ಹಲಸಿನ ತೊಳೆ ಪಾಯಸ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಹಲಸಿನ ತೊಳೆ- ೬
ಸಕ್ಕರೆ- ಒಂದೂವರೆ ಕಪ್
ಹಾಲು- ಅರ್ಧ ಲೀಟರ್
೪ ಏಲಕ್ಕಿ -ಪುಡಿ ಮಾಡಿದ್ದು
ಸ್ವಲ್ಪ ಒಣ ಖರ್ಜೂರದ ಚೂರುಗಳು
ತಯಾರಿಸುವ ವಿಧಾನ:
ಹಲಸಿನ ತೊಳೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ನೀರಿನಲ್ಲಿ ಬೇಯಿಸಿ
ಅರ್ಧ ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ.
ಬೆಂದ ಹಲಸಿನ ತೊಳೆಗೆ ಹಾಲು, ಸಕ್ಕರೆ, ಏಲಕ್ಕಿ ಹಾಕಿ, ಒಣ ಖರ್ಜೂರದ
ಚೂರುಗಳನ್ನು ಹಾಕಿ. ಮೇಲಿನ ವಿಧಾನದಿಂದ ೪ ಕಪ್ ಪಾಯಸ
ತಯಾರಿಸಬಹುದು.