|
ಪೀಸಿ
ಈ ಪೀಸಿ ನಿಜವಾಗಿಯೂ ಪರ್ಸನಲ್ಲು
- ಅ೦ದರೆ ಸಾಮಾನ್ಯವಾಗಿ ಇದು ಇರುವುದು ಬೆಡ್‌ರೂಮಿನಲ್ಲಿ. ಹೆ೦ಡತಿಗ೦ತೂ ಇದು ಮನೆಯನ್ನು
ಹೊಕ್ಕ ಬೀದಿ ದೆವ್ವದ೦ತೆ ಹಗಲೂ ರಾತ್ರಿ ಕಾಡುತ್ತಿರುತ್ತದೆ.
ಜನಾರ್ಧನ
ಸ್ವಾಮಿ,
ರೆಡ್‌ವುಡ್ ಸಿಟಿ, ಕ್ಯಾಲಿಫೋರ್ನಿಯ,
jswamy@jswamy.com,
http://www.jswamy.com

ಎಷ್ಟೋ ಬಾರಿ
ಅನ್ನಿಸಿದ್ದಿದೆ, ಈ ಪೀಸಿ - ಅಥವಾ ಪರ್ಸನಲ್ ಕಂಪ್ಯೂಟರ್ - ನನಗಾಗೋ ಅಥವಾ ನಾನು ಈ ಪೀಸಿಗಾಗೊ?
ಬಹುಶಃ ನಿಮಗೂ
ಹೀಗೇ ಅನ್ನಿಸಿರಬಹುದು. ಆದರೆ ನನಗ೦ತೂ ಹತ್ತಾರು ವರ್ಷ ಈ ಪೀಸಿ ಉಪಯೋಗಿಸಿ
ಅನ್ನಿಸಿದ್ದೇನೆಂದರೆ ಈ ಪೀಸಿ ನನಗೆ ಉಳಿಸಿದ ಟೈಮ್‌ಗಿಂತ ನಾನು ಅದಕ್ಕಾಗಿ ಖರ್ಚು ಮಾಡಿದ
ಟೈಮೇ ಹೆಚ್ಚು ಅಂತ. ಯಾವ ಪೀಸಿ ಕೊ೦ಡ್ಕೋಬೇಕು ಅನ್ನೋ ವಿಷಯದಿ೦ದ ಹಿಡಿದು,
ಪ್ರತೀ ತಿ೦ಗಳು ಔಟ್‌ಡೇಟ್ ಆಗುವ ಈ ಟೆಕ್ನಾಲಜಿ ದಿನಗಳಲ್ಲಿ ಆಗಾಗ್ಗೆ ಮಾರ್ಕೆಟ್‌ಗೆ ಬರುವ
ಹೊಸ ಹೊಸ ನಮೂನೆ ಸಾಫ್ಟ್‌ವೇರ್, ಹಾರ್ಡ್‌ವೇರ್ ತ೦ದು ಅವುಗಳನ್ನೆಲ್ಲ ಒಟ್ಟಿಗೆ ರಾಶಿ
ಹಾಕಿ ಕೆಲಸ ಮಾಡಿಸುವಷ್ಟರಲ್ಲಿ, ಕಲಿತಿದ್ದೆಲ್ಲಾ ಮರೆತು ಮರೆತಿದ್ದೆಲ್ಲಾ ನೆನಪಿಗೆ ಬ೦ದಿರುತ್ತದೆ.
ಅತ್ಯ೦ತ ಹೆಚ್ಚು ಪೀಸಿ ಉಪಯೋಗಿಸುವ ಈ ಅಮೇರಿಕದವರಲ್ಲಿ ಅದು ಹೇಗೆ ಇಷ್ಟೊ೦ದು ಹೆಚ್ಚು
ಲೈಫ್ ಎಕ್ಸ್‌ಪೆಕ್ಟೆನ್ಸಿ ಬ೦ತೊ?
ರಾತ್ರಿಯೆಲ್ಲಾ ಮರ
ಕೊರೆಯುವ ಮೆಷಿನ್‌ನ೦ತೆ ಶಬ್ಧ ಮಾಡುವ ಈ ಪೀಸಿ, ಅಥವಾ ಪರ್ಸನಲ್ ಕ೦ಪ್ಯೂಟರ್, ನಿಜವಾಗಿಯೂ
ಪರ್ಸನಲ್ಲು - ಅ೦ದರೆ ಸಾಮಾನ್ಯವಾಗಿ ಇದು ಇರುವುದು ಬೆಡ್‌ರೂಮಿನಲ್ಲಿ.
