ, ಸಾಹಿತ್ಯ ಸುದ್ದಿಗಳೂ ಸೈಟ್‌ನ
ಅಂದಕ್ಕೆ, ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಇರಲೇಬೇಕು. ನಿಮ್ಮ ವೆಬ್‌ಸೈಟ್ ಹೆಚ್ಚು
ಹಿಟ್ಸ್‌ಗಳನ್ನು ಪಡೆಯಲಿ ಎಂಬುದು ನನ್ನ ಹಾರೈಕೆ.
*
ಕ್ಷಣ ಕ್ಷಣ ಹೊಸ ಸುದ್ದಿ ಕೊಡಿ
ಪ್ರಕಾಶ್
ಶೆಟ್ಟಿ, ಉಳೆಪಾಡಿ,
ಸಂಪಾದಕರು,
ಪ್ರಕಾಶಕ.ಕಾಂ
ಹೊಸ ವೆಬ್‌ಸೈಟ್ ಶುರು ಮಾಡ್ತೀವಿ ಅಂತೀರಾ. ಅದರಲ್ಲೂ ಸುದ್ದಿಗೆ
ಸಂಬಂಧಿಸಿದ ವೆಬ್‌ಸೈಟ್ ಎಂದರೆ ಅದರಲ್ಲಿ ಅಪ್‌ಡೇಟ್ ಆಗಾಗ ಅಗ್ತಾ ಇರಬೇಕು. ಇವತ್ತಿನ ವೇಗದ
ಯುಗದಲ್ಲಿ ನಿನ್ನೆಯ ಸುದ್ದಿಗೆ ಇಂದು ಮಹತ್ವ ಇಲ್ಲ. ಕ್ಷಣ ಕ್ಷಣ ಹೊಸ ಸುದ್ದಿ
ಕೊಟ್ಟರೆ ನಿಮ್ಮ ಸೈಟು ಕ್ಲಿಕ್ ಆಗುತ್ತೆ.

ಹೊಸ ಪ್ರತಿಭೆಗಳಿಗೆ ಅವಕಾಶ ಇರಲಿ
ಸುಚೇಂದ್ರ ಪ್ರಸಾದ್, ಕಿರುತೆರೆ ನಟ
ಚಿಕ್ಕದಾಗಿ
ಚೊಕ್ಕದಾಗಿ ಚೆನ್ನಾಗಿ ಬರ್‍ತಾ ಇದೆ. ಸಾಹಿತ್ಯವನ್ನೇ ನೆಚ್ಚಿಕೊಂಡರೆ ಕಷ್ಟವಾಗುತ್ತೆ.
ಯಾವ್ಯಾಯ ವಿಷಯಕ್ಕೆ ಮಹತ್ವ ಕೊಡಬೇಕು ಅನ್ನೋದು ಹೋಗ್ತಾ ಹೋಗ್ತಾ ನಿಮಗೇ
ಗೊತ್ತಾಗುತ್ತೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವಂತಿರಬೇಕು.
ಇನ್ವೆಸ್ಟಿಗೇಟಿವ್ ಬರಹ
ಬೇಕು
ಪವನಜ,
ವಿಶ್ವಕನ್ನಡ.ಕಾಂನ ರೂವಾರಿ
ವೆಬ್‌ಸೈಟ್
ಎಂದಮೇಲೆ ಅದು ಇತ್ತೀಚಿನ ಸುದ್ದಿಗಳನ್ನು ನೀಡ
ಕು. ಮುಂದೆಯೂ ಓದುಗರು ಆ ಸೈಟ್‌ಗೆ
ಬರುವಂತೆ ಸ್ಫೂರ್ತಿದಾಯಕ ಲೇಖನಗಳು ಅದರಲ್ಲಿರಬೇಕು. ಸಿನೆಮಾ ಸುದ್ದಿಗಳು
ಆದಷ್ಟು ಕಡಿಮೆ ಇರಲಿ. ಅದು ಮಾಹಿತಿ ಕೇಂದ್ರವಾಗಿಬೇಕು. ಉದಾಹರಣೆಗೆ ಸಂಗೀತದ ಬಗ್ಗೆ
ಆಸಕ್ತಿ ಇರುವವರಿಗೆ ಆ ಕುರಿತ ಮಾಹಿತಿ ಅಥವಾ ಕೊನೇ ಪಕ್ಷ ಆ ಕುರಿತ ಮಾಹಿತಿ ಎಲ್ಲಿ
ಸಿಗುತ್ತೆ ಎಂಬ ಬಗ್ಗೆ ಮಾರ್ಗದರ್ಶನವಾದರೂ ನಿಮ್ಮ ಸೈಟಿನಲ್ಲಿ ಇರಬೇಕು.
ಇನ್ನೊಂದು ವಿಷಯವೆಂದರೆ
ಕನ್ನಡ ಪತ್ರಿಕೋದ್ಯಮದಲ್ಲಿ ಇನ್ವೆಸ್ಟಿಗೇಟಿವ್ ಪತ್ರಿಕೋದ್ಯಮ ಅನ್ನುವುದು ಈಗ
ಇಲ್ಲವೇ ಇಲ್ಲ. ಅದು ಅರುಣ್ ಶೌರಿಯವರ ಜೊತೆಗೇ ಹೋಯಿತು. ಅದು ಮತ್ತೆ ಶುರುವಾಗಬೇಕು.
ಡಾಟ್‌ಕಾಮ್‌ಗಳಿಗೆ ಜಾಹೀರಾತು ಮತ್ತಿತರೆ ದಾಕ್ಷಿಣ್ಯಗಳು ಕಡಿಮೆ. ಆದ್ದರಿಂದ ನೀವು ಈ ನಿಟ್ಟಿನಲ್ಲಿ
ಮುಂದುವರೆದರೆ ಚೆನ್ನ. ಜೊತೆಗೆ ಓದುಗರ ಭಾಗವಹಿಸುವಿಕೆಗೂ ಅವಕಾಶ ಇರಲಿ.
ಬರಹಗಳಲ್ಲಿ
ಆತ್ಮೀಯತೆ ಇರಬೇಕು !

