Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಗೋಧಿಯ ಕಕ್‌ರ ಚಪಾತಿಗಳು

 

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು

ಗೋಧಿಹಿಟ್ಟು-೨ ಲೋಟ

ಪುಡಿ ಉಪ್ಪು- ೩/೪ ಚಮಚ (ಬೇಕಾದರೆ ಬಳಸಿ)

ಹಿಟ್ಟನ್ನು ಕಲಸಲು ಬೇಕಾಗುವಷ್ಟು ನೀರು

 

ತಯಾರಿಸುವ ವಿಧಾನ:

  • ಗೋಧಿ ಹಿಟ್ಟನ್ನು ಸಾಕಷ್ಟು ನೀರಿನಲ್ಲಿ ಗಟ್ಟಿಯಾಗಿ ಕಲಸಿರಿ.

  • ಕೆಲ ನಿಮಿಷಗಳ ಕಾಲ ಚೆನ್ನಾಗಿ ಹಿಟ್ಟನ್ನು ಮಿದಿಯಿರಿ.

  • ಹಿಟ್ಟಿನಿಂದ ಉಂಡೆಗಳನ್ನು ಮಾಡಿ, ಅದರಲ್ಲಿ ತೆಳ್ಳಗೆ ಚಪಾತಿ ಲಟ್ಟಿಸಿರಿ.

  • ಹೆಂಚನ್ನು ಸ್ವಲ್ಪ ಬಿಸಿ ಮಾಡಿ, ಚಪಾತಿಯ ಎರಡೂ ಕಡೆ ಸ್ವಲ್ಪ ತುಪ್ಪ ಸವರಿ,

  • ತೆಳುಕಂದು ಬಣ್ಣ ಬರುವವರೆಗೆ ಹೆಂಚಿನ ಮೇಲೆ ಬೇಯಿಸಿರಿ.

  • ಎಲ್ಲಾ ಚಪಾತಿಗಳನ್ನು  ಇದೇ ರೀತಿ ಬೇಯಿಸಿ, ಪಕ್ಕಕ್ಕಿರಿಸಿರಿ.

  • ನಂತರ ದಪ್ಪನೆ ಭಾರವಾದ ಹೆಂಚನ್ನು ಒಲೆಯ ಮೇಲಿರಿಸಿರಿ.

  • ಹೆಂಚು ಬಿಸಿಯಾದ ನಂತರ, ತಯಾರಿಸಿಟ್ಟು ಕೊಂಡ ಚಪಾತಿಯನ್ನು ಅದರ ಮೇಲೆ ಹಾಕಿರಿ.

ತೆಳ್ಳನೆಯ ಮಲ್ಲಿನ ಬಟ್ಟೆಯಲ್ಲಿ ಸುತ್ತಲೂ ಚಪಾತಿಯನ್ನು ಒತ್ತಿರಿ. ಅದು ಕಂದು ಬಣ್ಣ ಬರುವವರೆಗೆ ಬಟ್ಟೆಯಲ್ಲಿ ಒತ್ತಿರಿ.

ಒಂದು ಸಲ ಚಪಾತಿಯನ್ನು ತಿರುವಿ ಹಾಕಿ, ಬಟ್ಟೆಯಲ್ಲಿ ಸುತ್ತಲೂ ಒತ್ತಿರಿ, ಇದರಿಂದ ಚಪಾತಿ ಗರಿಗರಿಯಾಗುತ್ತದೆ.

 

  ಮೇಲಿನ ಅಳತೆಯಲ್ಲಿ ೧೬ ಕಕ್‌ರಗಳನ್ನು ಮಾಡಬಹುದು.

 

ಒಂದು ಸಲ ಮಾತ್ರ ಚಪಾತಿ ತಿರುವಿ ಹಾಕಿರಿ. ಹೆಚ್ಚು  ಸಲ ತಿರುವಿ ಬಟ್ಟೆಯಿಂದ ಒತ್ತಿದರೆ, ಚಪಾತಿ ಮುರಿಯಬಹುದು. ಈ ಚಪಾತಿಗಳನ್ನು ಒಂದು ತಿಂಗಳಿಡಬಹುದು.

 

ಬದಲಿ ವಿಧಾನ:

 

ಮಸಾಲೆ ಕಕ್‌ರ ತಯಾರಿಸುವಾಗ (thymolseeds) ಓಮಿನ ಕಾಳು, ಅರಿಶಿನಪುಡಿ ಮತ್ತು ಕೆಂಪು ಮೆಣಸಿನಪುಡಿಯನ್ನು ಹಿಟ್ಟಿಗೆ ಸೇರಿಸಿ, ಕಲಸಬೇಕು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com