ಬಾಳೆದಿಂಡಿನ ಕೋಸಂಬರಿ
ಬೇಕಾದ ಸಾಮಾಗ್ರಿ:
ಬಾಳೆ ದಿಂಡು-೧ ಅಡಿ
ಉದ್ದದ್ದು
ಒಗ್ಗರಣೆಗೆ ಬೇಕಾದದು
ಕಡ್ಲೇಕಾಯಿ ಎಣ್ಣೆ-೧
ಟೀ ಚಮಚ
ಸಾಸಿವೆ-೧ ಟೀ ಚಮಚ
ಉದ್ದಿನಬೇಳೆ-೧ ಟೀ
ಚಮಚ
ಹಸಿಮೆಣಸಿನಕಾಯಿ-೩ ಸಣ್ಣಗೆ
ಹೆಚ್ಚಿದ್ದು
ಮೊಸರು-೨ ಕಪ್
ತಯಾರಿಸುವ ವಿಧಾನ:
-
ದಿಂಡಿನ ಸಿಪ್ಪೆತೆಗೆದು
ದುಂಡಾಗಿ ಕತ್ತರಿಸಿರಿ. ಕತ್ತರಿಸುವಾಗ ಬಂದ ನಾರನ್ನು ಬೇರ್ಪಡಿಸಿ.
-
ದಿಂಡನ್ನು ಸಣ್ಣ ಸಣ್ಣ
ಚೂರಾಗುವ ಹಾಗೆ ಕುಟ್ಟಿ ಮೊಸರಿಗೆ ಹಾಕಿ.
-
ಒಗ್ಗರಣೆ ಮಾಡಿ
ಅದಕ್ಕೆ ದಿಂಡು ಮೊಸರು ಬೆರೆಸಿ ಸರಿಯಾಗಿ ಕಲೆಸಿ.
ಒಗ್ಗರಣೆ ಮಾಡೋದು
ಹೀಗೆ-೧ ಟೀ.ಚಮಚ ಎಣ್ಣೆ ಕಾಯಿಸಿ (ಉರಿ ಸಣ್ಣಗಿರಲಿ)
೧ ಟೀ.ಚಮಚ ಸಾಸಿವೆ
ಹಾಕಿ ಅದು ಚಿಟಿಕುಟ್ಟ ತೊಡಗಿದಾಗ, ೧ ಟೀ.ಚಮಚ ಉದ್ದಿನಬೇಳೆ ಹಾಕಿ,
ಬೇಳೆಯ ಬಣ್ಣ ಕೆಂಪಗೆ ತಿರುಗಿದಾಗ ಹಸಿಮೆಣಸಿನಕಾಯಿ ಹಾಕಿ, ಆಗಾಗ
ಕದಡುತ್ತಿರಿ.