ಪಲ್ಯದನ್ನ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಅಕ್ಕಿ - ೧ ಪಾವು
ಪಲ್ಯದ ಪುಡಿಗಾಗಿ
ಕಡಲೇಬೇಳೆ - ೨ ಟೀ ಚಮಚ
ಉದ್ದಿನಬೇಳೆ - ೨ ಟೀ ಚಮಚ
ಒಣಕೊಬ್ಬರಿ - ೧ ಬಟ್ಟಲು
ಒಣಮೆಣಸಿನಕಾಯಿ - ೧೦
ಚಕ್ಕೆ - ಅರ್ಧ ಚೂರು
ಕೊತ್ತಂಬರಿ ಬೀಜ - ಒಂದೂವರೆ ಟೀ. ಚಮಚ
ಪಲ್ಯಕ್ಕೆ ಬೇಕಾದ ತರಕಾರಿ
ಬದನೆಕಾಯಿ, ಹುರುಳಿಕಾಯಿ, ಆಲೂಗೆಡ್ಡೆ, ಗೋರಿಕಾಯಿ (ಯಾವುದಾದರೂ
ಒಂದು)
ತಯಾರಿಸುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರುದುರಾಗಿ ಬೇಯಿಸಿ ಅನ್ನ ಮಾಡಿ
ಆರಲು ಬಿಡಿ.
ಪುಡಿ ತಯಾರಿಕೆ ವಿಧಾನ:
ಪುಡಿಗೆ ಬೇಕಾದ ಸಾಮಾಗ್ರಿಗಳನ್ನು ಬಾಣಲೆಗೆ ಹಾಕಿ ಹುರಿದು
ಪುಡಿಮಾಡಿಟ್ಟುಕೊಳ್ಳಿ. ಒಣಕೊಬ್ಬರಿಯನ್ನು ತುರಿದು ಹಾಕಿ ನಂತರ ಪುಡಿಯನ್ನು
ಮಿಕ್ಸಿಗೆ ಹಾಕಿ ತರಿತರಿ ಇರುವ ಹಾಗೆ ಪುಡಿಮಾಡಿಕೊಳ್ಳಿ.
ಮೇಲೆ ಹೇಳಿದ ಯಾವುದಾದರೂ ತರಕಾರಿಯನ್ನು ಚೆನ್ನಾಗಿ
ತೊಳೆದು ಬೇಯಿಸಿಕೊಳ್ಳಿ ಬೆಂದ ತರಕಾರಿಗೆ ಸ್ವಲ್ಪ ಪುಡಿಯನ್ನು ಹಾಕಿ
೧೦ ನಿಮಿಷ ಬೇಯಿಸಿ ನಂತರ ಅನ್ನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ಎಲ್ಲವನ್ನು ಚೆನ್ನಾಗಿ ಕಲಸಿ ೫-೧೦ ನಿಮಿಷ ಬೇಯಿಸಿ.
ಹೆಚ್ಚಿಗೆ ತರಕಾರಿ ಉಪಯೋಗಿಸಿದಾಗ ಆಲೂಗೆಡ್ಡೆ, ದಪ್ಪಮೆಣಸಿನಕಾಯಿಯನ್ನು
ತೆಳ್ಳಗೆ ಉದ್ದುದ್ದವಾಗಿ ಹೆಚ್ಚಿ, ಹಸಿ ಬಟಾಣಿಯನ್ನು ಒಗ್ಗರಣೆಗೆ ಹಾಕಿ
ಚೆನ್ನಾಗಿ ಬಾಡಿಸಿ ಉಪ್ಪು ಬೆರಸಿ ಕಲಸಿ.
ಇನ್ನಷ್ಟು
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ
ಗಸಗಸೆ ಪಾಯಸ