|
|
|
Monday, 04 September 2006 04:46 PM |
|
ಮೆಂತ್ಯದ
ಪೂರಿ
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು:
ಮೆಂತ್ಯಸೊಪ್ಪು -೬ ಕಟ್ಟು
ಹಸಿರು ಮೆಣಸಿನಕಾಯಿ -೫
ಗೋಧಿಹಿಟ್ಟು -೩ ಲೋಟ
ಪುಡಿ ಉಪ್ಪು- ೨ ಚಮಚ
ಪೂರಿಯನ್ನು ಕರಿಯಲು ಬೇಕಾಗುವಷ್ಟು ಎಣ್ಣೆ
ತಯಾರಿಸುವ ವಿಧಾನ:
-
ಮೆಂತ್ಯಸೊಪ್ಪನ್ನು ತೊಳೆದು, ಕತ್ತರಿಸಿ.
-
ಹಸಿರು ಮೆಣಸಿನಕಾಯಿಯೊಂದಿಗೆ ಮೆಂತ್ಯಸೊಪ್ಪನ್ನು, ನೀರು ಬೆರೆಸದೆ ನುಣ್ಣಗೆ
ರುಬ್ಬಿಕೊಳ್ಳಿ.
-
ತಕ್ಷಣ ಅದನ್ನು ಉಪ್ಪು ಬೆರೆಸಿದ ಗೋಧಿಹಿಟ್ಟಿಗೆ ಸೇರಿಸಿ.
-
ಸಾಕಷ್ಟು ನೀರನ್ನು ಸಿಂಪಡಿಸಿ, ಹಿಟ್ಟನ್ನು ಗಟ್ಟಿಯಾಗಿ ಕಲಸಿ.
-
ಹಿಟ್ಟಿನಿಂದ ಪೂರಿಗಳನ್ನು ಲಟ್ಟಿಸಿ ಬಿಸಿ ಎಣ್ಣೆಯಲ್ಲಿ ಕರಿಯಿರಿ.
ಮೆಂತ್ಯಸೊಪ್ಪನ್ನು ರುಬ್ಬಿದ ನಂತರ, ತಕ್ಷಣ ಹಿಟ್ಟಿಗೆ ಬೆರೆಸದಿದ್ದರೆ ಅದು
ಕಹಿಯಾಗುತ್ತದೆ. ಪಾತ್ರೆಯೊಂದರಲ್ಲಿ ಹಿಟ್ಟನ್ನು ಸಿದ್ದಪಡಿಸಿಕೊಂಡು, ರುಬ್ಬಿಕೊಂಡ
ತಕ್ಷಣ ಮೆಂತ್ಯಸೊಪ್ಪನ್ನು ಬೆರೆಸಬೇಕು. ಮೇಲಿನ ಅಳತೆಯಲ್ಲಿ
ಸುಮಾರು ೩೦ ಪೂರಿಗಳನ್ನು ತಯಾರಿಸಬಹುದು.
|
|
Print
this page |
ಮುಖಪುಟ |
|
|
|