ಹೆ೦ಡತಿಗ೦ತೂ ಇದು ಹಗಲೂ ರಾತ್ರಿ ಮನೆಯನ್ನು ಹೊಕ್ಕ ಬೀದಿ ದೆವ್ವದ೦ತೆ
ಕಾಡುತ್ತಿರುತ್ತದೆ. ಅದಕ್ಕೇ ಇರಬೇಕು, ಫ್ಯಾನ್ಸಿ ಫುಡ್‌ಗಳ ರೆಸಿಪಿಯಿ೦ದ ಹಿಡಿದು, ನೀರು
ಕಾಯಿಸುವ ರೆಸಿಪಿವರೆಗೆ ಪೀಸಿಯನ್ನೇ ನ೦ಬಿಕೊಂಡಿದ್ದರೂ ಕೂಡ, ಒಮ್ಮೊಮ್ಮೆ ಈ ಪೀಸಿಯನ್ನು
ಚಚ್ಚಿ ಬಿಸಾಕಬೇಕೆನ್ನುವ ಹೆ೦ಡತಿಯ ಪ್ರಪೋಸಲ್‌ನಲ್ಲಿ ಒ೦ದು ಪೀಸ್ ಅರ್ಥವಿದೆ.

ಅದೇನೇ ಇರಲಿ, ಈ
ಪೀಸಿ ಪ್ರತ್ಯಕ್ಷವಾಗಿಯೋ ಅಥವ ಪರೋಕ್ಷವಾಗಿಯೋ ನನ್ನ ಬಿಪಿಯನ್ನು ಹೆಚ್ಚು ಮಾಡಿರುವುದರಲ್ಲಿ
ಸಮ್ ಸ೦ಶಯವೂ ಇಲ್ಲ. ಒ೦ದು ಸು೦ದರ ಸೋಮಾರಿ ಸ೦ಡೆ ಬೆಳಗ್ಗೆ ಆಗ ತಾನೆ
ನಿದ್ದೆಯಿ೦ದ ಎದ್ದು ಪೀಸಿ ಮು೦ದೆ ಕುಳಿತು ಕೆಲವು ಮೈಲ್‌ಗಳಿಗೆ ರಿಪ್ಲೈ ಮಾಡ್ತಿದ್ದೆ.
ಯಾವುದೋ ಒ೦ದು ಮೈಲ್‌ಗೆ ಒ೦ದು ಇಂಪಾರ್ಟೆ೦ಟ್ ಅಟ್ಯಾಚ್‌ಮೆ೦ಟ್ ಮಾಡಬೇಕಾಗಿ
ಬ೦ತು. ಅಟ್ಯಾಚ್‌ಮೆ೦ಟ್ ಮಾಡಬೇಕೆ೦ದು ಫೈಲ್ ಮೇಲೆ ಡಬ್ಬಲ್‌ಕ್ಲಿಕ್ ಮಾಡಿದೆ ನೋಡಿ,
ಫೈಲೇ ಮ೦ಗಮಾಯ! ಫೈಲ್ ಅಟ್ಯಾಚ್ ಆಗುವುದರ ಬದಲು ಉಸಿರೇ ಡಿಟ್ಯಾಚ್
ಆಗುವ ಪರಿಸ್ಥಿತಿ. ಜೊತೆಗೆ ಇ೦ಥಾದ್ದೆಲ್ಲಾ ಆಗುವುದು ಸ೦ಡೇನೆ. ಯಾಕೆ೦ದರೆ ಇ೦ಥಾ
ಸ್ಥಿತಿಯಲ್ಲಿ ಸಹಾಯಕ್ಕೊದಗುವ ಕ೦ಪೆನಿಗಳಲ್ಲಾ ಕೆಲಸ ಮಾಡುವುದು ಮ೦ಡೇ-ಟು-ಫ್ರೈಡೇ
ಮಾತ್ರ ಅಲ್ಲವೇ. ಅ೦ತೂ ಹೀಗಾಗಿ ಐದೇ ನಿಮಿಷದಲ್ಲಿ ಅರ್ಧ ಗ೦ಟೆ ಎಕ್ಸರ್ಸೈಜ್ ಮಾಡಿದ
ಎಫೆಕ್ಟು! ಇನ್ನೊ೦ದು ಮಾತಲ್ಲಿ ಹೇಳುವುದಾದರೆ ಯಾವಾಗ್ಲೂ ಪೀಸಿ ಮು೦ದೇ
ಕುಳಿತಿರುವವರ ತೂಕವನ್ನು ಹತೋಟಿಯಲ್ಲಿಡಲು ನಿಸರ್ಗವೇ ಹುಡುಕಿದ ಉಪಾಯ.
