|
ತಂದೂರಿ
ರೋಟಿ
ಹೊಂದಿಸಿಕೊಳ್ಳಬೇಕಾದ
ಸಾಮಗ್ರಿಗಳು:
ಗೋಧಿಹಿಟ್ಟು
ಒಂದೂವರೆ ಲೋಟ
(೨೨೫ ಗ್ರಾಂ)
ನೀರು ಸೇರಿಸಿ
ತೆಳ್ಳಗೆ ಮಾಡಿದ ಹಾಲು ೧/೨ ದಿಂದ ೩/೪ ಲೋಟ
ಒಣಗಿದ ಈಸ್ಟ್ ೧/೨
ಚಮಚ
ಪುಡಿ ಉಪ್ಪು
೧/೨ ಚಮಚ
ಅಡುಗೆ ಸೋಡಾ
೧ ಚಿಟಿಕೆ
ಬೇಕಿಂಗ್ ಪೌಡರ್ - ೧
ಚಿಟಿಕೆ
ತಯಾರಿಸುವ ವಿಧಾನ:
ಗೋಧಿಹಿಟ್ಟನ್ನು, ಉಪ್ಪು
ಸೋಡಾ ಮತ್ತು ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿದು ಶುದ್ಧಗೊಳಿಸಿ.
ನೀರು ಸೇರಿಸಿ
ತೆಳ್ಳಗೆ ಮಾಡಿದ ಹಾಲನ್ನು ಬೆಚ್ಚಗಾಗುವವರೆಗೆ ಕಾಯಿಸಿ.
ಹಾಲಿಗೆ ಈಸ್ಟ್‌ನ್ನು
ಸಿಂಪಡಿಸಿ, ಚಮಚದಲ್ಲಿ ಕೆದಕಿ.
ಆ ಪಾತ್ರೆಯ
ಮುಚ್ಚಳ ಹಾಕಿ, ಬೆಚ್ಚನೆಯ ಸ್ಥಳದಲ್ಲಿ ೧೦ ನಿಮಿಷ ಇಡಿ.
ಜರಡಿ ಹಿಡಿದ ಗೋಧಿ ಹಿಟ್ಟನ್ನು
ಅಗಲವಾದ ಪಾತ್ರೆಗೆ ಹಾಕಿ, ಮಧ್ಯದಲ್ಲಿ ತೂತನ್ನು ಮಾಡಿ ಅದರಲ್ಲಿ ಈಸ್ಟನ್ನು
ಹಾಕಿ.
ಒಂದು ನಿಮಿಷ ನಂತರ,
ಕೈಯಲ್ಲಿ ಹಿಟ್ಟನ್ನು ಕೆದಕಿ ( ಆದರೆ ಹಿಟ್ಟನ್ನು ಮಿದಿಯಬೇಡಿ)
ಹಿಟ್ಟನ್ನು ಕಲಸುವಾಗ
ಬೇಕಾದರೆ ಬಿಸಿ ನೀರನ್ನು ಸಿಂಪಡಿಸಿ.
ಹಿಟ್ಟನ್ನು ಅಗಲವಾದ ಪಾತ್ರೆಯಲ್ಲಿ
ಮುಚ್ಚಿಡಿ. ಆದರಿಂದ ಆ ಹಿಟ್ಟು ಊದಲು ಅವಕಾಶವಿರುತ್ತದೆ.
ಎರಡರಿಂದ ಮೂರು
ಗಂಟೆಗಳ ಕಾಲ ಪಕ್ಕಕ್ಕಿರಿಸಿ.
ನಂತರ ಸಮನಾದ
ಗಾತ್ರದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.
ಆ ಉಂಡೆಗಳನ್ನು
ದಪ್ಪ ಚಪಾತಿಗಳಾಗಿ ಲಟ್ಟಿಸಿ.
ಸ್ವಲ್ಪ ನೀರನ್ನು
ಚಪಾತಿಯ ಮೇಲೆ ಸಿಂಪಡಿಸಿ ಸವರಿ.
ಹಿಡಿ ಇರುವ
ಅಲುಮೀನಿಯಂ ಹೆಂಚನ್ನು ಬಿಸಿ ಮಾಡಿ.
ಚಪಾತಿಯನ್ನು ಹೆಂಚಿನ
ಮೇಲೆ ಹಾಕಿ, ನೀರು ಸವರಿದ ಕಡೆ ಹೆಂಚಿಗೆ ಕಚ್ಚಿಕೊಳ್ಳುವಂತೆ ಹಾಕಿ.
ಹೆಂಚನ್ನು
ಮುಚ್ಚಳದಿಂದ ಮುಚ್ಚಿ.
ಸಣ್ಣ ಉರಿಯಲ್ಲಿ
ರೊಟ್ಟಿ ಊದುವವರೆಗೆ ಬೇಯಿಸಿ.
ಹೆಂಚನ್ನು ಮಗುಚಿ,
ಚಪಾತಿಯ ಮತ್ತೊಂದು ಕಡೆ ಬೇಯುವಂತೆ ಬೆಂಕಿಗೆ ಹಿಡಿಯಿರಿ.
ನಂತರ ಮಗಚುವ
ಕೈಯಿಂದ ಚಪಾತಿಯನ್ನು ಹೆಂಚಿನಿಂದ ಬಿಡಿಸಿ, ಒಲೆಯಿಂದ ಕೆಳಗಿಳಿಸಿ.
ಆನಂತರ
ಬಿಸಿಬಿಸಿಯಾದ ರೊಟ್ಟಿ ಬಡಿಸಿರಿ.
ದೋಸೆ ಹೆಂಚು
ಅಥವಾ ನಾನ್‌ಸ್ಟಿಕ್ ಪ್ಯಾನನ್ನು ಬಳಸಬೇಡಿ. ಹಿಡಿಯಿರುವ ಹೆಂಚು ಅತ್ಯವಶ್ಯಕ.
(ಆಮ್ಲೆಟ್ ಹೆಂಚಿದ್ದರೆ
ಒಳ್ಳೆಯದು) ತಯಾರಾಗುವ ರೊಟ್ಟಿಗಳ ಪ್ರಮಾಣ ೭ ರಿಂದ ೮ ರೊಟ್ಟಿಗಳು. |