ಹುಣಸೆಹಣ್ಣಿನ ದೋಸೆ
ಇದೊಂದು ಹೊಸ ಬಗೆಯ ದೋಸೆ. ಒಳ್ಳೆಯ ವಿಷಯ ಎಂದರೆ ದೋಸೆ ಜೀರ್ಣಕಾರಿ.
ಮಕ್ಕಳಿಗಾದರೆ ಸ್ವಲ್ಪ ಜೋಪಾನ. ಹೆಚ್ಚು ದೋಸೆ ತಿಂದರೆ ಹೊಟ್ಟೆ ನೋವಿನ ದೂರು
ಹೇಳಬಹುದು. ಆದರೆ ರುಚಿ ರುಚಿ ದೋಸೆ ಅಪರೂಪಕ್ಕೆ ತಯಾರಿಸಿ ನೋಡಿ.
ಅನುಭವಗಳನ್ನು ನಮಗೆ ಬರೀರಿ !
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು:
ಅಕ್ಕಿ -೨ ಲೋಟ;
ತೊಗರಿಬೇಳೆ- ಕೈಹಿಡಿ ತುಂಬಾ
ತಾಜಾ ತೆಂಗಿನಕಾಯಿ ತುರಿ-೧/೪ ಲೋಟ;
ಕೆಂಪು ಮೆಣಸಿನಕಾಯಿ-೮;
ಸಣ್ಣ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು;
ಉಪ್ಪು - ೨ ಚಮಚ;
ಹುರಿಯಲು ಬೇಕಾಗುವಷ್ಟು ಎಣ್ಣೆ
ಸುಮಾರು ೧೫ ದೋಸೆಗಳನ್ನು ತಯಾರಿಸಬಹುದು.
ತಯಾರಿಸುವ ವಿಧಾನ:
ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ಸಾಕಷ್ಟು, ಬೆಚ್ಚನೆಯ ನೀರಿನಲ್ಲಿ ನೆನೆಸಿರಿ.
ಅವೆರಡನ್ನೂ ಇನ್ನಿತರ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿರಿ.
೨ ಚಮಚ ನೆನೆಸಿದ ಕಡಲೆ ಬೇಳೆ ಮತ್ತು ಸ್ವಲ್ಪ ಕರಿಬೇವಿನ ಸೊಪ್ಪಿನೊಂದಿಗೆ ಹಿಟ್ಟನ್ನು
ರುಬ್ಬಿಕೊಂಡ, ತಕ್ಷಣ ದೋಸೆಯನ್ನು ಮಾಡಿರಿ. ಸುಮಾರು ೧೫ ದೋಸೆಗಳನ್ನು
ತಯಾರಿಸಬಹುದು.
ಬದಲಿ ವಿಧಾನ:
ಅಕ್ಕಿ ಬದಲಾಗಿ ಕುಸುಬಲ ಅಕ್ಕಿಯನ್ನು ಉಪಯೋಗಿಸಬಹುದು. ಅಕ್ಕಿಯನ್ನು ನೆನೆಸಲು ಬೆಚ್ಚನೆಯ
ನೀರನ್ನು ಬಳಸಿರಿ.