Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ರವೆ ಇಡ್ಲಿ

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು :

ಸಣ್ಣ ರೆವೆ-ಲೋಟಾ ತುಂಬಾ (ಬಾಂಬೆ ರವೆ ಅಥವಾ ಚಿರೊಟಿ ರವೆ)

ಎಣ್ಣೆ ಮತ್ತು ತುಪ್ಪ - ೫ಚಮಚ

ಅರೆದ ಹಸಿರು ಮೆಣಸಿನಕಾಯಿ - ೧೦

ಗಟ್ಟಿಯಾದ ಹುಳಿ ಮೊಸರು - ೨ಲೋಟ

ತೆಳ್ಳಗೆಕತ್ತರಿಸಿದ ಈರುಳ್ಳಿ - ೧/೨ ಲೋಟ

ಕತ್ತರಿಸಿದ ಕೊತ್ತಂಬರಿ ಸೊಪ್ಪು - ೨ ಚಮಚ ಮತ್ತು ಕರಿಬೇವು ೨ ಚಮಚ

ಬೇಯಿಸಿದ ಬಟಾಣಿ - ೧/೪ ಲೋಟ (ಬೇಕಾದರೆ)

ಪುಡಿ ಉಪ್ಪು - ಒಂದೂವರೆ ಚಮಚ

ಅಡಿಗೆ ಸೋಡಾ - ೧/೨ ಚಮಚ

 

ಅಲಂಕಾರಕ್ಕೆ :

ಕ್ಯಾರೆಟ್ ತುರಿ ೨ ಚಮಚ

ತಾಜಾ ತೆಂಗಿನಕಾಯಿತುರಿ ೨ ಚಮಚ

 

ಒಗ್ಗರಣೆಗೆ:

ಸಾಸಿವೆ - ೧/೪ ಚಮಚ

ಉದ್ದಿನ ಬೇಳೆ - ೧/೨ ಚಮಚ

ಕಡಲೆಬೇಳೆ - ೧ ಚಮಚ

ಮುರಿದ ಗೋಡಂಬಿ - ೧/೨ ಚಮಚ

ಮೇಲಿನ ಅಳತೆಯಲ್ಲಿ ಸುಮಾರು ೨೪ ಇಡ್ಲಿಗಳನ್ನು ತಯಾರಿಸಬಹುದು.

 

ತಯಾರಿಸುವ ವಿಧಾನ:

ಹುರಿದ ರವೆಯನ್ನು, ಗಡ್ಡೆ ಕಟ್ಟದಂತೆ ಮೊಸರಿನಲ್ಲಿ ಚೆನ್ನಾಗಿ ಕಲಸಿ ಪ್ರತ್ಯೇಕವಾಗಿಟ್ಟುಕೊಳ್ಳಿ.

ಎಣ್ಣೆಯನ್ನು ಬಿಸಿಮಾಡಿ, ಒಗ್ಗರಣೆ ಹಾಕಿ, ಈರುಳ್ಳಿ ಸೇರಿಸಿ.

 

ಮೇಲಿನ ಮಿಶ್ರಣವನ್ನು ೨ರಿಂದ ೩ ನಿಮಿಷ ಸುಮಾರಾದ ಉರಿಯಲ್ಲಿ ಹುರಿಯಿರಿ.

ಇದನ್ನು ಮೊಸರು ಮತ್ತು ರವೆ ಮಿಶ್ರಣದ ಮೇಲೆ ಸುರಿಯಿರಿ. ಉಪ್ಪು, ಅರೆದ ಮೆಣಸಿನಕಾಯಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಸೋಡಾ ಬೆರೆಸಿ.

 

ಚೆನ್ನಾಗಿ ಕಲಸಿ , ತಕ್ಷಣ ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಸುರಿಯಿರಿ. ೭ ನಿಮಿಷ ಹಬೆಯಲ್ಲಿ ಬೇಯಿಸಿರಿ (ಬೇಕಾದರೆ ಕ್ಯಾರಟ್ ತುರಿ ಮತ್ತು ತೆಂಗಿನಕಾಯಿ ತುರಿಯನ್ನು ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಉದುರಿಸಿ, ನಂತರ ಕಲಸಿದ ರವೆಯನ್ನು ಅದರ ಮೇಲೆ ಸುರಿಯಿರಿ.)

 

ವಿ.ಸೂ: ಉತ್ತಮವಾದ ಪರಿಣಾಮಕ್ಕಾಗಿ, ಪ್ರಜರ್ ಕುಕ್ಕರಿನಲ್ಲಿ ನೀರನ್ನು ಬಿಸಿ ಮಾಡಿ, ನಂತರ ಅದರಲ್ಲಿ ಇಡ್ಲಿ ತಟ್ಟೆಗಳನ್ನಿರಿಸಿರಿ.

 

ಇನ್ನೂ ಹೆಚ್ಚು ಇಡ್ಲಿಗಳನ್ನು ಬೇಯಿಸಬೇಕಾದರೆ, ಒಂದೇ ಸಲ ಎಲ್ಲಾ ಹಿಟ್ಟನ್ನು ಕಲಸಬೇಡಿರಿ. ಕಲಸಿಕೊಂಡ ಹಿಟ್ಟನ್ನು ೧೦ ರಿಂದ ೧೫ ನಿಮಿಷದಲ್ಲಿ ಬೇಯಿಸಬೇಕು. ಬಹಳ ಕಾಲ ಬೇಯಿಸಿದರೆ, ಇಡ್ಲಿಗಳು ಅಂಟುವಂತಾಗಿ ಚೆನ್ನಾಗಿ ಬರುವುದಿಲ್ಲ.

 

ಬದಲಿ ವಿಧಾನ :

೧. ವರ್ಮಿಸಿಲಿ ಇಡ್ಲಿ; (ಶ್ಯಾವಿಗೆ ಇಡ್ಲಿ) ರವೆ ಇಡ್ಲಿಗೆ ಬಳಸುವ ಪ್ರಮಾಣದಲ್ಲೇ ಎಲ್ಲಾ ಪದಾರ್ಥಗಳನ್ನು ವರ್ಮಿಸಿಲಿ ಇಡ್ಲಿಗೆ ಬಳಸಬಹುದು ವರ್ಮಿಸಿಲಿ( ಶ್ಯಾವಿಗೆ) ದಪ್ಪಗಿದ್ದರೆ, ಅದಕ್ಕೆ ಸರಿಹೊಂದುವಷ್ಟು ಗಟ್ಟಿ ಮೊಸರನ್ನು ಬಳಸಿರಿ. ರವೆ ಮತ್ತು ವರ್ಮಿಸಿಲಿ ಎರಡನ್ನೂ ಸಮವಾಗಿ ಬೆರೆಸಬಹುದು.

 

೨. ಸಾಂಬಾ ಗೋಧಿ ರವೆಯನ್ನೂ ಬಳಸಬಹುದು. ಇದಕ್ಕೆ ಹೆಚ್ಚು ಮೊಸರನ್ನು ಉಪಯೋಗಿಸಿರಿ, ಮೊಸರಿನಲ್ಲಿ ೧೦ ರಿಂದ ೧೫ ನಿಮಿಷ ನೆನೆಸಿ, ನಂತರ ಹಬೆಯಲ್ಲಿ ಬೇಯಿಸಿರಿ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com