Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸಂಪನ್ನ ಮುತಾಲಿಕ್‌ರ ಭರದ್ವಾಜ

ಕಾದಂಬರಿಗೆ ಮೊದಲ ಬಹುಮಾನ

 

ಅಕ್ಕ ಹಾಗೂ ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಬಾಲ್ಟಿಮೋರ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನ-೨೦೦೬ರ ಪ್ರಯುಕ್ತ ಆಯೋಜಿಸಲಾಗಿದ್ದ ಕಾದಂಬರಿ ಸ್ಪರ್ಧೆಯಲ್ಲಿ ದಾವಣಗೆರೆಯ ಸಂಪನ್ನ ಮುತಾಲಿಕ್ ಅವರ ಕಾದಂಬರಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

 

ಬಹುಮಾನಕ್ಕೆ ಆಯ್ಕೆಯಾಗಿರುವ `ಭರದ್ವಾಜ ಎಂಬ ಕಾದಂಬರಿ ಸಂಪನ್ನ ಮುತಾಲಿಕ್ ಅವರ ಪ್ರಥಮ ಕಾದಂಬರಿ ಎಂಬುದು ಮತ್ತೊಂದು ವಿಶೇಷ.

 

ಸೆಪ್ಟೆಂಬರ್ ೧, ೨ ಮತ್ತು ೩ರಂದು ನಡೆಯುವ ವಿಶ್ವಕನ್ನಡ ಸಮ್ಮೇಳನಕ್ಕೆ ಬೆಂಗಳೂರಿನಿಂದ ಅಮೆರಿಕಾಕ್ಕೆ ಪ್ರಯಾಣಿಸಲು ತಗುಲುವ ಪ್ರಯಾಣ ವೆಚ್ಚ ಹಾಗೂ ನೋಂದಣಿ ವೆಚ್ಚದ ಮೊತ್ತವನ್ನು ಬಹುಮಾನ ರೂಪದಲ್ಲಿ ಸಂಪನ್ನ ಪಡೆಯುತ್ತಾರೆ.

 

ಸಂಪನ್ನ ಮುತಾಲಿಕ್ ದಾವಣಗೆರೆಯ ಬಿಡಿಟಿ ಇಂಜಿನಿಯರ್ ಕಾಲೇಜ್‌ನಿಂದ ಪದವಿ ಪಡೆದವರು. ಎಂ.ಟೆಕ್ ಮತ್ತು ಎಂ.ಬಿ.ಎ ಪದವಿಗಳನ್ನೂ ಪಡೆದಿದ್ದಾರೆ. ಪ್ರಸ್ತುತ, ದಾವಣಗೆರೆಯ ಸ್ಯಾಮ್‌ಸನ್ಸ್ ಡಿಸ್ಟಿಲರೀಸ್‌ನಲ್ಲಿ ಅಡ್ಮಿನ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

 

ಸಂಪನ್ನ ಮುತಾಲಿಕ್ ಅವರನ್ನ ಆಭಿನಂದಿಸಿ : sampanna_mutalik@rediffmail.com

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com