Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 13 September 2006 10:51 PM

ವಂದೇಮಾತರಂ ತಕರಾರು ಒಂದೇ ಎರಡೇ...?

ವಂದೇ ಮಾತರಂ ಹಾಡಬೇಕು ಎನ್ನುವ ಮುಸ್ಲಿಮರಿದ್ದಾರೆ. ಹಾಡಬಾರದು ಎನ್ನುವವರೂ ಇದ್ದಾರೆ. ಈ ಕುರಿತ ಅಭಿಪ್ರಾಯಗಳನ್ನು ಒಂದೆಡೆ ಕಲೆ ಹಾಕಿ ನೋಡಿದಾಗ ನಿಮಗೇನನಿಸುತ್ತದೆ ?

  • ಶೈಲಾ

  • ಹಿನ್ನೆಲೆ : ೧೮೭೦ರ ದಶಕದಲ್ಲಿ ಬಂಕಿಮ ಚಂದ್ರ ಚಟರ್ಜಿ ಬರೆದ ಹಾಡಿದು. ಆದರೆ ಇದು ಪ್ರಕಟಗೊಳ್ಳಲು ಬಹಳ ಸಮಯವೇ ಹಿಡಿಯಿತು. ೧೮೮೧ರಲ್ಲಿ ಬಂಕಿಚಂದ್ರರ `ಅನಂದಮಠ? ಕಾದಂಬರಿ ಪ್ರಕಟವಾದಾಗ ಅದರಲ್ಲಿ ಈ ಹಾಡನ್ನು ಸೇರಿಸಲಾಗಿತ್ತು. ೧೮೯೬ರಲ್ಲಿ ಕಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ ಠಾಗೋರರ ಸಂಗೀತ ಸಂಯೋಜನೆಯಲ್ಲಿ ಇದನ್ನು ಹಾಡಲಾಯಿತು. ಯಾವಾಗ ೧೯೦೫ರಲ್ಲಿ ಸ್ವದೇಶಿ ಚಳವಳಿ ಶುರುವಾಯಿತೋ ಆಗ ಈ ಗೀತೆ ಪ್ರತಿಯೊಬ್ಬರ ರಾಷ್ಟ್ರೀಯ ಮಂತ್ರವಾಗಿಬಿಟ್ಟಿತು. ವಂದೇ ಮಾತರಂ ಗೆ ಬ್ರಿಟಿಷರು ಅದೆಷ್ಟು ತತ್ತರಿಸಿಹೋಗಿದ್ದರೆಂದರೆ ಗೀತೆಯನ್ನೇ ಬ್ಯಾನ್ ಮಾಡಲಾಗಿತ್ತು. ಆವಾಗಲೇ ವಂದೇ ಮಾತರಂ ಇನ್ನಿಲ್ಲದಂತೆ ಸ್ವಾತಂತ್ರ್ಯ ಹೋರಾಟಗಾರರನ್ನು ಆವರಿಸಿಕೊಂಡುಬಿಟ್ಟಿತ್ತು. ಆದರೆ ೧೯೩೦ರ ವೇಳೆಯಲ್ಲಿ ಗೀತೆಯ ಕುರಿತು ಪ್ರತ್ಯೇಕತಾವಾದಿಗಳಿಂದ ಅಕ್ಷೇಪಣೆ ಕೇಳಿ ಬಂತು. ಇಲ್ಲಿ ವಿರೋಧಕ್ಕೆ ಕಾರಣ ಏನಿತ್ತೆಂದರೆ, ಬಂಕಿಮರು ಈ ಗೀತೆಯನ್ನು ಸೇರಿಸಿಕೊಂಡಿದ್ದ ಕೃತಿ `ಆನಂದ ಮಠ?ದಲ್ಲಿ ೧೭೭೧ರ ಕಾಲದ ನವಾಬರನ್ನು ಬಡವಾಗಿ ಚಿತ್ರಿಸಲಾಗಿದೆ ಎಂಬುದಾಗಿತ್ತು. ಗೀತೆಯ ಕೊನೆಯೆರಡು ಚರಣಗಳಲ್ಲಿ ಮಾತೆಯ ವರ್ಣನೆಯಲ್ಲಿ ದೇವತೆ ದುರ್ಗೆಗೆ ಹೋಲಿಕೆಯಾಗಬಹುದಾದ ಕೆಲವು ವಿವರಗಳಿದ್ದವು. ಈ ನಿಟ್ಟಿನಲ್ಲಿ ಇದನ್ನು ರಾಷ್ಟ್ರಗೀತೆ ಅಂತ ಒಪ್ಪಿಕೊಳ್ಳುವುದೋ ಬಿಡುವುದೋ ಎಂಬ ಜಿಜ್ಞಾಸೆಗೆ ಬಿದ್ದ ನೆಹರೂ ೧೯೩೭ರಲ್ಲಿ ಠಾಗೋರರಿಗೆ ಪತ್ರ ಬರೆದಾಗ ಗೀತೆಯ ಮೊದಲೆರಡು ಪ್ಯಾರಾಗಳನ್ನು ಒಪ್ಪಿಕೊಂಡು ಹಾಡಬೇಕು ಎಂಬ ಉತ್ತರ ಸಿಕ್ಕಿತು.

