|
ಮಾವಿನಕಾಯಿ
ಅಪ್ಪೆಹುಳಿ
ಹೆಂದಿಸಿಕೊಳ್ಳಬೇಕಾದ
ಸಾಮಗ್ರಿಗಳು :
ಬೇಯಿಸಿದ ಮಾವಿನಕಾಯಿ: ೨
ಬೆಳ್ಳುಳ್ಳಿ: ೫-೬ ಎಸಳು.
ಸಾಸಿವೆಕಾಳು: ಒಂದು ಚಮಚ
ಎಣ್ಣೆ ಒಗ್ಗರಣೆಗೆ
ಹಸಿ ಮೆಣಸಿನಕಾಯಿ: ೨
ಒಣ
ಮೆಣಸಿನಕಾಯಿ: ೨
ಕರಿಬೇವು: ೨ ಎಸಳು
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ :
ಎರಡು ಮಾವಿನ ಕಾಯಿಯನ್ನು ಬೇಯಿಸಿಕೊಳ್ಳಿ.
ಬೆಂದ
ಮಾವಿನಕಾಯನ್ನು ನೀರಿನ ಪಾತ್ರೆಗೆ ಹಾಕಿ ಚೆನ್ನಾಗಿ ಕಿವುಚಿ.
ಸಿದ್ದಗೊಂಡ ದ್ರಾವಣಕ್ಕೆ ಒಗ್ಗರಣೆ ಹಾಕಿ.
ಒಗ್ಗರಣೆ: ಕಾದ ಎಣ್ಣೆಗೆ ಸಾಸಿವೆಕಾಳು, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ,
ಒಣ ಮೆಣಸಿನಕಾಯಿ, ಕರಿಬೇವು ಹಾಕಿ
ಸಿಹಿ
ಅಪ್ಪೆಹುಳಿ ಬೇಕಿದ್ದರೆ ಬೆಲ್ಲವನ್ನು ಹಾಕಿಕೊಳ್ಳಬಹುದು. |