ರಾಯತ (ಕಾಯಿ ಸಾಸಿವೆ)
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಜೀರಿಗೆ -೩/೪ ಟೀ ಚಮಚ
ಸಾಸಿವೆ -೧ ಟೀ ಚಮಚ
ಹಸಿಮೆಣಸಿನಕಾಯಿ -ಸಣ್ಣಗಾತ್ರ ೮ / ದೊಡ್ಡದು ೫
ಇಂಗು -೧/೪ ಟೀ ಚಮಚ
ತೆಂಗಿನಕಾಯಿ ತುರಿ -೧ ಬಟ್ಟಲು
ರುಚಿಕೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ
ಎಣ್ಣೆ -೧ ಟೀ ಚಮಚ
ಸಾಸಿವೆ -೧ ಟೀ ಚಮಚ
ಮೊಸರು -೨೦೦ ಗ್ರಾಂ
ತರಕಾರಿ -ಸೌತೆಕಾಯಿ ಅಥವಾ ಪಡವಲಕಾಯಿ
ಒಗ್ಗರಣೆಗೆ ಸ್ವಲ್ಪ ಕಡಲೇಬೇಳೆ, ಉದ್ದಿನಬೇಳೆ ಅವಶ್ಯವಿದ್ದರೆ
ಬಳಸಬಹುದು
ತಯಾರಿಸುವ ವಿಧಾನ:
ಹಸಿ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ.
ಪಡವಲಕಾಯಿ ಬಳಸಿದರೆ ಅದನ್ನು ಸಣ್ಣಗೆ ಹೆಚ್ಚಿ ಎಣ್ಣೆ ಸಾಸಿವೆ
ಒಗ್ಗರಣೆಯಲ್ಲಿ ಸ್ವಲ್ಪ ಬೇಯಿಸಿ.
ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ, ಉಪ್ಪು, ಇಂಗು, ತೆಂಗಿನ ತುರಿ
ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
ಮೊಸರಿಗೆ ಎಲ್ಲಾ ಮಿಶ್ರಣವನ್ನು, ತರಕಾರಿಯನ್ನು ಹಾಕಿ ಸರಿಯಾಗಿ
ಬೆರೆಸಿ.
ಊಟದ ಜೊತೆ ಅಥವಾ ತಿಂಡಿಯ ಜೊತೆಗೆ ಬಡಿಸಬಹುದು.
ಇನ್ನಷ್ಟು
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ
ಗಸಗಸೆ ಪಾಯಸ