-ಎಸ್ಕೆ. ಶಾಮ
ಸುಂದರ
ಸಂಪಾದಕರು,
ದಟ್ಸ್‌ಕನ್ನಡ.ಕಾಂ
ನಿಮ್ಮ ಸೈಟ್ ಓಕೆ.
ಚೆನ್ನಾಗಿ ಬರ್‍ತಾ ಇದೆ. ನಿಮ್ಮ ಸ್ಟ್ರೆಂಥ್ ಏರಿಯಾವನ್ನು ಗುರುತಿಸಿಕೊಳ್ಳಬೇಕು. ಯಾವ
ಕ್ಷೇತ್ರಕ್ಕೆ ಒತ್ತು ಕೊಡುತ್ತೀರಿ ಅನ್ನೋದನ್ನ ನಿರ್ಧರಿಸಿಕೊಳ್ಳಬೇಕು. ಬರಹಗಳಲ್ಲಿ ಬರೀ
ಸುದ್ದಿ ಹೇಳಿದರೆ ಸಾಲದು. ಅಲ್ಲಿ ಆತ್ಮೀಯತೆ ಇರಬೇಕು, ಅಂದರೆ ಬರಹವನ್ನು ಓದಿ
ಮುಗಿಸಿದ ನಂತರವೂ ಅದರಲ್ಲಿ ಏನೋ ಒಂದು ಪದ, ಸಾಲು, ವಿಷಯ ಓದುಗನನ್ನು
ಕಾಡಬೇಕು.

ಎನ್ನಾರೈಗಳನ್ನು
ಓಲೈಸಬೇಡಿ

-ಬೇಳೂರು ಸುದರ್ಶನ್
ಕತೆಗಾರ, ಪತ್ರಕರ್ತ
ನನ್ನ ನಿರೀಕ್ಷೆಯ ವಿಕ್ರಾಂತ ಕರ್ನಾಟಕ ಹೀಗಿರಬೇಕು
ಅದು
ಬ್ಯೂರೋಕ್ರಸಿಗಳ ಕಣ್ಣು ಸೆಳೆಯುವಂತಿರಬೇಕು ಜೊತೆಗೆ ಸಮಾಜದಲ್ಲಿರುವ ಎಲ್ಲ
ತರದ ಓದುಗ ವರ್ಗವನ್ನೂ ಆಕರ್ಷಿಸಬೇಕು. ಬರೀ ಸುದ್ದಿಗಳನ್ನು ಆಕರ್ಷಿಸುವುದಷ್ಟೆ
ವೆಬ್‌ಸೈಟ್‌ನ ಗುರಿಯಾಗಿರಬಾರದು.
ವಿಶೇಷ ರೀತಿಯ ಸಂಶೋಧನಾತ್ಮಕ
ಪತ್ರಿಕೋದ್ಯಮಕ್ಕೆ ಒತ್ತುಕೊಡಬೇಕು. ಅದು ಮುದ್ರಣ ಮಾಧ್ಯಮದವರಿಗೆ ಅಚ್ಚರಿ
ಹುಟ್ಟಿಸಿ ಅವರೂ ಇತ್ತ ಕಣ್ಣು ಹರಿಸುವಂತಿರಬೇಕು.
ಅಭಿವೃದ್ದಿ ಮತ್ತು ಮೂಲಭೂತ
ಸೌಕರ್‍ಯಗಳ ಬಗ್ಗೆ ವಿಶೇಷ ಲೇಖನಗಳು ಬರಬೇಕು. ಅದು ಓದುವುದಕ್ಕೆ
ಆಸಕ್ತಿದಾಯಕವಾಗಿರಬೇಕು.
ಎನ್‌ಆರ್‌ಐಗಳನ್ನು
ಓಲೈಸುವ ಸಲುವಾಗಿ ಈ ವೆಬ್ ಸೈಟ್ ಎನ್‌ಆರ್‌ಐ ಬರಹಗಳನ್ನು ಮತ್ತು ದೇಶದಲ್ಲಿರುವ
ಬರಹಗಾರರ ಬರಹಗಳನ್ನು ಮಿಶ್ರ ಮಾಡಬಾರದು.

