Fonts Problem?

Downloads

? Wallpapers

? Vikrantakarnataka Weekly

ಪತ್ರಿಕೆ ಬಿಡುಗಡೆ

DU8? 17 g?z? ????i? ?q?U??/span> ?*????s?/a>

Wednesday, 13 September 2006 10:51 PM

ಲೋಗೋ ತಂತ್ರಾಂಶದ ಕರ್ತೃ ಪವನಜಗೆ ಮಂಥನ ಪ್ರಶಸ್ತಿ

 

ಪ್ರಾಥಮಿಕ ಶಾಲಾ ಮಕ್ಕಳ ಕಲಿಕೆಗೆ ಪೂರಕವಾಗಿ ಸಿದ್ಧಪಡಿಸಲಾದ ತಂತ್ರಾಂಶ ಲೋಗೋ (Logo). ಇದನ್ನು ಉಪಯೋಗಿಸಿ ಮಕ್ಕಳು ಗಣಕದಲ್ಲಿ ಕ್ರಮವಿಧಿ ತಯಾರಿಯ ಮುಖ್ಯ ಅಂಶಗಳನ್ನು ಕಲಿಯುತ್ತಾರೆ. ಅರವತ್ತರ ದಶಕದಿಂದಲೇ ಲೋಗೋ ಇದ್ದರೂ ಇಂಗ್ಲೀಷ್, ಜರ್ಮನ್, ಫ್ರೆಂಚ್, ಇಟಾಲಿಯನ್, ಗ್ರೀಕ್, ಡಚ್, ಜಪಾನ್ ಮುಂತಾದ ಭಾಷೆಗಳಲ್ಲಿ ಮಾತ್ರ ಇದು ಚಾಲ್ತಿಯಲ್ಲಿತ್ತು. ಈಗ ಭಾರತೀಯ ಭಾಷೆಗಳಲ್ಲೇ ಪ್ರಥಮವಾಗಿ ಇದು ಕನ್ನಡದಲ್ಲಿ ಲಭ್ಯ! ಇದಕ್ಕೆ ಕಾರಣಕರ್ತರಾದವರು ಕನ್ನಡ ಮಾಹಿತಿ ತಂತ್ರಜ್ಞಾನದ ಪರಿಚಿತ ವ್ಯಕ್ತಿ ಡಾ.ಯು.ಬಿ.ಪವನಜ.

 

ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಲೋಗೋ ಸಿದ್ಧಪಡಿಸಿರುವುದರಿಂದ ಲೋಗೋದಲ್ಲಿ ಕ್ರಮವಿಧಿ ರಚಿಸುವ ಮೂಲಕ ಮಕ್ಕಳು ಗಣಿತ, ತರ್ಕಗಳಲ್ಲಿ ಪರಿಣತಿ ಹೊಂದಲು ಸಹಾಯಕವಾಗುತ್ತದೆ. ಅಲ್ಲದೆ ಗಣಕ ತಂತ್ರಾಂಶ ತಯಾರಿಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ದೊಡ್ಡವರೂ ಇದರ ಅನುಕೂಲ ಪಡೆಯಬಹುದು.

 

ಲೋಗೋ ತಂತ್ರಾಂಶದ ಕನ್ನಡ ಆವೃತ್ತಿಯನ್ನು ಸಿದ್ಧಪಡಿಸಿರುವ ಡಾ.ಯು.ಬಿ.ಪವನಜ, ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವಾರು ಪ್ರಥಮಗಳ ಸರದಾರರು. ಅವರ ಸಾಧನೆ-ಹೆಗ್ಗಳಿಕೆಗಳು ಗುರುತಿಸಲರ್ಹವಾದವು.

 

ಡಾ.ಯು.ಬಿ.ಪವನಜ ಅವರ ಕನ್ನಡ ಲೋಗೋ ಈ ಬಾರಿ `ಮಂಥನ ಪ್ರಶಸ್ತಿ? ಗೆ ಭಾಜನವಾಗಿದೆ.

