Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬ್ರೆಡ್ ಬಟೂರಾ

ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು:

 

ಮೈದಾ-೩ ಲೋಟಾ ತುಂಬಾ

ತಾಜಾ ಬ್ರೆಡ್-೮ ಹೋಳುಗಳು

ಗಟ್ಟಿ ಹುಳಿ ಮೊಸರು -೧/೨ಲೋಟ

ಬೇಕಿಂಗ್ ಪೌಡರ್-೧/೨ ಚಮಚ

ಉಪ್ಪು -೧೧/೨ ಚಮಚ

ಬಟೂರ ಕರೆಯಲು ಬೇಕಾಗುವಷ್ಟು ಎಣ್ಣೆ.

 

   ತಯಾರಿಸುವ ವಿಧಾನ:

 

೧. ಮೈದಾ ಹಿಟ್ಟನ್ನು, ಉಪ್ಪು ಮತ್ತು ಬೇಕಿಂಗ್ ಪೌಡರ್‌ನೊಂದಿಗೆ, ಒಂದೆರಡು ಬಾರಿ ಜರಡಿ ಮಾಡಿರಿ.

೨. ಬ್ರೆಡ್ ಹೋಳುಗಳಲ್ಲಿರುವ ಕಂದು ಬಣ್ಣದ ಅಂಚನ್ನು ಬೇರ್ಪಡಿಸಿ, ಬ್ರೆಡ್ ಹೋಳುಗಳನ್ನು ಒಂದರ ನಂತರ ಒಂದನ್ನು ನೀರಿನಲ್ಲಿ ಅದ್ದಿರಿ. ಅವುಗಳನ್ನು ತಕ್ಷಣ ಹೊರತೆಗೆದು, ನೀರನ್ನು ಹಿಂಡಬೇಕು.

೩. ಬ್ರೆಡ್ ಹೋಳುಗಳನ್ನು, ಚೆನ್ನಾಗಿ ಹದವಾಗುವಂತೆ  ಪುಡಿಮಾಡಿ.

೪. ಇದಕ್ಕೆ ಹುಳಿ  ಮೊಸರು, ಮೈದಾ ಹಿಟ್ಟನ್ನು ಬೆರೆಸಿ, ಇನ್ನೂ ಸ್ವಲ್ಪ ನೀರನ್ನು ಸಿಂಪಡಿಸಿಕೊಂಡು, ಗಟ್ಟಿಯಾಗಿ ಹಿಟ್ಟನ್ನು ಕಲಸಿರಿ.

೫. ಬ್ರೆಡ್ ಹಿಟ್ಟನ್ನು ೧ ರಿಂದ ೨ ಗಂಟೆಗಳ ಕಾಲ ಮುಚ್ಚಿಡಿ

೬. ಇದರಿಂದ ಸಮಗಾತ್ರದ ಉಂಡೆಗಳನ್ನು ಮಾಡಿ ಕೊಂಡು, ಮೈದಾ ಉದುರಿಸಿಕೊಂಡು ಒಂದರ ನಂತರ ಒಂದನ್ನು ಲಟ್ಟಿಸಿ.

೭. ಎಣ್ಣೆಯಲ್ಲಿ ಕೆಂಪಾಗುವಂತೆ ಕರಿಯಿರಿ.

    ಸುಮಾರು ೧೦ ದೊಡ್ಡ ಬಟೂರಾ ತಯಾರಿಸಬಹುದು.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com