ರ್ನೋಗ್ರಫಿ ಇಲ್ಲಾಂದ್ರೆ ಹೇಗೆ ?
-ಅಬ್ದುಲ್ ರಶೀದ್,
ಕತೆಗಾರ
ಇಂಟರ್‌ನೆಟ್ ಹೆಚ್ಚಾಗಿ
ಬಳಕೆಯಾಗುತ್ತಿರುವುದು ಪೋರ್ನೋಗ್ರಫಿಗೆ. ಅದಿಲ್ಲದೇ ಇದ್ದರೆ ವೆಬ್‌ಸೈಟ್ ಶೇಕಡಾ
೫೦ರಷ್ಟೇ ಯಶಸ್ಸು ಕಾಣಬಹುದು.
ಓದುಗರನ್ನು ತಪ್ಪು ದಾರಿಗೆ ಎಳೆಯಬಾರದು
-ಶೇಖರ್‌ಪೂರ್ಣ,
ಕನ್ನಡಸಾಹಿತ್ಯ.ಕಾಂ
ನಿರ್ವಾಹಕರು
ಇತ್ತೀಚೆಗೆ
ಬ್ಲಾಗ್‌ಗಳೆಲ್ಲ ಸಾಕಷ್ಟು ಬಂದಿವೆ. ಪೇಪರ್‌ಗಳಿವೆ. ಡಾಟ್‌ಕಾಮ್‌ಗಳಿವೆ. ಇದೆಲ್ಲವನ್ನೂ
ಒಳಗೊಳ್ಳಬಹುದಾದ ಒಂದು ವೆಬ್‌ಸೈಟ್ ಇದ್ದರೆ ಚೆನ್ನಾಗಿರುತ್ತೆ. ಬ್ಲಾಗ್ ಸ್ಪಾಟ್‌ಗಳಿಗೆ ಹೊಸ
ರೂಪು ಕೊಡುವಂತಹ, ಎನ್‌ಆರ್‌ಐಗಳೇ ಮುಖ್ಯ ಎಂದುಕೊಂಡು ಅವರಿಗೆ ಮಣೆ ಹಾಕದೇ
ಇರುವಂತಹ ಪೋರ್ಟಲ್ ಬೇಕು. ಎನ್‌ಆರ್‌ಐಗಳು ಬರೆದದ್ದೆಲ್ಲಾ ಗ್ರೇಟ್ ಅನ್ನುವಂತಹ
ಭ್ರಮೆಗಳನ್ನು ಕೆಲವು ವೆಬ್‌ಸೈಟ್‌ಗಳು ಹುಟ್ಟಿಸುತ್ತವೆ. ಆ ಮೂಲಕ ಓದುಗರನ್ನು
ತಪ್ಪು ದಾರಿಗೆ ಎಳೆತರಲು ಕೆಲಸವನ್ನು ನಿಮ್ಮ ಸೈಟ್ ಮಾಡದೇ ಇರಲಿ.
ಸೈಟು ಹಲವು
ಮಾಹಿತಿಗಳ ಕೇಂದ್ರವಾಗಿರಬೇಕು. ಅದು ಪಾಕಶಾಲೆಯಿಂದ ಹಿಡಿದು ಇತರ ಯಾವುದೇ ವಿಷಯದ
ಕುರಿತಾಗಿರಬಹುದು. ಒಟ್ಟಿನಲ್ಲಿ ಗುಣಮಟ್ಟವುಳ್ಳ ಮಾಹಿತಿಗಳನ್ನು ನಿಮ್ಮ ಸೈಟ್ ನೀಡಲಿ.