|
|
|
Monday, 04 September 2006 04:45 PM |
|
ಮಹಿಳಾಸಮಿತಿಯಿಂದ ಸರಣಿಕಾರ್‍ಯಕ್ರಮಗಳು
ಯಶಸ್ವಿ ಪುರುಷನ
ಹಿಂದೆ ಮಹಿಳೆಯ ಶ್ರಮವಿರುತ್ತದೆ... ಎನ್ನುತ್ತಾರೆ. ಈ ಸಲದ ವಿಶ್ವ ಕನ್ನಡ
ಸಮ್ಮೇಳನವನ್ನು ಯಶಸ್ವಿಗೊಳಿಸಲು ವಿವಿಧ ಸಮಿತಿಗಳಲ್ಲಿ ಮಹಿಳೆಯರೂ ಸಕ್ರಿಯರಾಗಿರುವುದಷ್ಟೇ
ಅಲ್ಲದೆ ಮಹಿಳೆಯರದೇ ಪ್ರತ್ಯೇಕ ಸಮಿತಿಯೂ ಇದೆ. ಈ ಸಮಿತಿಯು ಆಯೋಜಿಸಿರುವ ಮುಖ್ಯ
ಕಾರ್ಯಕ್ರಮಗಳ ಪೈಕಿ ವಿಚಾರಗೋಷ್ಠಿಗಳು, ಭಾಷಣಗಳು, ಪ್ರಾತ್ಯಕ್ಷಿಕೆಗಳು ಮತ್ತು
ಕಲಾಪ್ರದರ್ಶನಗಳು ಸೇರಿವೆ. ವೇದಿಕೆ ಮಹಿಳೆಯರದೇ ಆದರೂ ಪ್ರೇಕ್ಷಕರಾಗಿ ಪುರುಷರಿಗೂ
ಆದರದ ಆಹ್ವಾನವಿದೆಯೆನ್ನಿ!
www.murthy.com ನ ಪ್ರಖ್ಯಾತ
ಇಮಿಗ್ರೇಷನ್ ಎಟಾರ್ನಿ ಶೀಲಾಮೂರ್ತಿ 'Secrets of a
Successful CEO' ಏನೆಂದು ತಿಳಿಸಲಿದ್ದಾರೆ. ಡಾ. ಪ್ರೇಮಾ ಗಂಗಣ್ಣ ಅವರು ಪೌಷ್ಟಿಕ
ಆಹಾರದ ಕುರಿತು ಮಾತಾಡುತ್ತಾರೆ. ದಕ್ಷಿಣ ಏಷ್ಯಾದ ಮಹಿಳೆಯರು ಅಮೆರಿಕದಲ್ಲಿ
ತೋರುತ್ತಿರುವ ನಿರ್ವಹಣೆ' ಕುರಿತು ಗೀತಾ ರಾಮಮೂರ್ತಿ ಬೆಳಕುಚೆಲ್ಲುತ್ತಾರೆ.
ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕ-ರಕ್ಷಕ ಸಹಯೋಗದ ಪ್ರಯೋಜನಗಳ ಬಗ್ಗೆ ಪೂರ್ಣಿಮಾ
ಜೈರಾಜ್ ಮತ್ತು ಅಮೆರಿಕ ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ
ಅಮೆರಿಕನ್ನಡತಿ ರಾಜಕಾರಣಿ ಜಯಂತಿ ರಾವ್ ಮಾತನಾಡಲಿದ್ದಾರೆ. ಡಾ. ಅಂಜನಾ ರಾಮ್
ಅವರಿಂದ ಎಂಪ್ಟಿ ನೆಸ್ಟ್ ಸಿಂಡ್ರೊಮ್' ವಿಷಯದ ಬಗ್ಗೆ ಮತ್ತು ಪ್ರತಿಮಾ ರಾಮ್
ಅವರಿಂದ ಬ್ಯಾಂಕಿಂಗ್ ಉದ್ಯಮದ ಬಗ್ಗೆ ಉಪನ್ಯಾಸಗಳಿವೆ. ಇವಲ್ಲದೆ ಬಹುಜನರ ಆಸಕ್ತಿಯನ್ನು
ಕೆರಳಿಸಬಹುದಾದ ವಿಚಾರಗೋಷ್ಠಿಯೊಂದೂ ಏರ್ಪಟ್ಟಿದೆ. ವಿಷಯ
Dating and Marriage!
ಸ್ಥಳೀಯ
ಪ್ರತಿಭೆಗಳ ವಿವಿಧ ಕರಕುಶಲ ಕಲೆಗಳ ಪ್ರದರ್ಶನ, ಮೆಹಂದಿ, ಫೇಶಿಯಲ್ಸ್ ಮತ್ತಿತರ
ಸೌಂದರ್ಯವರ್ಧನೆಯ ಕಾರ್ಯಾಗಾರಗಳು, ರೇಷ್ಮೆಸೀರೆ ಬಹುಮಾನದ ಅದೃಷ್ಟಚೀಟಿ,
ಆರು ವರ್ಷಗಳೊಳಗಿನ ಮಕ್ಕಳಿಗೆ ಫೇಸ್‌ಪೈಂಟಿಂಗ್, ಕಾರ್ಟೂನ್ ಕಾಸ್ಟ್ಯೂಮ್ಸ್
ಆಕರ್ಷಣೆಗಳು. ಇವು ಮಹಿಳಾಸಮಿತಿ ಆಯೋಜಿಸಿರುವ ಇನ್ನಿತರ ಪ್ರಸ್ತುತಿಗಳು. ಒಂದು
ನಿಮಿಷದಲ್ಲಿ ಕೇಶ ಶೃಂಗಾರ ಮಾಡಿಕೊಡುವ ಗಿನೆಸ್ ದಾಖಲೆ ಸ್ಥಾಪಿಸಿರುವ ಬೆಂಗಳೂರಿನ
`ವನ್ ಮಿನಿಟ್ ಉಮಾ' ಅವರನ್ನು ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದ್ದು ಅವರ ಭಾಗವಹಿಸುವಿಕೆ
ಮತ್ತು ಅದ್ಭುತ ಕೈಚಳಕದ ಪ್ರದರ್ಶನಗಳು ಅವರಿಗೆ ಅಮೆರಿಕ ಪ್ರಯಾಣದ ವಿಸಾ
ಲಭ್ಯತೆಯ ಮೇಲೆ ನಿರ್ಧಾರವಾಗಲಿವೆ. |
|
Print
this page |
ಮುಖಪುಟ |
|