Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 11 October 2006 01:04 PM

ಸೆಂಟ್ ಪೌಲ್‌ನಲ್ಲಿ ಎಸ್. ಪಿ. ಬಿಯವರ ಸಂಗೀತ ರಸ ಸಂಜೆ

ಬಡ-ನಿರ್ಗತಿಕ ಮಕ್ಕಳ ಉನ್ನತಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ `ವಿಭಾ' ಸಂಸ್ಥೆಯ ವತಿಯಿಂದ ಸೆಪ್ಟೆಂಬರ್ ೨೩, ೨೦೦೬ರಂದು ಸೆಂಟ್‌ಪೌಲ್‌ನ ಬೆಥೆಲ್ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ಸಂಗೀತ ಸಂಜೆ.


ಶಾಂತಲಾ ರವೀಂದ್ರ, ಮಿನ್ನೆಸೊಟ, ಅಮೆರಿಕ

 

ಅಂದು ನಡೆದ ಕಾರ್ಯಕ್ರಮದಲ್ಲಿ ಎಸ್.ಪಿ.ಬಿಯವರ ಇಂಪಾದ ದನಿಗೆ ದನಿಗೂಡಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಿದ ಕಲಾವಿದರು ಎಸ್.ಪಿ.ಬಿಯವರ ಸಹೋದರಿ ಎಸ್.ಪಿ. ಶೈಲಜಾ ಮತ್ತು ಯುವ ಪ್ರತಿಭೆಗಳಾದ ಕುಮಾರಿ ಗೋಪಿಕಾ ಪೂರ್ಣಿಮಾ ಮತ್ತು ಮಲ್ಲಿಕಾರ್ಜುನ ರಾವ್ ಬೋಡ ಹಾಗೂ ಸಂಗೀತದ ರಂಗನ್ನು ಮುಗಿಲಿಗೇರಿಸಲು ಸಹಕರಿಸಿದ ವಾದ್ಯವೃಂದ.
 

ಸಂಗೀತ ಸಂಜೆಯು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರಗೀತೆಗಳನ್ನೊಳಗೊಂಡು, ೧೪೦೦ಕ್ಕೂ ಹೆಚ್ಚು ಜನರ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು. ಹಳೆಗನ್ನಡ ಚಿತ್ರಗೀತೆ `ಸಂತೋಷಕ್ಕೆ ಹಾಡು ಸಂತೋಷಕ್ಕೆ' ಗೀತೆಯು ಹೊರನಾಡ ಕನ್ನಡಿಗರಲ್ಲಿ ಹೊಸ ಉತ್ಸಾಹ-ಆನಂದದ ಅಲೆಯನ್ನೇ ಎಬ್ಬಿಸಿತು. ಕಿವಿಗಚ್ಚಿಡುವ ಕರತಾಡನಗಳ ನಡುವೆ ಗಾನಕೋಗಿಲೆಗಳಿಗೆ ಸ್ವಾಗತ ಮತ್ತು ವಂದನಾರ್ಪಣೆಗಳನ್ನು ಅರ್ಪಿಸಿದವರು ರವಿ ಸುರಾ ಮತ್ತು ವೀರೇಶ್ ಮಠದ್.
 

ಈ ಕಾರ್ಯಕ್ರಮದ ಕುರಿತು ಮಿನ್ನೆಯಾಪೊಲಿಸ್-ಸೇಂಟ್ ಪೌಲ್ ಅವಳಿ ನಗರಗಳ ಸ್ಥಳೀಯ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ ಚಾನಲ್ ಗಳಲ್ಲಿ ಪ್ರಸಾರಗೊಂಡಿದ್ದು, ಹೆಚ್ಚಿನ ಜನರ ಮನಸೆಳೆಯುವುದರೊಂದಿಗೆ ನಿರೀಕ್ಷೆಗೂ ಮೀರಿದ ಪ್ರಚಾರವನ್ನು ಕಂಡಿದೆ. ಇಂಥ ಮನರಂಜನಾ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತ, ದೇಶ-ವಿದೇಶಗಳ ಬಡ ಮಕ್ಕಳ ಸೇವೆಯನ್ನು ನಿಸ್ವಾರ್ಥವಾಗಿ ಪೂರೈಸಿಕೊಂಡು ಬಂದಿರುವ `ವಿಭಾ' ಸಾಧನೆಯನ್ನ ಶ್ಲಾಘಿಸಲೇಬೇಕು.
 