    ಆದಾದ ನಂತರ ಕಾಂಗ್ರೆಸ್ ಸಭೆಗಳಲ್ಲಿ ಮೊದಲಿನ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತಿತ್ತು. ಆದರೆ ಅದೂ ಕೂಡ ಜಿನ್ನಾರಂತರವರಿಗೆ ಸರಿ ಕಂಡಿರಲಿಲ್ಲ. ಹಾಗಾಗಿ ವಂದೇ ಮಾತರಂ ಹಾಡಬಾರದೆಂದು ಕೊಂಡವರು ಹಾಗೆಯೇ ಇರಬಹುದೆಂಬ ಉದಾರತೆ ತೋರಿಸಲಾಯಿತು.

    ಸ್ವಾತಂತ್ರ್ಯಾ ನಂತರ ಕಾರಣಾಂತರಗಳಿಂದ ವಂದೇ ಮಾತರಂಗೆ ರಾಷ್ಟ್ರಗೀತೆ ಪಟ್ಟ ತಪ್ಪಿತು. ಆದರೆ ಅವತ್ತು ೧೯೫೦ ಜನವರಿ ೨೪ ರಂದು ಕಾನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿಯಲ್ಲಿ ತೆಗೆದುಕೊಂಡ ನಿರ್ಣಯ ಗಮನಾರ್ಹವಾದದ್ದು. ರಾಷ್ಟ್ರಗೀತೆ ಸ್ಥಾನದಲ್ಲಿ ಜನಗಣಮನ ಇದ್ದರೂ ವಂದೇ ಮಾತರಂ ಗೂ ಅಂತಹದೇ ಸ್ಥಾನ ನೀಡಿ ಅದನ್ನು ರಾಷ್ಟ್ರೀಯ ಹಾಡನ್ನಾಗಿ ಸ್ವೀಕರಿಸಲಾಯಿತು. ಅದನ್ನು ಎಲ್ಲರೂ ಸ್ವಾಗತಿಸಿದ್ದರು. ಈಗ ವಂದೇ ಮಾತರಂ ನೂರರ ಹೊಸ್ತಿಲಲ್ಲಿ ಇರುವಾಗ ಅನಗತ್ಯ ವಿವಾದ ಶುರುವಾಗಿದೆ.

