ಬಂತು ಶ್ರಾವಣಾ. . .
ಶ್ರಾವಣ ಬಂದಿದೆ ಮತ್ತೆ ಸೇವಂತಿಗೆ ಘಂ ಎಂಬ
ಪರಿಮಳದೊಂದಿಗೆ
ಜುಲೈ ೨೬ರಂದು ಶ್ರಾವಣ
ಆರಂಭ. ಜುಲೈ ೨೪- ೨೫ ಕ್ಕೆ ಅಮಾವಾಸ್ಯೆ ಗಳಿಗೆಗಳನ್ನು ಲೆಕ್ಕ ಹಾಕಿಕೊಂಡು ತೂಗಿ
ತೂಗಿ ಶ್ರಾವಣ ೨೬ರ ಬುಧವಾರ ಅಂತ ಪುರೋಹಿತರು ನಿರ್ಧಾರ ಮಾಡಿದ್ದಾರೆ. ನಾಗರ ಪಂಚಮಿ,
ಕೃಷ್ಣಜನ್ಮಾಷ್ಟಮಿ, ಗೌರಿ ಹಬ್ಬ, ಚೌತಿ, ಮಂಗಳ ಗೌರಿ, ಶ್ರಾವಣ ಶನಿವಾರ ಹಬ್ಬಗಳೋ
ಹಬ್ಬಗಳು. ಖರ್ಚಿನ ತಿಂಗಳು. ಆದರೂ ಮನೆಯಲ್ಲಿ ಸಡಗರ. ಅರಿಶಿಣ ಕುಂಕುಮ
ಸಂಭ್ರಮಗಳು.