ಕೊಬ್ಬರಿ ಮಿಠಾಯಿ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ತೆಂಗಿನಕಾಯಿ - ೧
ಸಕ್ಕರೆ - ಮುಕ್ಕಾಲು ಕಪ್
ಹಾಲು - ೧ ಕಪ್
೫ ರಿಂದ ೬ ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ.
ತಯಾರಿಸುವ ವಿಧಾನ:
ತೆಂಗಿನಕಾಯಿಯನ್ನು ಚೆನ್ನಾಗಿ ತುರಿಯಿರಿ. ಆದಷ್ಟು ಬೆಳ್ಳಗಿರುವ
ತುರಿಯನ್ನು ಆರಿಸಿರಿ.
ಬಾಣಲೆಯಲ್ಲಿ ಕೊಬ್ಬರಿ, ಸಕ್ಕರೆಯನ್ನು ಹಾಕಿ ಜೊತೆಗೆ ಹಾಲನ್ನು ಹಾಕಿ
ಕೆದಕುತ್ತಿರಿ. ಸಣ್ಣ ಉರಿಯಲ್ಲಿ ಸದಾ ಕೆದಕುತ್ತಿರಿ. (ಅರಿಶಿನ ಬಣ್ಣವನ್ನು
ಹಾಕಬಹುದು)
೨೦ ನಿಮಿಷದೊಳಗೆ ಪಾಕ ಗಟ್ಟಿಯಾಗ ತೊಡಗುತ್ತದೆ. ಏಲಕ್ಕಿ ಪುಡಿಯನ್ನು
ಉದುರಿಸಿ ಬಾಣಲೆಯಿಂದ ಬೇರ್ಪಟ್ಟ ಮಿಶ್ರಣವನ್ನು ತುಪ್ಪ ಸವರಿದ
ತಟ್ಟೆಗೆ ಬಗ್ಗಿಸಿ ಆರಲು ಬಿಡಿ.
ಆರಿದ ನಂತರ ತಿನ್ನಬಹುದು.
ಇನ್ನಷ್ಟು
ಮೈಸೂರು ಪಾಕ್
ರಸ ಮಲಾಯಿ
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