|
ಹೆಸರು ಬೇಳೆ ಇಡ್ಲಿ
ಹೊಂದಿಸಿಕೊಳ್ಳಬೇಕಾದ
ಸಾಮಗ್ರಿಗಳು:
ಹೆಸರುಬೇಳೆ-೧ ಲೋಟ
ತಾಜಾ ತೆಂಗಿನಕಾಯಿ
ತುರಿ-೧೧/೨ ಚಮಚ
ಹಸಿರುಮೆಣಸಿನಕಾಯಿ-೬
ಪುಡಿ ಮಾಡಿದ ಇಂಗು
-೨ ಚಿಟಿಕೆ
ಗಟ್ಟಿಯಾದ ಹುಳಿ
ಮೊಸರು-೧/೨ ಲೋಟ
ಅಡಿಗೆ ಸೋಡ-೧/೨
ಚಮಚ
ಉಪ್ಪು-೧ ಚಮಚ
ಎಣ್ಣೆ -೧೧/೨ ಚಮಚ
ಸಾಸಿವೆ-೧/೪ ಚಮಚ
ತಯಾರಿಸುವ ವಿಧಾನ
೧. ಹೆಸರು
ಬೇಳೆಯನ್ನು ೨ ಗಂಟೆ ಕಾಲ ನೆನೆಸಿರಿ.
೨. ತೆಂಗಿನಕಾಯಿ,
ಹಸಿರುಮೆಣಸಿನಕಾಯಿ, ಇಂಗು ಮತ್ತು ಉಪ್ಪನ್ನು ನುಣ್ಣಗೆ ರುಬ್ಬಿಕೊಳ್ಳಿರಿ.
೩. ಬೇಳೆಯನ್ನು ಪ್ರತ್ಯೇಕವಾಗಿ
ನೀರನ್ನು ಸೇರಿಸದೇ ತರಿತರಿಯಾದ ರವೆಯಂತೆ ಹದವಾಗಿ ರುಬ್ಬಿಕೊಳ್ಳಿರಿ.
೪. ರುಬ್ಬಿಕೊಂಡ
ಎರಡೂ ಪದಾರ್ಥಗಳನ್ನು ಒಟ್ಟಿಗೆ ಹುಳಿ ಮೊಸರಿನಲ್ಲಿ ಕಲಸಿರಿ.
೫. ಎಣ್ಣೆಯನ್ನು ಬಿಸಿ
ಮಾಡಿ ಅದರಲ್ಲಿ ಸಾಸಿವೆ ಸಿಡಿಸಿ, ಅದನ್ನು ಸೋಡಾದೊಂದಿಗೆ ಹಿಟ್ಟಿನ ಮೇಲೆ ಸುರಿಯಿರಿ.
೬. ಚೆನ್ನಾಗಿ ಕಲಸಿ, ಸಾಧಾರಣವಾದ
ರೀತಿಯಲ್ಲಿ, ಹಬೆಯಲ್ಲಿ ಇಡ್ಲಿಯನ್ನು ಬೇಯಿಸಿರಿ.(ಹಿಟ್ಟನ್ನು ಹೆಚ್ಚುಕಾಲ ನೆನೆಸಬೇಡಿರಿ)
ಮೇಲಿನ
ಅಳತೆಯಲ್ಲಿ ಸುಮಾರು ೧೨ ಇಡ್ಲಿಗಳನ್ನು ತಯಾರಿಸಬಹುದು. |