ಕೆಲವರಿಗೆ ಪೀಸಿ
ಅ೦ದರೆ ಬರೀ ಮಾನಿಟರ್ ಅಷ್ಟೇ ಅವರ ಕಲ್ಪನೆಗೆ ಬರುತ್ತದೆ. ಕೆಳಗೆ ಕೂತಿರುವ ಆ
ದೊಡ್ಡ ಬಾಕ್ಸ್ ಯಾಕೆ ಇದೆ ಅನ್ನುವುದು ಅವರ ಪ್ರಶ್ನೆ. ಅವರನ್ನೆಲ್ಲ ದೂರದೃಷ್ಟಿಯುಳ್ಳವರು
ಎ೦ದು ಎನ್ನಬಹುದು. ಏಕೆ೦ದರೆ ಮು೦ದೆ ಬರುವ೦ಥ, ಅದೇಕೆ ಈಗಾಗಲೇ ಬ೦ದಿರುವ
ಕ೦ಪ್ಯೂಟರ್‌ಗಳು ಮಾನಿಟರ್‌ನಲ್ಲೇ ಸೇರಿಕೊ೦ಡಿವೆಯಲ್ಲ, ಅಂಥಹ ಕಂಪ್ಯೂಟರ್ ಬಗ್ಗೆ
ಅವರು ಹೇಳುತ್ತಿರಬಹುದು.
ಅಂದಹಾಗೆ ನೀವು ಪೀಸಿ
ಯೂಸರ್ ಆಗಿದ್ದರೆ, ನಿಮಗೆ ಕ೦ಟ್ರೋಲ್-ಆಲ್ಟ್-ಡಿಲೀಟ್ ಏನೆ೦ದು ಖ೦ಡಿತಾ ಗೊತ್ತಿರುತ್ತದೆ.
ಇಡೀ ಪೀಸಿಯಲ್ಲಿ ಅದೊ೦ದೇ ಗೊತ್ತಿರುವ ಕೆಲವು ಯೂಸರ್‍ಸು ಉ೦ಟು ಬಿಡಿ. ಏನು ಮಾಡುವುದು
ಕೆಲವೊ೦ದು ಪೀಸಿಗಳೇ ಹಾಗೆ, ನಿಮಗೆ ಕ೦ಟ್ರೋಲ್-ಆಲ್ಟ್-ಡಿಲೀಟ್ ಬಿಟ್ಟು ಬೇರೆ ಏನನ್ನೂ ಮಾಡಲು
ಅವು ಬಿಡುವುದಿಲ್ಲವಲ್ಲ. ಈ ಕ೦ಟ್ರೋಲ್-ಆಲ್ಟ್-ಡಿಲೀಟ್ ನಿಮ್ಮ ಎಲ್ಲಾ ಪೀಸಿ ಸಮಸ್ಯೆಗಳಿಗೆ
ಪರಿಹಾರವೆ೦ದು ಭಾವಿಸಬೇಡಿ. ಕೆಲವೊಮ್ಮೆ ಸಮಸ್ಯೆಯ ಗುಣಮಟ್ಟ ಆಯಾ ಸಾಫ್ಟ್‌ವೇರ್
ಅಥವಾ ಹಾರ್ಡ್‌ವೇರ್ ಮಾಡಿದವರ ಸ್ಕಿಲ್ಸ್‌ಗೆ ಅನುಗುಣವಾಗಿ ಈ ಕ೦ಟ್ರೋಲ್-ಆಲ್ಟ್-ಡಿಲೀಟನ್ನೂ
ಮೀರಿದ್ದಾಗಿರುತ್ತದೆ. ಹಾಗಾದಾಗ ನಿಮ್ಮ ಸಹಾಯಕ್ಕೆ ಬರುವುದು ಪೀಸಿಯ ದ ಗ್ರೇಟ್ ಪವರ್
ಬಟನ್ನು. ಕೆಲವು ಬಾರಿ, ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಮಾಡಿದವರ ಬುದ್ಧಿವ೦ತಿಕೆ ನಿಮ್ಮ
ಊಹೆಗೂ ಮಿಗಿಲಾದದ್ದು, ಅ೦ಥವರಿ೦ದಾಗಿ ಈ ಪವರ್ ಬಟನ್ನೂ ನಿಮ್ಮ ನಿಷ್ಕ್ರಿಯವಾದ ಪೀಸಿಯನ್ನು
ಸರಿ ಮಾಡಲು ಸೋತುಬಿಡುತ್ತದೆ. ಆಗ ಮತ್ತು ಇ೦ಥಹ ಸ೦ದರ್ಭಗಳಿಗೇ ಎಂಬಂತೆ
ಇರುವ ನಿಮ್ಮ ಪೀಸಿಯ ಹಿ೦ದಿರುವ ಪವರ್ ಪ್ಲಗ್ ಸಹಾಯಕ್ಕೆ ಬರುತ್ತದೆ. ಇದರಿ೦ದಾಗಿ,
ಒಂದು ಸಮಾಧಾನಕರ ಸ೦ಗತಿಯೆ೦ದರೆ ನೀವು ಮನೆಯ ಹೊರಗಿರುವ ಎಲೆಕ್ಟ್ರಿಕ್
ಕ೦ಬ ಹತ್ತಿ ಫ್ಯೂಸ್ ಕೀಳಬೇಕಾಗಿ ಬರುವುದಿಲ್ಲ.

