Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಅವರೆಕಾಯಿ ಸ್ಪೆಷಲ್

ಹಿತಕವರೆ(ಹಿಸುಕಿದ ಅವರೆ) ಬೇಳೆ ಹುಳಿ

ತಯಾರಿಸಲು ಬೇಕಾದ ಸಾಮಾಗ್ರಿ:

ಹಿತಕವರೆ- ಅರ್ಧ ಪಾವು.

ಉದ್ದಿನಬೇಳೆ-೧ ಟೀ ಚಮಚ

ಮೆಣಸು-೧೦-೧೨

ಸಾರಿನಪುಡಿ-೧ ಟೀ ಚಮಚ

ತೆಂಗಿನಕಾಯಿ ತುರಿ - ೧ ಬಟ್ಟಲು

ಕಡ್ಲೇಕಾಯಿ ಎಣ್ಣೆ- ಒಂದೂವರೆ ಟೀ ಚಮಚ

ಸಾಸಿವೆ- ಒಗ್ಗರಣೆಗೆ ಬೇಕಾದಷ್ಟು

ರುಚಿಗೆ ತಕ್ಕಷ್ಟು- ಉಪ್ಪು,ಇಂಗು, ಕರಿಬೇವು, ಕೊತ್ತಂಬರಿ

ಸೊಪ್ಪು.

ತಯಾರಿಸುವ ವಿಧಾನ:

ಮೊದಲಿಗೆ ಅವರೆಕಾಯಿಯನ್ನು ಹಿಸುಕಿಟ್ಟುಕೊಳ್ಳಿ.

ಉದ್ದಿನಬೇಳೆಯನ್ನು ಬಾಣಲೆಯಲ್ಲಿ ಹಾಕಿ ಹುರಿಯಿರಿ ಅದರ ಬಣ್ಣ ಕೆಂಪಗಾಗುವವರೆಗೂ ಹುರಿಯುತ್ತಿರಿ.

ಮೆಣಸನ್ನು ಕೂಡ ಇದೇ ರೀತಿ ಚಿಟಗುಟ್ಟುವವರೆಗೂ ಹುರಿಯಿರಿ.

ನಂತರ ಎರಡನ್ನು ಪುಡಿಮಾಡಿಕೊಳ್ಳಿ. ಪುಡಿಗೆ ಸಾರಿನಪುಡಿ, ತೆಂಗಿನತುರಿ, ಉಪ್ಪು, ಇಂಗು ಸ್ವಲ್ಪ ನೀರನ್ನು ಹಾಕಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.

ಹಿತಕವರೆಯನ್ನು ನೀರಿಗೆ ಹಾಕಿ. ಸುಮಾರು ಹತ್ತು ನಿಮಿಷ ಬೇಯಿಸಿ.

ಹಿತಕವರೆ ಬೆಂದ ಮೇಲೆ ರುಬ್ಬಿದ ಸಾಮಾಗ್ರಿಗಳನ್ನು ಹಾಕಿ ಹುಲಿಯ ಹದಕ್ಕೆ ಬರುವಷ್ಟು ನೀರನ್ನು ಹಾಕಿ ಕುದಿಸಿ.

ಆಗಾಗ ಸೌಟಿನಿಂದ ಕದಡುತ್ತಿರಿ. ಸರಿಯಾಗಿ ಕುದಿದ ನಂತರ

ಎಣ್ಣೆ, ಸಾಸಿವೆ, ಕರಿಬೇವು ಇನ್ನಿತರ ಸಾಮಾಗ್ರಿ ಬಳಸಿ ಒಗ್ಗರಣೆ ಮಾಡಿ ಹುಳಿಗೆ ಸೇರಿಸಿ.

ಬಿಸಿ ಬಿಸಿ ಹುಳಿಯ ರುಚಿಯನ್ನು ಆಸ್ವಾದಿಸಿ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com