Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Wednesday, 13 September 2006 10:51 PM

ವಿಜ್ಞಾನ-ಸುಜ್ಞಾನದ ಕುರಿತು ಒಂದು ಚಿಂತನೆ

ವಿಜ್ಞಾನದ ಇತಿಮಿತಿ ಮತ್ತು ಜ್ಞಾನದ ಪರಿಕಲ್ಪನೆ ನಮ್ಮಲ್ಲಿರುವ ಬಗೆ

  • ಆರ್. ಪ್ರಭಾಕರ ಶೆಣೈ

  • 08258-232638

    ಭೌತಿಕ ವಿಜ್ಞಾನವು ಸೃಷ್ಠಿಯನ್ನು ನಮ್ಮ ಇಂದ್ರಿಯಗಳ ಅನುಭವಕ್ಕೆ ಬರುವ ಬಾಹ್ಯ ಜಗತ್ತಿಗೆ ಸೀಮಿತಗೊಳಿಸಿದೆ. ಆದರೆ ವೇದಗಳ ದ್ರಷ್ಟಾರರಾದ ಪ್ರಾಚೀನ ಭಾರತದ ಋಷಿ ಮುನಿಗಳು ಇಂದ್ರಿಯಾತೀತವಾದ ಪ್ರಜ್ಞೆಯ ಉಚ್ಛಸ್ಥರದಿಂದ ಸೃಷ್ಠಿಯ ನಿಜರೂಪದ ಅನುಭವವನ್ನು ಪಡೆದಿದ್ದರು. ಅವರ ಪ್ರಕಾರ ಜೀವದ ಅನುಭವವನ್ನು ಪಡೆದಿದ್ದರು. ಅವರ ಪ್ರಕಾರ ಜೀವದ ಅನುಭವದ ಬಾಹ್ಯಜಗತ್ತು ಅಂದರೆ ಒಳಗೆ ಇರುವ ಅನುಭವಾತೀತವಾದ ಸಮಸ್ತ ಜಗತ್ತಿನ ಅತೀ ಅಲ್ಪ ಭಾಗವಾಗಿದೆ. ಅಯಾಮಸಿದ್ಧಾಂತದ ಪ್ರಕಾರ ಸೃಷ್ಠಿಯು ದೇವರ ಒಂದು ವಿಶೇಷ ಗುಣವಾಗಿದ್ದು ಅದು ಅವ್ಯಕ್ತ ರೂಪದಲ್ಲಿರುವಾಗ ಅವನ ಧರ್ಮವೆಂದೂ ವ್ಯಕ್ತ ರೂಪ ತಾಳಿದಾಗ ಅವನ ಸ್ವಭಾವವೆಂದೂ ಪರಿಗಣಿಸಲಾಗಿದೆ. ದೇವರ ಸಂಕಲ್ಪ ಶಕ್ತಿಯಿಂದ ಅವ್ಯಕ್ತವಾಗಿರುವ ಸೃಷ್ಠಿಯು ವ್ಯಕ್ತವಾಗಿ ಸತ್‌ಚಿತ್ ಆನಂದ ಸ್ವಭಾವವಾಗುವುದು. ದೇವರ ಈ ಸ್ವಭಾವವನ್ನೇ ಬ್ರಹ್ಮನ್ ಎಂದು ಕರೆಯಲಾಗಿದ್ದು ದೇವರನ್ನು ಪರಬ್ರಹ್ಮನ್ ಎಂದು ಈ ನೂತನ ಸಿದ್ಧಾಂತದಲ್ಲಿ ಪರಿಗಣಿಸಲಾಗಿದೆ. ಆದುದರಿಂದ ಪರಬ್ರಹ್ಮನು ತನ್ನ ಸತ್‌ಚಿತ್ ಆನಂದ ಸ್ವಭಾವದ ಇನ್ನೊಂದು ರೂಪವಾದ ಸೃಷ್ಠಿಗಿಂತ ಭಿನ್ನವಾಗುತ್ತ, ಗೋಚರ ಜಗತ್ತಿನ ಒಳಗುಟ್ಟನ್ನು ಬಲ್ಲವನಿಗೆ ಅಗೋಚರ ಸೃಷ್ಠಿಕರ್ತನಾದ ಪರಬ್ರಹ್ಮನ ಇರುವಿಕೆಯು ಅನುಭವಕ್ಕೆ ಬರುವುದು.

