ಕಾಯಿ ಸಾಸಿವೆ ಚಿತ್ರಾನ್ನ
ತಯಾರಿಸಲು ಬೇಕಾದ ಸಾಮಗ್ರಿ:
ಅಕ್ಕಿ - ೧ ಪಾವು
ಹಸಿತೆಂಗಿನಕಾಯಿ - ೧ ದೊಡ್ಡ ಬಟ್ಟಲು
ಹಸಿಮೆಣಸಿನಕಾಯಿ - ೫
ಕೊತ್ತಂಬರಿ ಸೊಪ್ಪು- ೧ ಕಪ್
ಅರಿಶಿನ -ಕಾಲು ಟೀ ಚಮಚ
ಸಾಸಿವೆ - ೨ ಟೀ ಚಮಚ
ಕಡಲೇಕಾಯಿಬೀಜ- ೨ಟೀ ಚಮಚ
ಹುಣಸೆ ಹಣ್ಣು - ಅರ್ಧ ನಿಂಬೆ ಗಾತ್ರದ್ದು
ಎಣ್ಣೆ -೫ ಟೀ ಚಮಚ
ತಯಾರಿಸುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಉದುರುದುರಾಗಿ ಅನ್ನ ಮಾಡಿ ಆರಲು
ಬಿಡಿ.
ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಅರಿಶಿನ, ೧ ಚಮಚ
ಸಾಸಿವೆ, ಉಪ್ಪು, ಸ್ವಲ್ಪ ಹುಣಸೆಹಣ್ಣು, ಕಾಯಿತುರಿ ಎಲ್ಲವನ್ನು ಮಿಕ್ಸಿಗೆ
ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿ.
ಒಗ್ಗರಣೆ:
ಎಣ್ಣೆಯನ್ನು ಕಾಯಿಸಿ, ಸಾಸಿವೆ ಹಾಕಿ. ಅದು ಚುಟಗುಟ್ಟ ತೊಡಗಿದಾಗ
ಕಡ್ಲೇಬೇಳೆ, ಉದ್ದಿನಬೇಳೆ ಹಾಕಿ ಹುರಿಯಿರಿ ಅದು ಕೆಂಪಗಾದಾಗ
ಕಡಲೇಬೀಜ ಹಾಕಿ ಹುರಿಯಿರಿ ನಂತರ ಕರಿಬೇವು, ಕೊತ್ತಂಬರಿ ಸೊಪ್ಪು
ಹಾಕಿರಿ
ಮಿಕ್ಸಿಯಿಂದ ರುಬ್ಬಿದ ಮಿಶ್ರಣವನ್ನು ಒಗ್ಗರಣೆ ಸಾಮಗ್ರಿಗಳ ಜೊತೆ
ಬೆರೆಸಿರಿ.
ಮಿಶ್ರಣವು ಕುದಿದ ನಂತರ ಅನ್ನದೊಡನೆ ಬೆರೆಸಿ ಸೇವಿಸಬಹುದು.
ಇನ್ನಷ್ಟು
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ
ಗಸಗಸೆ ಪಾಯಸ