Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 07 September 2006 12:28 PM

ಹಪ್ಪಳ ತುಪ್ಪದ ಅನ್ನ

ತಯಾರಿಸಲು ಬೇಕಾದ ಸಾಮಾಗ್ರಿಗಳು:

ಅಕ್ಕಿ - ೧ ಪಾವು

ಉದ್ದಿನ ಹಪ್ಪಳ - ೧೦

ಎಣ್ಣೆ - ೩ಟೀ.ಚಮಚ

ತುಪ್ಪ - ೧ ಟೀ.ಚಮಚ

ಸಾಸಿವೆ - ೧ ಟೀ.ಚಮಚ

ಕಡಲೆಬೇಳೆ - ೧ ಟೀ.ಚಮಚ

ಉದ್ದಿನಬೇಳೆ - ೧ ಟೀ.ಚಮಚ

ಕಡಲೆಬೀಜ (ಸಿಪ್ಪೆ ತೆಗೆದು ಹುರಿದು ಹಾಕಿದ್ದು) - ೧ ಟೀ.ಚಮಚ

ಕರಿಬೇವು - ೧ ಕಡ್ಡಿ

ಒಣ ಮೆಣಸಿನಕಾಯಿ - ದೊಡ್ಡಗಾತ್ರದ್ದು ೩

ತೆಂಗಿನ ಕಾಯಿ ತುರಿ -ಅರ್ಧ ಬಟ್ಟಲು

 

ತಯಾರಿಸುವ ವಿಧಾನ:

ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರುದುರಾಗಿ ಬೇಯಿಸಿ ಅನ್ನ ಮಾಡಿ ಆರಲು ಬಿಡಿ.

ಉದ್ದಿನ ಹಪ್ಪಳವನ್ನು ಕರಿದು ಸಣ್ಣ ಚೂರು ಮಾಡಿಟ್ಟುಕೊಳ್ಳಿ.

 

ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ಅದು ಚುಟುಕುಟ್ಟ ತೊಡಗಿದಾಗ ಎಲ್ಲಾ ಬೇಳೆಗಳನ್ನು ಹಾಕಿ, ಸ್ವಲ್ಪ ಇಂಗು, ಒಣ ಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಪುಡಿಮಾಡಿಕೊಳ್ಳಿ

ಒಗ್ಗರಣೆಗೆ ಅನ್ನ ತೆಂಗಿನತುರಿ, ಉಪ್ಪು ಹಾಕಿ ಕಲಸಿ

ನಂತರ ಕರೆದ ಹಪ್ಪಳವನ್ನು ಚೂರು ಚೂರು ಮಾಡಿ ಹಾಕಿ ಕಲಸಿ. ಬಡಿಸುವ ಮೊದಲು ಈ ಹಪ್ಪಳವನ್ನು ಅನ್ನಕ್ಕೆ ಬೆರಸಿ ಇಲ್ಲವಾದರೆ ಹಪ್ಪಳ ಮೆತ್ತಗಾಗುತ್ತದೆ.

 

ಇನ್ನಷ್ಟು

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

ಗಸಗಸೆ ಪಾಯಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com