Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 13 September 2006 10:51 PM

ಯೂನಿಕೋಡ್‌ನಲ್ಲಿ ವಿಕ್ರಾಂತಕರ್ನಾಟಕ.ಕಾಂ

ಬರಹ ವಾಸು ಮತ್ತೊಂದು ಸಾಧನೆ

ಕನ್ನಡ ಮತ್ತು ಕಂಪ್ಯೂಟರ್ ಎಂದಾಕ್ಷಣ ಬಹುಪಾಲು ಜನರಿಗೆ ತಕ್ಷಣ ಗುರುತಿಗೆ ಬರುವ ಹೆಸರು, ಬರಹ ವಾಸು. ಬೇರೆಯವರು ಇಲ್ಲ ಅಂತಲ್ಲ. ಅನೇಕ ಜನರು ಈ ದಿಸೆಯಲ್ಲಿ ದುಡಿದಿದ್ದಾರೆ ಮತ್ತು ದುಡಿಯುತ್ತಿದ್ದಾರೆ.

ಆದರೆ ಕನ್ನಡ ಜನಸಾಮಾನ್ಯರನ್ನು ಕಂಪ್ಯೂಟರ್ ಬಳಿಗೆ ಕರೆತಂದವರು ಶೇಷಾದ್ರಿ ವಾಸು. ಅವರ ಬರಹ ತಂತ್ರಾಂಶ ಇಂದು ಕೇವಲ ಕನ್ನಡಿಗರಲ್ಲಿ ಮಾತ್ರ ಜನಪ್ರಿಯವಲ್ಲ ಬದಲಿಗೆ ಸರ್ವ ಭಾರತೀಯ ಭಾಷಿಕರಲ್ಲಿಯೂ ಜನಪ್ರಿಯ. ಇತ್ತೀಚಿನ ಬರಹ ೭.೦ ರ ಸಹಾಯದಿಂದ ಕನ್ನಡ ಮಾತ್ರವಲ್ಲದೆ, ದೇವನಾಗರಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ, ಪಂಜಾಬಿ, ಬೆಂಗಾಲಿ, ಮತ್ತು ಒರಿಯಾ   ಲಿಪಿಗಳನ್ನೂ ಸಹ ವಿಂಡೋಸ್ ಆಧಾರಿತ ಕಂಪ್ಯೂಟರ್‌ಗಳಲ್ಲಿ ಬಳಸಬಹುದು. ಇನ್ನು ಬ್ಲಾಗ್ ಬರಹಗಾರರಿಗಂತೂ ಬರಹ IME ಭಾರತೀಯ ಭಾಷೆಗಳಲ್ಲಿ ಬ್ಲಾಗ್ ಮಾಡುವುದನ್ನು ಬಹಳ ಸುಲಭ ಸಾಧ್ಯ ಮಾಡಿದೆ.

ಈಗ ಕೆಲವು ದಿನಗಳಿಂದ ಬರಹ ವಾಸು ಏನು ಮಾಡುತ್ತಿದ್ದರು ಗೊತ್ತೆ? ವಿಕ್ರಾಂತ ಕರ್ನಾಟಕ ವೆಬ್‌ಸೈಟ್ ಅನ್ನು, ಹೆಚ್ಚಿನ ಶ್ರಮವಿಲ್ಲದೆ Unicodeನಲ್ಲಿಯೂ ಪ್ರಸ್ತುತ ಪಡಿಸುವಂತಾಗಲು ಅದಕ್ಕೆ ಬೇಕಾದ ತಂತ್ರಾಂಶ ಸಿದ್ದಪಡಿಸುತ್ತಿದ್ದರು. Unicode ನಲ್ಲಿ ವೆಬ್‌ಸೈಟ್ ಏಕೆ ಬೇಕು ಎಂಬುವುದರ ಬಗ್ಗೆ ಮುಂದೆಂದಾದರೂ ಬರೆಯೋಣ, ಆದರೆ ಈಗ ಹೇಳಬೇಕಾದ್ದಿಷ್ಟು: Unicode ಭವಿಷ್ಯದ ತಂತ್ರಜ್ಞಾನ. ಎಲ್ಲ ಅಂತರ್ಜಾಲ ಬಳಕೆದಾರರೂ Unicode ಆಧಾರಿತ ಆಪರೇಟಿಂಗ್ ಸಿಸ್ಟಮ್‌ಗಳಾದ ವಿಂಡೋಸ್ ಎಕ್ಸ್‌ಪಿ, ಲಿನಕ್ಸ್, ಮ್ಯಾಕಿಂಟಾಷ್ ಮುಂತಾದವುಗಳನ್ನು ಉಪಯೋಗಿಸಲು ಪ್ರಾರಂಭಿಸಿದ ಪಕ್ಷದಲ್ಲಿ ಕಂಪ್ಯೂಟರ್‍ನಲ್ಲಿ ಮತ್ತು ವಿಶೇಷವಾಗಿ ಇಂಟರ್‌ನೆಟ್‌ನಲ್ಲಿ, ಕನ್ನಡದಂತಹ ಭಾಷೆಗಳ ಬಳಕೆ ಮತ್ತು ಸೇವೆಯನ್ನು ಒದಗಿಸುವ ಅವಕಾಶ ಬಹಳ ಸುಲಭ ಸಾಧ್ಯವಾಗುತ್ತದೆ.

