ಹಸಿಕೊಬ್ಬರಿ ಚಟ್ನಿ
ತಯಾರಿಸಲು ಬೇಕಾದ ಸಾಮಾಗ್ರಿ:
ತೆಂಗಿನಕಾಯಿ - ೧ ಚಿಪ್ಪು
ಕೊತ್ತಂಬರಿ ಸೊಪ್ಪು - ೧ ಕಪ್
ಹಸಿಮೆಣಸಿನಕಾಯಿ - ೬ ರಿಂದ ೮
ಹುಣಿಸೆಹಣ್ಣುರಸ - ೨ ಟೀ ಚಮಚ
ಎಣ್ಣೆ - ಒಂದೂವರೆ ಚಮಚ
ಸಾಸಿವೆ - ಒಗ್ಗರಣೆಗೆ ಬೇಕಾಗುವಷ್ಟು
ರುಚಿಗೆ ತಕ್ಕಷ್ಟು ಉಪು, ಇಂಗು
ತಯಾರಿಸುವ ವಿಧಾನ:
ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಉಪ್ಪು, ಇಂಗು, ಹುಣಿಸೆರಸ ಮಿಕ್ಸಿಗೆ
ಹಾಕಿ ರುಬ್ಬಿಕೊಳ್ಳಿ.
ನಂತರ ಕೊಬ್ಬರಿ ತುರಿ ಹಾಕಿ ಎಲ್ಲವನ್ನು ಸ್ವಲ್ಪ ತರಿತರಿಯಾಗಿ
ರುಬ್ಬಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬುವುದು ಬೇಡ.
ಮಿಶ್ರಣಕ್ಕೆ ಒಗ್ಗರಣೆ ಹಾಕಿ ಕಲಿಸಿಬಿಡಿ.
ಬದಲಿ ವಿಧಾನ:
ಇದೇ ವಿಧಾನದಲ್ಲಿ ಮೇಲಿನ ಸಾಮಾಗ್ರಿಗಳ ಜೊತೆಗೆ ಎರಡೂವರೆ ಕಪ್
ಹುರಿಗಡಲೆ ಹಾಕಿ ರುಬ್ಬಿಕೊಳ್ಳಬಹುದು. ಹಸಿ ಪುದಿನ ಎಲೆಯನ್ನು
ಸಹ ಬಳಸಿ ರುಚಿ ಹೆಚ್ಚಿಸಬಹುದು.
ಇನ್ನಷ್ಟು
ಮಜ್ಜಿಗೆ ಹುಳಿ
ಕೊಬ್ಬರಿ ಮಿಠಾಯಿ
ಮೈಸೂರು ಪಾಕ್
ರಸ ಮಲಾಯಿ
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