 

ಕನ್ನಡ ಗಣಕ ಕ್ಷೇತ್ರದಲ್ಲಿ ಪವನಜ ಸಾಧನೆಗಳನ್ನು ಗುರುತಿಸುವುದಾದರೆ :

  • ಚಿಕ್ಕ ಮಕ್ಕಳಿಗೆ ಮತ್ತು ಕನ್ನಡ ಬಾರದವರಿಗೆ ಕನ್ನಡವನ್ನು ಗಣಕದಲ್ಲಿ ಆಟದ ಮೂಲಕ ಕಲಿಯಲು ಉಪಯೋಗಿಯಾಗುವ "ಕನ್ನಡ ಕಲಿ" ಎಂಬ ತಂತ್ರಾಂಶದ ಕತೃ. ಇದು ಬಹುಮಾಧ್ಯಮವನ್ನು ಒಳಗೊಂಡಿದೆ. ಕನ್ನಡ ಅಕ್ಷರಗಳನ್ನು ಸರಿಯಾಗಿ ಬರೆಯುವ ರೀತಿಯನ್ನು ಅನಿಮೇಶನ್ ವಿಧಾನದ ಮೂಲಕ ಹಾಗೂ ಸರಿಯಾದ ಉಚ್ಚಾರವನ್ನು ಧ್ವನಿ ಮೂಲಕ ವಿವರಿಸುತ್ತದೆ.

  • ಕನ್ನಡದ ಪ್ರಪ್ರಥಮ ಅಂತರಜಾಲ ತಾಣ "ವಿಶ್ವ ಕನ್ನಡ"ದ (http://www.vishvakannada.com/) ನಿರ್ಮಾತೃ.

  • ವಿಶ್ವಕನ್ನಡ ವೆಬ್‌ಸೈಟ್‌ಗೆ ಗೋಲ್ಡನ್ ವೆಬ್ ಪ್ರಶಸ್ತಿ, ಇದು ಗೋಲ್ಡನ್ ವೆಬ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಭಾಷಾ ತಾಣವೂ ಹೌದು.

  • ಬ್ಲೂ ರಿಬ್ಬನ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಭಾಷಾ ತಾಣ ಎಂಬ ಅಗ್ಗಳಿಕೆ

  • "ನುಡಿ" ತಂತ್ರಾಂಶ ತಯಾರಿಕೆಯ ಕಲ್ಪನೆ ಮತ್ತು ನಿರ್ದೇಶನ.

  • ೫ ರಿಂದ ೮ನೇ ತರಗತಿಯ ವರೆಗಿನ ಮಕ್ಕಳಿಗೆ ಗಣಕ ಕ್ರಮವಿಧಿ ರಚನೆಯ ಮೂಲ ಸಿದ್ಧಾಂತಗಳನ್ನು ಕಲಿಸುವ ಲೋಗೋ ತಂತ್ರಾಂಶದ ಕನ್ನಡ ಆವೃತ್ತಿಯ ತಯಾರಿ.

  • ಮೈಕ್ರೋಸಾಫ್ಟ್ ಕಂಪೆನಿಗೆ ಕನ್ನಡ ಸಲಹೆಗಾರ.

  • ಪಾಮ್ ಮಾದರಿಯ ಅಂಗೈ ಗಣಕದಲ್ಲಿ ಭಾರತೀಯ ಭಾಷೆಗಳಲ್ಲೇ ಪ್ರಪ್ರಥಮ ಬಾರಿಗೆ ಕನ್ನಡದ ಅಳವಡಿಕೆ.

ಶನಿವಾರ ದೆಹಲಿಯಲ್ಲಿ ನಡೆದ ಕಾರ್‍ಯಕ್ರಮದಲ್ಲಿ ಡಾ.ಯು.ಬಿ. ಪವನಜ ಮಂಥನ ಪ್ರಶಸ್ತಿಯನ್ನು ಸ್ವೀಕರಿಸಿದರು. ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ :

http://www.vishvakannada.com/KannadaLogo  

www.vishvakannada.com 

Print This PagePrint this page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com