ಆಲೂಗೆಡ್ಡೆ ಬೋಂಡ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಆಲೂಗೆಡ್ಡೆ
ಕಡಲೆಹಿಟ್ಟು - ಅರ್ಧ ಪಾವು
ಕಾರದ ಪುಡಿ - ಎರಡೂವರೆ ಟೀ ಚಮಚ
ಅಕ್ಕಿಹಿಟ್ಟು - ಅರ್ಧ ಟೀ. ಚಮಚ
ಎಣ್ಣೆ - ಕರಿಯುವುದಕ್ಕೆ
ರುಚಿಗೆ ತಕ್ಕಟ್ಟು ಉಪ್ಪು, ಇಂಗು
ಅರಿಶಿನ - ಕಾಲು ಟೀ ಚಮಚ
ತಯಾರಿಸುವ ವಿಧಾನ:
ಮೇಲಿನ ಕೊಟ್ಟಿರುವ ಸಾಮಗ್ರಿಗಳನ್ನು ಸರಿಯಾಗಿ ಬೆರೆಸಿ ನೀರಿನಲ್ಲಿ
ದೋಸೆ ಹದಕ್ಕೆ ಕಲಸಿ.
ತರಕಾರಿಯನ್ನು ಬಿಲ್ಲೆಯಾಕಾರದಲ್ಲಿ ಕತ್ತರಿಸಿ ಮಿಶ್ರಣದಲ್ಲಿ ಅದ್ದಿ
ಕರಿಯಿರಿ.
ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಪಲ್ಯ ಮಾಡಿ ಗುಂಡಗೆ ಸಣ್ಣ ಸಣ್ಣಉಂಡೆ
ಮಾಡಿ ಹಿಟ್ಟಿನಲ್ಲಿ ಅದ್ದಿ ಕರಿಯಿರಿ.
ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ತೆಳ್ಳಗೆ ಹೆಚ್ಚಿ ಬೇಯಿಸಿ ಪಲ್ಯ ಮಾಡಿ
ಕರಿಯಿರಿ. ಬೆಂದ ಆಲೂಗೆಡ್ಡೆಯನ್ನು ಚಚ್ಚಿ ಬಳಸಿ.
ಸೂಚನೆ: ಇದೇ ರೀತಿ ದಿಂಡು, ಹೀರೇಕಾಯಿ, ಬಾಳೆಕಾಯಿ, ದೊಡ್ಡ
ಮೆಣಸಿನಕಾಯಿಗಳನ್ನು ಉಪಯೋಗಿಸಿ ಬೋಂಡ ತಯಾರಿಸಬಹುದು.