    ಕಾರಣ ಮತ್ತೊಮ್ಮೆ ವಂದೇ ಮಾತರಂ ಹಾಡುವುದನ್ನು ಮುಸ್ಲಿಂ ಸಂಘಟನೆ `ಜಮಾತೆ ಇಸ್ಲಾಮಿ? ವಿರೋಧಿಸಿದೆ. ಬ್ರಿಟಿಷರು ನಿಷೇಧಿಸಿದ ಹಾಡನ್ನು ಮುಸ್ಲಿಮರೂ ನಿಷೇಧಿಸಿದ್ದಾರೆ ಎನ್ನುವುದು ಅಚ್ಚರಿಯ ವಿಷಯ. ಆದರೆ ಯಾಕೆ ನಿಷೇಧ...ಎನ್ನುವುದಕ್ಕೆ ಸರಿಯಾದ ಕಾರಣಗಳಿಲ್ಲವಾದರೂ ದೆಹಲಿಯ ಜಮಾ ಮಸೀದಿಯ ಶಾಹಿ ಇಮಾಮ್, ?ವಂದೇ ಮಾತರಂ ಹಾಡು ಇಸ್ಲಾಮಿಕ್ ನಂಬಿಕೆಗಳಿಗೆ ವಿರುದ್ಧವಾದುದಾಗಿದೆ. ಮುಸ್ಲಿಮರಿಗೆ ಈ ಹಾಡನ್ನು ಹಾಡುವಂತೆ ಒತ್ತಾಯಿಸುವುದು ಆತನನ್ನು ಮುಸ್ಲಿಂ ಸಮುದಾಯದಿಂದ ಅಮಾನತುಗೊಳಿಸಿದಂತೆ? ಎನ್ನುತ್ತಾರೆ.

    ಆದರೆ ಎಲ್ಲ ಮುಸ್ಲಿಮರು ಇದನ್ನು ಒಪ್ಪುವುದಿಲ್ಲ. ವಂದೇ ಮಾತರಂ ಹಾಡುವುದರಲ್ಲಿ ತಪ್ಪಿಲ್ಲ ಎನ್ನುವ ಗಣ್ಯ ಮುಸ್ಲಿಮರೂ ಇದ್ದಾರೆ. ಅವರನ್ನು ಉಲ್ಲೇಖಿಸುವುದಾದರೆ :

  • ಭಕ್ತಿ ಗೀತೆಗಳನ್ನು, ಶ್ಲೋಕಗಳನ್ನು ಶಹನಾಯಿ ನಾದದ ಮೂಲಕ ಪಸರಿಸಿದ ಬಿಸ್ಮಿಲ್ಲಾ ಖಾನ್

  • ವಂದೇ ಮಾತರಂನ್ನು ಗೌರವಿಸುವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ

  • ವಂದೇ ಮಾತರಂಗೆ ಸಂಗೀತ ನೀಡಿ ಫ್ಯಾಶನ್ ಲೋಕಕ್ಕೆ ಈ ಗೀತೆಯನ್ನು ಪರಿಚಯಿಸಿದ ಎ. ಆರ್. ರೆಹಮಾನ್

  • ಮೌಲಾನಾ ಅಬ್ದುಲ್ ಕಲಾಂ ಅಜಾದ್‌ರ ಸಂಬಂಧಿ ಶಿಕ್ಷಣ ತಜ್ಞ ಫೀರೋಜ್ ಭಕ್ತ್ ಅಹ್ಮದ್ (ಜನಗಣಮನದ ಸ್ಥಾನದಲ್ಲಿರಬೇಕಾದ್ದು ವಂದೇಮಾತರಂ ಹಾಡು. ಮುಸ್ಲಿಂನಾಗಿ ನಾನು ಈ ಸಂದೇಶವನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಮತ್ತು ನನ್ನ ದೇಶ ಬಾಂಧವರಿಗೆ ತಿಳಿಸಲು ಇಚ್ಛಿಸುತ್ತೇನೆ)

  • ವಂದೇ ಮಾತರಂ ಹಾಡುವುದು ದೇಶಭಕ್ತಿಗೆ ಪ್ರಮಾಣಪತ್ರವಲ್ಲ. ಆದರೆ ಅದನ್ನು ವಿರೋಧಿಸುವುದು ಪ್ರತ್ಯೇಕವಾದದ ಸಂಕೇತ ಎನ್ನುವ ಮುಕ್ತಾರ್ ಅಬ್ಬಾಸ್ ನಖ್ವಿ.

  • ನೀವೇನಂತೀರಿ ?

    ಪೂರಕ ಓದಿಗೆ

    `ವಂದೇ ಮಾತರಂ' ಹಾಡಲು ಸರ್ಕಾರದ ನಿರ್ದೇಶನ

    ವಂದೇಮಾತರಂ ಶತಮಾನೋತ್ಸವ ಗೊಂದಲದಲ್ಲಿ

     

    Print This PagePrint this page

    Email this Page

    ಮುಖಪುಟ

    Copyright ? Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com