     

    ಪರಬ್ರಹ್ಮನ ಸಂಕಲ್ಪ ಶಕ್ತಿಯು ಆಯಾಮಿಯವಾಗಿದ್ದು ಸತ್ವ, ರಜ ಮತ್ತು ತಮ ಗುಣಗಳಿಂದ ಕೂಡಿದ್ದು ಧನಾತ್ಮಕ ಮತ್ತು ಋಣಾತ್ಮಕವಾಗಿದೆ. ಮಾತ್ರವಲ್ಲದೆ ಈ ಆಯಾಮಿಯ ಶಕ್ತಿ ಮೂಲರೂಪವು ನಾದಮಯವಾಗಿರುವುದರಿಂದ ಬ್ರಹ್ಮನನ್ನು ನಾದಬ್ರಹ್ಮನೆಂದು ವೇದವೇದಾಂತಗಳಲ್ಲಿ ಕರೆಯಲಾಗಿದೆ. ಈ ಶಕ್ತಿಯ ಮೂರು ಗುಣ ವಿಶೇಷತೆಗಳನ್ನು ಅದರಲ್ಲಿಯೇ ಇರುವ ಧೀಶಕ್ತಿಯು ಸಂಪೂರ್ಣ ಹಾಗೂ ವೈಜ್ಞಾನಿಕವಾಗಿ ಬಳಸಿ ಸೃಷ್ಠಿಯನ್ನು ರಚಿಸಿದೆ. ಸಂಸ್ಕೃತದಲ್ಲಿ ಸ್ವಭಾವವನ್ನು ಪ್ರಕೃತಿ ಎಂದು ಕರೆಯಲಾಗಿದೆ. ಆದುದರಿಂದ ಪ್ರಕೃತಿಯ ನಿಯಮಗಳಿಗೆ ಬದ್ಧವಾಗಿಯೇ ಧೀಶಕ್ತಿಯು ವಿವಿಧ ಆಯಾಮಗಳ ವಿವಿಧ ಹಂತಗಳಲ್ಲಿ ಹರಡಿದ ಜಗತ್ತುಗಳನ್ನು ವಿನ್ಯಾಸಗೊಳಿಸಿದೆ. ಬ್ರಹ್ಮನ್ ಅಥವಾ ಸತ್‌ಚಿತ್ ಆನಂದದ ವಸ್ತುನಿಷ್ಟ ರೂಪವಾದ ಈ ಎಲ್ಲಾ ಜಗತ್ತುಗಳು ಸೇರಿ ಬ್ರಹ್ಮಾಂಡವೆನಿಸಿದೆ. ಈ ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ಜೀವವು ಅದರ ವ್ಯಕ್ತಿ ರೂಪವಾಗಿದ್ದು ಪಿಂಡಾಂಡವೆಂದು ವೇದ ವೇದಾಂತಗಳಲ್ಲಿ ಕರೆಯಲ್ಪಟ್ಟಿದೆ.

     

