|
ಈ ಪ್ರೀತಿಯಾ ಕೂಗು ಕೇಳದೇ ?
?
ವಿ.ಜಿ. ದೊಡ್ಡಿ ಕುಮಾರ
ನನ್ನ ಪ್ರಿತಿ ನಿನಗೆ ಏನಂದೂ
ಅರಿಯಲಿಲ್ಲವೇ. ನೀನೇಕೆ ನೋಡಿ ಸುಮ್ಮನೆ ಹೋಗುತೀಯಾ. ನನ್ನ ಮೇಲೆ ನಿನಗೆ ಪ್ರಿತಿ
ಇಲ್ಲವೆ? ಹೇಳಲೊಲ್ಲೆ ಏಕೆ?
ಆ ನಿನ್ನ ಮುಖದ ಕಾಂತಿ ಹುಣ್ಣಿಮೆಯ
ಚಂದ್ರನಂತೆ ಕಂಗೊಳಿಸುತ್ತಿದೆ. ಆ ನಿನ್ನ ನಡೆ ನುಡಿ ಗುಣಗಳೆಲ್ಲವೂ ನಂಗಿಷ್ಟ. ಇದನ್ನೆಲ್ಲಾ ನೋಡಿ
ನೋಡಿ ನನ್ನ ಮನಸ್ಸಿಲ್ಲಿ ತಳಮಳ ಉಂಟಾಗಿದೆ. ನನ್ನ ಮನಸ್ಸನ್ನು ಹಿಡಿತದಲ್ಲಿಟುಕೊಳ್ಳಲು
ಅಸಾಧ್ಯವಾಗುತ್ತಿದೆ. ನೀ ಬಂದರೆ ಆಕಾಶದಲ್ಲಿ ಜೋಡಿ ಗಿಳಿಗಳಂತೆ ಹಾರಾಡುತ್ತಾ ಶಿವನ ಸಮುದ್ರದಲ್ಲಿ
ಜಾರುವ ಎರಡು ನಕ್ಷತ್ರ ಮೀನಿನಂತೆ ಈಜಾಡೋಣ ಎಂದು ಕಾತರಿಸುತ್ತಿದೆ ಈ ನನ್ನ ಮನಸ್ಸು.
ನಿನ್ನ ಮನಸ್ಸಿನಲ್ಲಿ ಏನಿರುವುದು ತಿಳಿಸು. ನೀನೇ ನನ್ನುಸಿರು. ನನ್ನ ತಂದೆ
ಯಾತಕ್ಕಾದರೂ ಕೂಗಿದರೆ ನೀನೇ ಕೂಗಿದಂತಾಗುತ್ತದೆ. ಎತ್ತ ಹೋದರೂ ನಿನ್ನದೇ ದನಿ ಮನದಲ್ಲಿ.
ಓಡಿ ಬಂದು ನೋಡಿದರೆ ಅಲ್ಲಿ ನೀನಿಲ್ಲ ! ಆ ವಾಸ್ತವ ನನಗೆ ಬೇಡ. ನೀ ಬಂದು ನಿಲ್ಲುವ ನನ್ನ ಕನಸನ್ನು
ವಾಸ್ತವಕ್ಕೆ ತರುವ ಮನ ಮಾಡು.
ನನ್ನ ಅಮ್ಮ ಏನಾದರೂ
ಕೆಲಸ ಹೇಳಿದರೆ ನಿನ್ನ ನೆನಪಿನಲ್ಲಿ ಇನ್ನೇನೋ ಮಾಡಿರುತ್ತೇನೆ. ಅಮ್ಮ ಬೈಯುತ್ತಾರೆ.
ನೀನಿಲ್ಲದ ನನ್ನ ಬಾಳು ತಪ್ಪು ತಪ್ಪು. ನೀನೊಪ್ಪದ ನನ್ನ ಬದುಕಲ್ಲಿ ಬರೀ ಕಪ್ಪು ಕಪ್ಪು.
ಏನೇ ತಪ್ಪು ಮಾಡಿದರೂ
ಕೂಡ ನನಗೆ ತಪ್ಪಾಗಿ ಕಾಣುವುದೇ ಇಲ್ಲ. ಯಾಕೆಂದರೆ ನಿನ್ನ ಸುಂದರ ನೆನಪು ಮನದ
ತುಂಬಾ ಇರುತ್ತದಲ್ಲ ! ರಾತ್ರಿ ಹೊತ್ತಿನಲ್ಲಿ ನಿದ್ದೆಯೆಂಬುದು ಬಲು ದೂರ. ಕಾಲೇಜಿನಲ್ಲಿ ಉಪನ್ಯಾಸಕರು
ಏನಂತಾರೋ ಕೇಳಿಸದು. ನಿನ್ನ ಕಲರವವೇ ಕಿವಿತುಂಬಾ. ಗೆಳೆತಿಯರ ಮಧ್ಯೆ ಮಾತಿಲ್ಲದೆ ನಿನ್ನ
ನೆನಪಲ್ಲಿ ಕಳೆದು ಹೋಗಿದ್ದೇನೆ...
ಎಂದು ಬರುವೆ ಬಾಳ ಬಾಗಿಲಿಗೆ
?ಕಾಯುತಿರುವೆ. |