`ವಿಭಾ' ಕುರಿತು ಪತ್ರಿಕೆಗಳಲ್ಲಿನ ಲೇಖನಗಳು


http://www.twincities.com/mld/twincities/15588320.htm
http://www.twincities.com/mld/twincities/entertainment/15567175.htm 
http://www.twincities.com/mld/twincities/news/local/15560261.htm

 

`ವಿಭಾ' ಕುರಿತು ಕೆಲವು ಅಂಶಗಳು:
 

* `ವಿಭಾ' ಒಂದು ಸಂಸ್ಕೃತ ಮೂಲಪದವಾಗಿದ್ದು, ಆಂತರಿಕ ಶಕ್ತಿ/ಬೆಳಕು ಎಂಬ ಅರ್ಥವನ್ನು ಹೊಂದಿದೆ.
 

* ಸಂಘದ ಮೂಲ ಉದ್ದೇಶ, ನಿರ್ಗತಿಕ-ಬಡ ಮಕ್ಕಳಿಗೆ ಅವರ ವಿದ್ಯಾಭ್ಯಾಸ, ಆರೋಗ್ಯ ಮತ್ತು ಅವಕಾಶಗಳ ಹಕ್ಕನ್ನು ಒದಗಿಸುವುದರ ಮೂಲಕ ಅವರಲ್ಲಿನ ಆಂತರಿಕ ಶಕ್ತಿ-ಪ್ರತಿಭೆಗಳತ್ತ ಬೆಳಕು ಚೆಲ್ಲುವುದು.
 

* ೧೯೯೧ರಲ್ಲಿ ಆರಂಭಗೊಂಡ `ವಿಭಾ', ಭಾರತದಲ್ಲಿ ಸುಮಾರು ೧೬೦ ಹಾಗೂ ಅಮೆರಿಕದಲ್ಲಿ ಸುಮಾರು ೧೦ ಯೋಜನೆಗಳಿಗೆ ಸಹಕಾರ ನೀಡಿದೆ. ಬೆಂಗಳೂರಿನಲ್ಲೂ `ವಿಭಾ'ದ ಎರಡು ಶಾಖೆಗಳಿದ್ದು, ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಸೇವೆಯಲ್ಲಿ ತೊಡಗಿದೆ.

 

* ಭಾರತದಲ್ಲಿ `ವಿಭಾ'ದ ಬಗ್ಗೆ ತಿಳಿಯಲು ಈ ಕೆಳಗಿನ ಅಂತರ್ಜಾಲ ತಾಣನ್ನು ಕ್ಲಿಕ್ಕಿಸಿ

http://www.vibha.org/index.php?title=Project_Listing


 

* `ವಿಭಾ' ವಿವಿಧ ಕಾರ್ಯಕ್ರಮಗಳನ್ನು (ಮನರಂಜನಾ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು, ಮಕ್ಕಳನ್ನು ಮೂಲಗೊಂಡ ಚಟುವಟಿಕೆಗಳು, ಚಾರಣ/ಓಟ ಇತ್ಯಾದಿ) ಆಯೋಜಿಸಿ, ಇಲ್ಲಿಯವರೆಗೆ ಸುಮಾರು ೧,೧೦,೦೦೦ ಬಡ ಮಕ್ಕಳಿಗೆ ಲಿಂಗ, ಜಾತಿ, ಧರ್ಮ, ಭಾಷಾ ಬೇಧವಿಲ್ಲದೆ ಸಹಾಯಹಸ್ತ ನೀಡಿದೆ. ಎಸ್.ಪಿ.ಬಿಯವರ ಸಂಗೀತ ರಸ ಸಂಜೆ ಕೂಡ `ವಿಭಾ'ದ ಮನರಂಜನಾ ಕಾರ್ಯಕ್ರಮಗಳ ಪಟ್ಟಿಗೆ ಸೇರ್ಪಡೆಯಾಗಿರುವುದು ಸಂತಸದ ವಿಷಯವಾಗಿದೆ.

 

ಕಾರ್ಯಕ್ರಮದ ಕೆಲವು ಚಿತ್ರಗಳು ನಿಮಗಾಗಿ

Vibha Group

 

All Singers

 

Crowd at Break Time

 

Performance

 

SPB and Poornima

 

Vibha Booth

 

Wide view of the Programme

 

Vote of Thanks by Veeresh Mathad

 

ಇನ್ನಷ್ಟು

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'

ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ

ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ

ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

ಪೈರಸಿ ತಡೆಯಲು ಗುಂಡಾ ಕಾಯ್ದೆ

ಬಗೆ ಹರಿದ ಭಾಷಾ ಕಲಿಕಾ ವಿವಾದ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com