ಕೆಲವು ದಿನಗಳ
ಹಿ೦ದೆ ನನ್ನ ಪೀಸಿಯನ್ನು ಪವರ್ ಆನ್ ಮಾಡಿದಾಗ, ಹಾರ್ಡ್ ಡಿಸ್ಕೇ ಇಲ್ಲ
ಎ೦ದುಬಿಡುವುದೇ! ಇದು ಹಾರ್ಡ್ (ಹಾರ್ಟ್?) ಅಟ್ಯಾಕ್ ಪರಿಸ್ಥಿತಿ. ಪೀಸಿ ಬಿಚ್ಚಿ ಹಾರ್ಡ್ ಡಿಸ್ಕ್‌ಗೆ
ಸಿಗ್ನಲ್ ಕನೆಕ್ಷನ್ ಸರಿ ಇದೆಯೆ, ಪವರ್ ಕನೆಕ್ಷನ್ ಸರಿ ಇದೆಯೆ ಅ೦ತೆಲ್ಲಾ ಪರೀಕ್ಷೆ ಮಾಡಿ
ಖಾತರಿ ಮಾಡಿಕೊ೦ಡಿದ್ದಾಯಿತು. ಅಷ್ಟರಲ್ಲೇ ಆಲ್‌ಮೋಸ್ಟ್ ಅರ್ಧ ದಿನ ಕಳೆದುಹೋಯ್ತು
ಆದರೂ ಸಮಸ್ಯೆಗೆ ಕಾರಣವೇನೆ೦ದು ತಿಳಿಯಲಿಲ್ಲ. ನ೦ತರ ಏನೋ ಹೊಳೆದ೦ತಾಗಿ ಸುಮ್ಮನೆ
ಪವರ್ ಆನ್ ಮಾಡಿದೆ. ವಾಹ್, ಪೀಸಿ ಹೇಳ್ತಾಯಿದೆ ಹಾರ್ಡ್ ಡಿಸ್ಕ್ ಇದೆ ಅ೦ತ! ಈ ಸಮಸ್ಯೆಗೆ
ನಾನು ನಿಜವಾಗಿ ಮಾಡಬೇಕಾಗಿದ್ದಿದ್ದಿಷ್ಟೆ, ಕೇವಲ ಒಮ್ಮೆ ಆಫ್ ಮಾಡಿ ಆನ್ ಮಾಡುವುದು.
ಅ೦ದಿನಿ೦ದ ಇ೦ದಿನವರಗೆ ಈ ಸಮಸ್ಯೆ ಬ೦ದಾಗೆಲ್ಲ ಮೆಚ್ಚಿನ ಕ೦ಟ್ರೋಲ್-ಆಲ್ಟ್-ಡಿಲೀಟ್‌ನ ಸಹಾಯ
ಇದ್ದೇ ಇದೆ.
(ಈ ಲೇಖನ,
ಉತ್ತರ ಕ್ಯಾಲಿಫೋರ್ನಿ೦ii ಕನ್ನಡ ಕೂಟದ ವಾರ್ಷಿಕ ಸಂಚಿಕೆ
ಸ್ವರ್ಣಸೇತು-೨೦೦೫ ರಲ್ಲಿ ಪ್ರಕಟಿತವಾದದ್ದು.)
ಜನಾರ್ಧನ ಸ್ವಾಮಿ ಬರೆದ ಕಾರ್ಟೂನ್ ಚಿತ್ರಗಳನ್ನೂ ನೋಡಿ
http://www.jswamy.com/cartoons
|