|
ತರಹೇವಾರಿ ಚಪಾತಿಗಳು
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು:
ಗೋಧಿ ಹಿಟ್ಟು-೨ ಲೋಟ
ನೀರು-೨ ಲೋಟ
ಉಪ್ಪು-೧ ಚಮಚ
ಎಣ್ಣೆ-೩ ಚಮಚ
ತಯಾರಿಸುವ ವಿಧಾನ:
-
ಪಾತ್ರೆಯೊಂದರಲ್ಲಿ ಉಪ್ಪು ಮತ್ತು ಗೋಧಿ ಹಿಟ್ಟನ್ನು ಕಲಸಿ.
-
ಒಂದು ಚಮಚ ಎಣ್ಣೆಯನ್ನು ಸೇರಿಸಿ ನೀರನ್ನು ಬಿಸಿ ಮಾಡಿ.
-
ನೀರು ಕುದಿಯಲು ಪ್ರಾರಂಭವಾದಾಗ, ಚಪ್ಪಟೆಯಾದ ಮರದ ಸೌಟನ್ನು
ಉಪಯೋಗಿಸಿ ಕಲಸಿರಿ. ಸ್ವಲ್ಪ ಕಾಲ ಅದನ್ನು ಮುಚ್ಚಿಡಿ.
-
ಕಲಸಿದ ಹಿಟ್ಟು ಸಾಕಷ್ಟು ತಣ್ಣಗಾದ ನಂತರ, ಕೈಗೆ ಎಣ್ಣೆಯನ್ನು ಸವರಿಕೊಂಡು
ಹಿಟ್ಟನ್ನು ಚೆನ್ನಾಗಿ ಮಿದಿಯಬೇಕು.
-
ಬೇಕಾದರೆ ಕಲಸುವಾಗ ಸ್ವಲ್ಪ ನೀರನ್ನು ಸಿಂಪಡಿಸಿಕೊಳ್ಳಿ.
-
ಸಮವಾದ ಸುಮಾರು ಗಾತ್ರದ ಉಂಡೆಗಳನ್ನು ಸಿದ್ದಮಾಡಿಟ್ಟುಕೊಳ್ಳಿ.
-
ಈ ಉಂಡೆಗಳನ್ನು ಒಂದರ ನಂತರ ಒಂದರಂತೆ ಸ್ವಲ್ಪ ಹಿಟ್ಟನ್ನು ಬಳಸಿ ಲಟ್ಟಿಸಿರಿ.
-
ದೋಸೆ ಹೆಂಚನ್ನು ಬಿಸಿ ಮಾಡಿ ಅದರ ಮೇಲೆ ಲಟ್ಟಿಸಿರುವ ಚಪಾತಿಯನ್ನು ಹಾಕಿರಿ.
-
ಚಪಾತಿ ಊದಿದ ನಂತರ, ಅದನ್ನು ತಿರುವಿ ಹಾಕಿರಿ. ಎರಡು ಕಡೆಯಲ್ಲೂ ಕಂದು ಬಣ್ಣದ
ಚುಕ್ಕೆಗಳಾಗುವವರೆಗೆ ಚೆನ್ನಾಗಿ ಬೇಯಿಸಿರಿ.
-
ಈ ಚಪಾತಿಗಳು, ಎಣ್ಣೆ ಬಳಸದಿದ್ದರೂ ಮೃದುವಾಗಿರುತ್ತವೆ.
ಮೇಲಿನ ಅಳತೆಯಲ್ಲಿ
ಸುಮಾರು ೧೨ ರಿಂದ ೧೪ ಚಪಾತಿಗಳನ್ನು ಮಾಡಬಹುದು.
ಬದಲಿ ವಿಧಾನಗಳು:
ಮೈದಾ ಚಪಾತಿ - ಗೋಧಿ ಹಿಟ್ಟಿನ ಬದಲಾಗಿ ಮೈದಾಹಿಟ್ಟನ್ನು ಬಳಸಿರಿ, ಪ್ರತಿಯೊಂದು
ಲೋಟ ಮೈದಾಹಿಟ್ಟಗೆ ಒಂದೂವರೆ ಲೋಟದಂತೆ ನೀರನ್ನು ಬಳಸಿ.
ಸಿಹಿ ಚಪಾತಿ - ಗೋಧಿ ಹಿಟ್ಟನ್ನು ಸಕ್ಕರೆ ಕರಗಿಸಿದ ಹಾಲಿನಲ್ಲಿ ಕಲಸಿ.
ರವೆ ಚಪಾತಿ - ಸಣ್ಣ ರವೆಯನ್ನು ಕೂಡಾ ಬಳಸಿ ಚಪಾತಿ ಮಾಡಬಹುದು. ೧ ಲೋಟ
ರವೆಗೆ, ಕಾಲು ಲೋಟ ನೀರನ್ನು ಬಳಸಿರಿ. ಅತ್ಯುತ್ತಮವಾದ ಪರಿಣಾಮಕ್ಕಾಗಿ ಚಿರೋಟಿ ರವೆ
ಬಳಸಿ (ಬಾಂಬೆ ರವೆಯನ್ನು ಕೂಡಾ ಬಳಸಬಹುದು).
ಹಾಲಿನ ಪರೋಟಗಳು- ಸ್ವಲ್ಪ ಬೆಚ್ಚನೆ ಹಾಲು, ತಾಜಾ ಕೆನೆ ಮತ್ತು ಸ್ವಲ್ಪ
ಅಡುಗೆ ಸೋಡವನ್ನು ಮೈದಾ ಹಿಟ್ಟಗೆ ಬೆರೆಸಿ, ಮತ್ತು ಅದರಲ್ಲಿ ಸ್ವಲ್ಪ ದಪ್ಪಗೆ ಚಪಾತಿಗಳನ್ನು
ಮಾಡಿ. |