Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 21 September 2006 02:56 AM

ಮಜ್ಜಿಗೆ ಹುಳಿ

ತಯಾರಿಸಲು ಬೇಕಾದ ಸಾಮಾಗ್ರಿಗಳು:

 

ಕಡಲೆಬೇಳೆ - ಒಂದೂವರೆ ಮುಷ್ಟಿಯಷ್ಟು

ಹಸಿಕೊಬ್ಬರಿ - ಅರ್ಧ ಬಟ್ಟಲು

ಹಸಿಮೆಣಸಿನಕಾಯಿ - ಸಣ್ಣ ಗಾತ್ರದ್ದು ೧೦

ಕೊತ್ತಂಬರಿಸೊಪ್ಪು - ೧ ಕಪ್

ಸಾಸಿವೆ - ಅರ್ಧ ಟೀ ಚಮಚ

ಜೀರಿಗೆ - ೧ ಟೀ ಚಮಚ

ಇಂಗು, ಉಪ್ಪು - ರುಚಿಗೆ ತಕ್ಕಷ್ಟು

ಎಣ್ಣೆ - ಒಂದೂವರೆ ಟೀ ಚಮಚ

ಅರಿಶಿನ - ೨ ಚಿಟುಕೆ

ಒಣಮೆಣಸಿನಕಾಯಿ - ೪ ಸಣ್ಣ ಗಾತ್ರದ್ದು

ಕರಿಬೇವು - ಸ್ವಲ್ಪ

ಹುಳಿಮೊಸರು - ೧೦೦ ಗ್ರಾಂ

ತರಕಾರಿ - ಬೂದಗುಂಬಳಕಾಯಿ, ಸೌತೆಕಾಯಿ, ಪಡವಲಕಾಯಿ, ಸೀಮೆಬದನೆಕಾಯಿ, ನುಗ್ಗೆಕಾಯಿ

 

ತಯಾರಿಸುವ ವಿಧಾನ:

 

ಕಡಲೆಬೇಳೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ನೆನಸಿ. ಕಡಲೆಬೇಳೆ, ಜೀರಿಗೆ, ಸಾಸಿವೆ, ಇಂಗು, ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕಾಯಿತುರಿ, ಅರಿಶಿನ ೨ ಚುಟಿಕೆ ಈ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

 

ತರಕಾರಿಯನ್ನು ಬೇಯಿಸಿಕೊಂಡು ಒಗ್ಗರಣೆಯಲ್ಲಿ ಬಾಡಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಿಕ್ಸಿಯಿಂದ ಮಿಶ್ರಣವನ್ನು ತೆಗೆದು ಬೆಂದ ತರಕಾರಿಯೊಡನೆ ಬೆರೆಸಿ, ಸ್ವಲ್ಪ ಕಾಲ ಬೇಯಿಸಿ.

ಮೊಸರಿಗೆ ೧ ಲೋಟ ನೀರು ಹಾಕಿ ಚೆನ್ನಾಗಿ ಕಡೆದು, ತರಕಾರಿ ಇರುವ ಪಾತ್ರೆಗೆ ಹಾಕಿ ಕುದಿಸಿರಿ.

 

ಹಪ್ಪಳ, ಸಂಡಿಗೆ ಅಥವಾ ಉಪ್ಪಿನಕಾಯಿಯೊಡನೆ ತಿನ್ನಲು ರುಚಿಯಾಗಿರುತ್ತದೆ.

 

ಇನ್ನಷ್ಟು

ಮೈಸೂರು ಪಾಕ್

ರಸ ಮಲಾಯಿ

ಸೆಟ್ ದೋಸೆ

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com