    ಬ್ರಹ್ಮಾಂಡವು ಆಯಾಮಗಳಿಂದ ರಚಿಸಲ್ಪಟ್ಟಿದೆ ಎಂದು ವೇದಾಂತ ಹಾಗೂ ವಿಜ್ಞಾನವು ಒಪ್ಪಿಕೊಳ್ಳುತ್ತದೆ. ವೇದಾಂತ ಎಲ್ಲವೂ ದೇಶ(ಆಕಾಶ)ಮತ್ತು ಕಾಲದಿಂದ ನಿರ್ಮಿತ ಬ್ರಹ್ಮನ್ ಎಂದು ಸಾರಿದರೆ, ಸ್ಪೇಸ್ ಮತ್ತು ಟೈಂನಿಂದ ಉಂಟಾದ ಭೌತ ಆಗಲೀ ಸ್ವತಂತ್ರವಾಗಿ ತನ್ನಿಂದ ತಾನೇ ಜೀವದ ಅನುಭವದ ಸ್ವಪ್ನ, ಜಾಗೃತ ಸುಷುಪ್ತಿ ಮತ್ತು ತುರೀಯಾ ಎಂಬ ನಾಲ್ಕು ಅವಸ್ಥೆಗಳನ್ನು ವಿವರಿಸಲು ಅಸಮರ್ಥವಾಗಿದೆ. ಆದುದರಿಂದ ನೂತನ ಆಯಾಮಗಳೆಂದು ಪರಿಗಣಿಸಿ, ಸ್ಪೇಸ್ ಮತ್ತು ಟೈಂಗಳನ್ನು ಅನುಕ್ರಮವಾಗಿ ಅವುಗಳ ಉಪಪ್ರಧಾನ ಆಯಾಮಗಳೆಂದು ಪರಿಗಣಿಸಲಾಗಿದೆ. ಪ್ರಧಾನ ಆಯಾಮಗಳೆಂದು ಪರಿಗಣಿಸಲಾಗಿದೆ. ಉದ್ದ, ಅಗಲ ಮತ್ತು ಎತ್ತರವನ್ನು ಆಕಾಶ ಟೈಂಗನುಗುಣವಾಗಿ ಪರಿಗಣಿಸಲಾಗಿದೆ. ಪ್ರಧಾನ ಆಯಾಮಗಳಿಗೆ ಸಾಪೇಕ್ಷವಾಗಿ ಉಪಪ್ರಧಾನ ಆಯಾಮಗಳು ಋಣಾತ್ಮಕ ಹಾಗೂ ಅಸತ್ಯವಾಗಿವೆ. ಬ್ರಹ್ಮಾಂಡದ ರಚನೆಯು ಬರೇ ಆಯಾಮಗಳಿಂದ ಆಗದೇ ಅವುಗಳ ಸಂಯುಕ್ತಗಳಿಂದ ಆಗಿದೆ. ಆದುದರಿಂದ ಬ್ರಹ್ಮಾಂಡದ ಸೃಷ್ಠಿರೂಪವಾಗಿದ್ದು ಪಿಂಡಾಂಡವೆಂದು ಕರೆಯಲ್ಪಡುವ ಪ್ರತಿಯೊಂದು ಜೀವನದ ಅನುಭವದ ನಾಲ್ಕು ಅವಸ್ಥೆಗಳು ನಾಲ್ಕು ಆಯಾಮಗಳಾಯಾಮ ಸಂಯುಕ್ತದಿಂದ ಉಂಟಾದರೆ ಅದರ ಜಾಗೃತಾವಸ್ಥೆಯು ಆಕಾಶ- ಟೈಂ ಸಂಯುಕ್ತದಿಂದ ಉಂಟಾಗಿದೆ. ಅದರ ಸುಷುಪ್ತಿ ಅವಸ್ಥೆಯು ಕಾಲ, ಸ್ಪೇಸ್ ಸಂಯುಕ್ತದಿಂದ ಉಂಟಾದರೆ ಅದರ ತುರೀಯಾ ಅವಸ್ಥೆಯು ಆಕಾಶ ಕಾಲ ಸಂಯುಕ್ತದಿಂದ ಉಂಟಾಗಿದೆ. ಧನ ಮತ್ತು ಋಣ ಆಯಾಮಗಳ ಸಂಯುಕ್ತಗಳಿಂದ ರಚಿಸಲ್ಪಟ್ಟ ಸೃಷ್ಠಿಯು ಆಯಾಮಗಳಿಗೆ ಅತೀತನಾದ ಪರಬ್ರಹ್ಮನಿಗೆ ಹೋಲಿಕೆಯಲ್ಲಿ ಸಾಪೇಕ್ಷ ಸತ್ಯದ ರೂಪದಲ್ಲಿದೆ. ಪರಬ್ರಹ್ಮನು ಮಾತ್ರ ಪ್ರತಿನಿತ್ಯ ಸತ್ಯವಾಗಿದ್ದು ಯಾವ ಬದಲಾವಣೆಯೂ ಒಳಪಡದವನಾಗಿದ್ದಾನೆ.

     

    Print This PagePrint this page

     

    Email this Page

    ಮುಖಪುಟ

    Copyright ? Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com