Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಹಬ್ಬದ ಸಿಹಿ `ಎಳ್ಳಿನ ಲಡ್ಡು'

ಬೇಕಾದ ಸಾಮಗ್ರಿಗಳು:


ಬಿಳಿ ಎಳ್ಳು - ೪ ಕಪ್
ನೀರು ಸ್ವಲ್ಪ ಪ್ರಮಾಣ
ಬೆಲ್ಲ -೧ ಕಪ್
ತೆಂಗಿನ ಕಾಯಿಯ ಸಣ್ಣ ಹೋಳುಗಳು


ತಯಾರಿಸುವ ವಿಧಾನ:

  • ಬಾಣಲೆಯಲ್ಲಿ ಬಿಳಿ ಎಳ್ಳನ್ನು ಹಾಕಿ ತಿಳಿಕಂದು ಬಣ್ಣಕ್ಕೆ ಬರುವವರೆಗೂ ಹುರಿಯಿರಿ.

  • ಪುಡಿ ಮಾಡಿದ ಬೆಲ್ಲವನ್ನು, ನೀರಿರುವ ಬಾಣಲೆಗೆ ಹಾಕಿ ಕದಡುತ್ತಿರಿ.

  • ಕತ್ತರಿಸಿದ ತೆಂಗಿನ ಕಾಯಿಯ ಸಣ್ಣ ಹೋಳುಗಳನ್ನು ಅದಕ್ಕೆ ಹಾಕಿ, ಸಣ್ಣ ಉರಿಯಲ್ಲಿ ಕದಡುತ್ತಿರಿ

  • ಪಾಕ ಗಟ್ಟಿಯಾಗತೊಡಗಿದಾಗ ಹುರಿದ ಬಿಳಿ ಎಳ್ಳನ್ನು ಹಾಕಿ ಸರಿಯಾಗಿ ಕಲಸಿ.

  • ಸರಿಯಾಗಿ ಮಿಶ್ರಣವಾದ ಮೇಲೆ ಸ್ಟವ್ ಆರಿಸಿ, ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ.

  • ಗಾಳಿಯಾಡದಂತಹ ಡಬ್ಬಿಯಲ್ಲಿ ಶೇಖರಿಸಿದರೆ ವಾರಗಟ್ಟಲೆ ಕೆಡುವುದಿಲ್ಲ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com