ಮಾವಿನಕಾಯಿ ಚಟ್ನಿ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ದೊಡ್ಡ ಗಾತ್ರದ ಒಂದು ಮಾವಿನಕಾಯಿ
ಒಣ ಮೆಣಸಿನಕಾಯಿ - ಬ್ಯಾಡಿಗೆ ೫
ಮೆಂತ್ಯ - ಮುಕ್ಕಾಲು ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು, ಇಂಗು
ಎಣ್ಣೆ - ಒಂದು ಟೀ ಚಮಚ
ಸಾಸಿವೆ - ಒಂದು ಟೀ ಚಮಚ
ತಯಾರಿಸುವ ವಿಧಾನ:
ಮಾವಿನಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ಮೆಂತ್ಯವನ್ನು
ಕೆಂಪಗೆ, ಮೆಣಸಿನಕಾಯಿಯನ್ನು ಗರಿಗರಿಯಾಗಿ ಹುರಿಯಿರಿ. ಮೆಂತ್ಯ,
ಮೆಣಸಿನಕಾಯಿ, ಉಪ್ಪು, ಇಂಗು, ಮಾವಿನತುರಿ ಎಲ್ಲವನ್ನು ಮಿಕ್ಸಿಗೆ ಹಾಕಿ
ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರನ್ನು ಸೇರಿಸಬೇಡಿ.
ಎಣ್ಣೆಗೆ ಸಾಸಿವೆ ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಸೇರಿಸಿ. ಬಹಲ
ದಿನಗಳವರೆಗೂ ಕೆಡದಂತೆ ಬಳಸಬಹುದು.
ಇನ್ನಷ್ಟು
ಮಜ್ಜಿಗೆ ಹುಳಿ
ಕೊಬ್ಬರಿ ಮಿಠಾಯಿ
ಮೈಸೂರು ಪಾಕ್
ರಸ ಮಲಾಯಿ
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