ಹಾಲು - ೫೦೦ ಗ್ರಾಂ
ನಿಂಬೆರಸ - ೨ ಟೀ ಚಮಚ
ಹಾಲಿನಪುಡಿ - ೩ ರಿಂದ ೪ ಟೀ ಚಮಚ
ಸಕ್ಕರೆ - ೧ ರಿಂದ ೨ ಬಟ್ಟಲು
ರಸ ತಯಾರಿಕೆ
ಏಲಕ್ಕಿ ಪುಡಿ - ೧ ಟೀ ಚಮಚ
ಗೇರುಬೀಜ - ೫ ರಿಂದ ೮
ಬದಾಮಿ - ೫ ರಿಂದ ೮
ಪಿಸ್ತಾ - ೧೫ ರಿಂದ ೨೦
ನೀರಾದ ಹಾಲು - ೩೦೦ ಮಿ. ಲೀ
ಸಕ್ಕರೆ - ೧ ರಿಂದ ೨ ಬಟ್ಟಲು
ಮಲೈ ತಯಾರಿಕೆ ವಿಧಾನ:
ಬಾಣಲೆಯಲ್ಲಿ ಹಾಲು ಹಾಕಿ ಕಾಯಿಸಿ. ಕುದಿಯಲು ಪ್ರಾರಂಭಿಸಿದಾಗ ನಿಂಬೆರಸ
ಬೆರೆಸುತ್ತಾ ಹೋಗಿ ಹಾಲು ನೀರು ಬೇರ್ಪಡುತ್ತಾ ಹೋಗುತ್ತದೆ.
ಉರಿಯನ್ನು ತಕ್ಕಿಸಿ ಹತ್ತು ನಿಮಿಷ ಆರಲು ಬಿಡಿ. ನೀರಿನ ಅಂಶವನ್ನು ಶೋಧಿಸಿ
ಗಟ್ಟಿಯಾದದನ್ನು ಒಂದು ಮಸ್ಲಿನ್ ಬಟ್ಟೆ ಅಥವಾ ಹತ್ತಿ ಬಟ್ಟೆಯಲ್ಲಿ ಹಾಕಿ
ಬಿಗಿಯಾಗಿ ಕಟ್ಟಿಡಿ.
ಪನೀರ್ ತಯಾರಾದ ಮೇಲೆ ಹಾಲಿನ ಪುಡಿ ಅದಕ್ಕೆ ಬೆರೆಸಿ ಗುಂಡಗೆ
ಉಂಡೆ ಮಾಡಿಕೊಳ್ಳಿ.
ಸಕ್ಕರೆಯನ್ನು ಬಾಣಲೆಯಲ್ಲಿ ಹಾಕಿ ನೀರು ಬೆರೆಸಿ ಪಾಕ ಮಾಡಿಕೊಳ್ಳಿ.
ಪನೀರ್ ಉಂಡೆಗಳನ್ನು ಪಾಕಕ್ಕೆ ಹಾಕಿ ೨ ರಿಂದ ೧೦ ನಿಮಿಷ ಕರಿಯಿರಿ. ನಿಧಾನವಾಗಿ
ಉಂಡೆಗಳು ಹೊಡೆಯದಂತೆ ತೆಗೆಯಿರಿ.
ರಸ ತಯಾರಿಕೆ ವಿಧಾನ:
ಗೋಡಂಬಿ, ಬಾದಾಮಿ, ಪಿಸ್ತಾವನ್ನು ಚೂರು ಮಾಡಿಕೊಂಡು ಹಾಲಿನೊಂದಿಗೆ
ಬೆರೆಸಿ.
ಬಾಣಲೆಗೆ ಎಲ್ಲವನ್ನು ಹಾಕಿ ನಿಧಾನಗತಿಯಲ್ಲಿ ಕಾಯಿಸಿ. ಆಗಾಗ
ಕದಡುತ್ತಿರಿ.
ಮಿಶ್ರಣವು ಗಟ್ಟಿಯಾಗುವವರೆಗೂ ಕಾಯಿಸಿ. ನಂತರ ಆರಲು ಬಿಡಿ.
ಪನೀರ್ ಮಲೈಗಳನ್ನು ಬೆರೆಸಿ ಮೇಲೆ ಪಿಸ್ತಾವನ್ನು ಹಾಕಿ ಅಲಂಕರಿಸಿ.
ಇನ್ನಷ್ಟು
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ
ಗಸಗಸೆ ಪಾಯಸ