|

ವಿಕ್ರಾಂತ ಕರ್ನಾಟಕದ ದಿನದರ್ಶಿಕೆ ನೀಡಿ ಹೊಸವರ್ಷದ
ಶುಭಾಶಯ ಕೋರಿ
ಹೊಸವರ್ಷಕ್ಕೆ ಓದುಗರು ಕಳಿಸಿದ ಶುಭಾಶಯ ಪತ್ರಗಳು
ಸುಶ್ರುತ ದೊಡ್ಡೇರಿ
ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ
ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ
ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ
ಗೆಳೆಯಾ: ಹೊಸ ವರ್ಷ ಬರುತ್ತಿದೆ...
ಹೊಸ ವರ್ಷದ ಶುಭಾಶಯಗಳು
*
ಶ್ರೀನಿಧಿ, ಬೆಂಗಳೂರು.
ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ
ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು ಸಂಭ್ರಮ,
ಒಂದು ನವಿರು ಭಾವ ಗರಿಗೆದರುವ ಸಮಯ. ಎಲ್ಲದನ್ನ
ಸಂತಸದ ಕಣ್ಣಲ್ಲಿ ನೋಡುವ ಆತುರ. . .
. ಎಲ್ಲರಿಗೂ ಶುಭಾಶಯಗಳು
*
ಅನನ್ಯ, ಮೈಸೂರು
ಹೊಸವರುಷ ಬಂದಿದೆ
ಹೊಸ ತನ ತಂದಿದೆ
ಎಲ್ಲರಿಗೂ ಹೊಸತನದ ಹುರುಪು
ಎಲ್ಲರ ಬಾಳಲ್ಲಿ ತರಲಿ ಹೊಳಪು
ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು
*
ಸೋಮು, ಬೆಂಗಳೂರು
ವಿಕ್ರಾಂತ ಕರ್ನಾಟಕ ಬಳಗೆಕ್ಕೆ ಮತ್ತು ಎಲ್ಲಾ ಓದುಗರಿಗೂ
ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷವನ್ನು ನೀವು ಹೇಗೆ ಆಚರಿಸುತ್ತೀರಾ?
ನಮಗೆ ಬರೆಯಿರಿ.
|