Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಮೈಸೂರು ಮಸಾಲೆ ದೋಸೆ

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು :

ಅಕ್ಕಿ - ೧ ಲೋಟ ತುಂಬಾ

ಅಕ್ಕಿ ನುಚ್ಚು - ೧/೪ ಲೋಟ

ಸಿಪ್ಪೆ ಬಿಡಿಸಿದ ಉದ್ದಿನಬೇಳೆ ಕಾಲು ಲೋಟ

ಮೆಂತ್ಯ - ಅರ್ಧ ಚಮಚ

ತೊಗರಿ ಬೇಳೆ - ೧ ಚಮಚ

ಸಣ್ಣ ರವೆ ಒಂದೂವರೆ ಚಮಚ

ಉಪ್ಪು - ೧ ಚಮಚ

ಸಕ್ಕರೆ ಅರ್ಧ ಚಮಚ (ಬೇಕಾದರೆ)

 

ಅಕ್ಕಿ ಮೆಂತ್ಯ ಮತ್ತು ಎರಡು ರೀತಿಯ ಬೇಳೆಗಳನ್ನು ಒಟ್ಟಿಗೆ ೨ ರಿಂದ ೩ ಗಂಟೆ ಕಾಲ ನೀರಿನಲ್ಲಿ ನೆನೆಸಿ (ಅಥವಾ ಹಿಂದಿನ ದಿನ ರಾತ್ರಿ ನೆನೆಸಿ ಇಟ್ಟರೆ ಒಳ್ಳೆಯದು)

 

ಅಕ್ಕಿ ನುಚ್ಚನ್ನು ಪ್ರತ್ಯೇಕವಾಗಿ ೧ ಗಂಟೆ ನೀರಿನಲ್ಲಿ ನೆನೆಸಿ.

ನೆನೆಸಿದ ಎಲ್ಲಾ ಪದಾರ್ಥಗಳನ್ನು ನುಣ್ಣಗೆ, ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಉಪ್ಪನ್ನು ಬೆರೆಸಿ.

ಮಾರನೆ ದಿನ ದೋಸೆ ಮಾಡುವ ಒಂದು ಗಂಟೆ ಮುನ್ನ ರವೆ ಮತ್ತು ಸಕ್ಕರೆ ಸೇರಿಸಿ.

ತೆಳ್ಳಗೆ ದೋಸೆಯನ್ನು ಹರಡಿ.

 

ಸಾಕಷ್ಟು ಎಣ್ಣೆ ಹಾಕಿ, ಒಂದು ಕಡೆ ಮಾತ್ರ ಗರಿಗರಿಯಾಗುವಂತೆ ದೋಸೆಯನ್ನು ಬೇಯಿಸಿ.

ಒಂದು ಚಮಚ ಆಲೂಗೆಡ್ಡೆ ಮಸಾಲೆಯನ್ನು ಅದರೊಳಗಿರಿಸಿ, ಸ್ವಲ್ಪ ಬೆಣ್ಣೆಯನ್ನು ಸವರಿ.

ತ್ರಿಕೋಣಾಕಾರದಲ್ಲಿ ಮಡಚಿ, ಬಿಸಿಬಿಸಿಯಾದ ದೊಸೆಯನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರಿನೊಂದಿಗೆ ಬಡಿಸಿ.

 

ಈ ವಿಧಾನದಿಂದ ಸುಮಾರು ೧೨ ದೋಸೆಗಳನ್ನು ತಯಾರಿಸಬಹುದು.

 

ಬದಲಿ ವಿಧಾನ:

ಈರುಳ್ಳಿ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ಸವರಿ, ನಂತರ ಮಸಾಲೆಯನ್ನು ದೋಸೆಯೊಳಗಿರಿಸಿ, ನಂತರ ಬಡಿಸಿರಿ.

 

ತೆಂಗಿನಕಾಯಿ ಕೆಂಪು ಚಟ್ನಿ ಸವರಿ, ಸ್ವಲ್ಪ ನಿಂಬೆರಸದ ಅನ್ನವನ್ನು ಮಸಾಲೆಯೊಂದಿಗೆ ದೋಸೆಯೊಳಗಿರಿಸಿ, ಬಿಸಿಬಿಸಿಯಾಗಿ ಬಡಿಸಿ.

ಇನ್ನಷ್ಟು

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

ಗಸಗಸೆ ಪಾಯಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com