ಪಕೋಡ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಕಡಲೆಹಿಟ್ಟು - ಎರಡೂವರೆ ಕಪ್
ಸಣ್ಣರವೆ - ಒಂದು ಕಪ್
ಈರುಳ್ಳಿ - ಅರ್ಧ ಕೆ.ಜಿ
ಕೊತ್ತಂಬರಿಸೊಪ್ಪು - ಒಂದು ಕಪ್
ಕರಿಯಲು ಎಣ್ಣೆ
ಹಸಿಮೆಣಸಿನ ಕಾಯಿ - ೧೫ ರಿಂದ ೨೦
ರುಚಿಗೆ ತಕ್ಕಷ್ಟು ಇಂಗು, ಉಪ್ಪು
ತಯಾರಿಸುವ ವಿಧಾನ:
ಸಣ್ಣ ರವೆಯನ್ನು ಸ್ವಲ್ಪ ರವೆಯನ್ನು ಹುರಿಯಿರಿ.
ಈರುಳ್ಳಿಯನ್ನು ಸಣ್ಣಗೆ ಉದ್ದುದ್ದವಾಗಿವಾಗಿ ಹೆಚ್ಚಿ.
ಕಡಲೆಹಿಟ್ಟು, ಹುರಿದ ರವೆ, ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ
ಕೊತ್ತಂಬರಿಸೊಪ್ಪು, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಇಂಗು, ಉಪ್ಪು
ಎಲ್ಲವನ್ನು ಬೆರೆಸಿ
ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಚುಕಿಸಬಹುದು.
ತಕ್ಕಷ್ಟು ಎಣ್ಣೆ ಕಾಯಿಸಿ ಬೇಕಾದ ಮಿಶ್ರಣವನ್ನು ಕೈಯಲ್ಲಿ ಹಿಡಿದು
ಅದುಮಿರಿ ಬೇಕಾದ ಆಕಾರದಲ್ಲಿ ಕರಿಯಿರಿ.
ಕೆಂಪಗೆ ಗರಿ ಗರಿಯಾಗಿರುವಂತೆ ಕರಿಯಿರಿ.