ಹೇಗೆ ಎನ್ನುತ್ತೀರಾ?

ಕೇವಲ ೨೦% ಇರುವ ವಿಂಡೋಸ್ ೯೮/೨೦೦೦ ಬಳಕೆದಾರರಿಗೂ ವಿಕ್ರಾಂತ ಕರ್ನಾಟಕ ತಲುಪಲಿ ಎಂದು ಬಯಸುವುದರಿಂದ ನಮ್ಮ ಕಛೇರಿಯಲ್ಲಿನ ತಂತ್ರಜ್ಞರಿಗೆ ಅದೆಷ್ಟು ಪಟ್ಟು ಹೆಚ್ಚಿಗೆ ಕೆಲಸ ಮಾಡುವ ಅವಶ್ಯಕತೆಯಿದೆ ಎನ್ನುವುದು ನಿಮಗೆ ಗೊತ್ತಿದ್ದರೆ ಮಾತ್ರ ನಿಮಗೆ Unicode ನ ಅವಶ್ಯಕತೆಯ ಅರಿವಾಗುತ್ತದೆ. ಆದರೂ, ಎಲ್ಲರೂ Unicode ಬಳಸುವ ದಿನಗಳೇನೂ ದೂರವಿಲ್ಲ. ಮೈಕ್ರೊಸಾಪ್ಟ್ ಕಂಪನಿ XBox ಎಂಬ ವಿಡಿಯೋ ಗೇಮ್ ಉಪಕರಣವನ್ನು ಅದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದುಡ್ಡಿಗೆ ಮಾರುತ್ತಿದೆ. ಕಾರಣ? ಅದರ ಬಳಕೆದಾರರು ಅದನ್ನು ಉಪಯೋಗಿಸಲು ಮೈಕ್ರೊಸಾಪ್ಟ್‌ನವರಿಂದಲೆ ಬಹುಪಾಲು ಗೇಮ್ಸ್ ಕೊಂಡುಕೊಳ್ಳಬೇಕು. ದುಡ್ಡಿರುವುದು ಅದರಲ್ಲೆ. ಅದೇ ರೀತಿ, ಹೋಗುತ್ತ ಹೋಗುತ್ತ, ಆಪರೇಟಿಂಗ್ ಸಿಸ್ಟಮ್‌ನ ಬೆಲೆಯನ್ನೂ ಸಹ ಕಡಿಮೆ ಮಾಡಬಹುದು, ಇಲ್ಲಾ ಬೇರೆಯ ಕಮ್ಮಿ ಬೆಲೆಯ ಆಪರೇಟಿಂಗ್ ಸಿಸ್ಟಮ್‌ಗಳೂ ಮಾರುಕಟ್ಟೆಗೆ ಬರಬಹುದು. ಅವೆಲ್ಲವೂ Unicode ಆಧಾರಿತವೇ ಆಗಿರುತ್ತವೆ.

ವಿಕ್ರಾಂತ ಕರ್ನಾಟಕದ ಹಿತೈಷಿಗಳೂ, ಪ್ರೋತ್ಸಾಹಕರೂ ಆದ ವಾಸುರವರಿಗೆ ಕೃತಜ್ಞತೆಗಳನ್ನು     ಸಲ್ಲಿಸುತ್ತ, ಇಂದಿನಿಂದ ವಿಕ್ರಾಂತ ಕರ್ನಾಟಕ Unicode ನಲ್ಲಿಯೂ ಲಭ್ಯವಾಗಲಿದೆ. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೆ: ನಮ್ಮ ವೆಬ್‌ಸೈಟ್‌ಗೆ ಬಂದ ತಕ್ಷಣ ಮೇಲೆ ಕಾಣಿಸುವ Unicode Version ಅನ್ನು ಕ್ಲಿಕ್ ಮಾಡುವುದು. Unicode ಸೌಲಭ್ಯವಿರುವ ಓದುಗರು ಇದನ್ನು ತಮ್ಮದಾಗಿಸಿಕೊಳ್ಳಲು ಸವಿನಯದ ಪ್ರಾರ್ಥನೆ.

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com