Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಆಲೂ ಮೆಂತ್ಯಾ ರೊಟ್ಟಿ

 

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು:

 

ಗೋಧಿ ಹಿಟ್ಟು -೨ ಲೋಟ ತುಂಬಾ

ಆಲೂಗೆಡ್ಡೆ- ೧ ( ಸುಮಾರು ಗಾತ್ರ )

೩ರಿಂದ ೪ ಮೆಂತ್ಯ ಸೊಪ್ಪು -೨ಕಟ್ಟು

ತಾಜಾ ಹಸಿ ಬಟಾಣಿ -೧/೪

ಲೋಟ ಉಪ್ಪು -೨ ಚಮಚ ಕೆಂಪು ಮೆಣಸಿನಪುಡಿ

೧ ಚಮಚ ಹುರಿಯಲು ಎಣ್ಣೆ.

   

 

ತಯಾರಿಸುವ ವಿಧಾನ :

  •  ಕುಕ್ಕರಿನಲ್ಲಿ ಆಲೂಗಡ್ಡೆಯನ್ನು ಬೇಯಿಸಿರಿ, ಆಲೂಗಡ್ಡೆ ಬೆಚ್ಚಗಿರುವಂತೆಯೇ ಸುಲಿದು, ಪುಡಿ ಮಾಡಿಕೊಳ್ಳಿರಿ.

  •  ಬಟಾಣಿಯನ್ನು ಬೇಯಿಸಿ ಪುಡಿ ಮಾಡಿರಿ.

  •  ಮೆಂತ್ಯ ಸೊಪ್ಪನ್ನು ಕತ್ತರಿಸಿರಿ, ಹಿಟ್ಟಿಗೆ ಉಪ್ಪು ಮತ್ತು ಕೆಂಪು ಮೆಣಸಿನ ಪುಡಿಯೊಂದಿಗೆ ಬೆರೆಸಿರಿ.

  •  ಸ್ವಲ್ಪ ನೀರು ಅಥವಾ ಹಾಲನ್ನು ಸಿಂಪಡಿಸಿ ಹಿಟ್ಟನ್ನು ಗಟ್ಟಿಯಾಗಿ ಕಲಸಿರಿ.

  •  ಹಿಟ್ಟನ್ನು ತಟ್ಟಿ, ಚೆನ್ನಾಗಿ ಹಲವಾರು ಬಾರಿ ಮಿದಿಯಿರಿ.

  •  ಹಿಟ್ಟಿನಿಂದ ದಪ್ಪ ರೊಟ್ಟಿಗಳನ್ನು ಲಟ್ಟಿಸಿ ಬಿಸಿ ಹೆಂಚಿನ ಮೇಲೆ ಹಾಕಿ ಎಣ್ಣೆಯನ್ನು ಅದರ ಮೇಲ್ಭಾಗಕ್ಕೆ ಸವರಿ ಬಿಸಿಯಾಗಿ ಬಡಿಸಿರಿ.

 ಬದಲಿ ವಿಧಾನ :

 

ಮೆಂತ್ಯ ಸೊಪ್ಪಿನ ಬದಲಾಗಿ ಪುದಿನ ಸೊಪ್ಪನ್ನು ಕತ್ತರಿಸಿ, ಬೆರೆಸಬಹುದು.

ಮೇಲಿನ ಅಳತೆಯ ಸಾಮಾಗ್ರಿಗಳೊಂದಿಗೆ ಸುಮಾರು ೧೨ ರೊಟ್ಟಿಗಳನ್ನು ತಯಾರಿಸಬಹುದು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com