ಸಾರಿನ ಪುಡಿ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಕೊತ್ತಂಬರಿ ಬೀಜ - ೧ ಪಾವು
(ಬ್ಯಾಡಿಗೆ) ಒಣಮೆಣಸಿನಕಾಯಿ - ೩ ಹಿಡಿ
ಮೆಂತ್ಯ - ೨ ಟೀ ಚಮಚ
ಜೀರಿಗೆ - ೧ ಟೀ ಚಮಚ
ಸಾಸಿವೆ - ಮುಕ್ಕಾಲು ಟೀ ಚಮಚ
ಮೆಣಸು - ಮುಕ್ಕಾಲು ಟೀ ಚಮಚ
ಅರಿಶಿನ ಬೇರು - ೧ ಚಿಟುಕೆ
ಪುಡಿ ಇಂಗು - ೧ ಟೀ ಚಮಚ
ಕರಿಬೇವು - ೧೦ ಕಡ್ಡಿ
ಎಣ್ಣೆ - ೨ ಕಾಲು ಚಮಚ
ತಯಾರಿಸುವ ವಿಧಾನ:
ಕೊತ್ತಂಬರಿ ಬೀಜವನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ.
ಮುಕ್ಕಾಲು ಟೀ. ಚಮಚ ಎಣ್ಣೆ ಹಾಕಿ ಮೆಣಸು ಚಿಟಗುಟ್ಟುವವರೆಗೂ
ಹುರಿಯಿರಿ.
ಮೆಂತ್ಯ ಹುರಿಯಿರಿ, ಸ್ವಲ್ಪ ಕೆಂಪಗಾಗಬೇಕು. ಘಂ ಅಂತಾ ವಾಸನೆ
ಬರುವವರೆಗೂ ಹುರಿಯಿರಿ.
ಜೀರಿಗೆ ಸ್ವಲ್ಪ ಕಪ್ಪು ಬಣ್ಣ ಬರುವವರೆಗೆ ಹುರಿಯಿರಿ. ಸಾಸಿವೆ
ಚಿಟಗುಟ್ಟುವವರೆಗೂ ಹುರಿದುಕೊಳ್ಳಿ. ಕರಿಬೇವಿನ ಎಲೆಗಳನ್ನು
ಗರಿಗರಿಯಾಗುವಂತೆ ಹುರಿಯಿರಿ. ಬಾಣಲೆಗೆ ಒಂದೂವರೆ ಟೀ ಚಮಚ
ಎಣ್ಣೆಯನ್ನು ಹಾಕಿ ಮೆಣಸಿನಕಾಯಿಯನ್ನು ಗರಿಗರಿಯಾಗಿ ಹುರಿಯಿರಿ.
ಬಿಸಿ ಇರುವಾಗಲೇ ಸ್ವಲ್ಪ ಇಂಗು ಹಾಗೂ ಅರಿಶಿನಪುಡಿ ಹಾಕಿಡಿ.
ಹುರಿದುಕೊಂಡ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ
ಪುಡಿಮಾಡಿ. ನಂತರ ಜರಡಿ ಹಿಡಿದುಕೊಳ್ಳಿರಿ.
ಇನ್ನಷ್ಟು
ಮಜ್ಜಿಗೆ ಹುಳಿ
ಕೊಬ್ಬರಿ ಮಿಠಾಯಿ
ಮೈಸೂರು ಪಾಕ್
ರಸ ಮಲಾಯಿ
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