Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಜೆಎಸ್‌ಎಸ್/ಜೆಸಿಇ ಹಳೆವಿದ್ಯಾರ್ಥಿ ಸಮ್ಮಿಲನ

ಭಾರತದಾದ್ಯಂತ ಸುಮಾರು ೨೭೦ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠವು, ಆ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಈಗ ದೇಶವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವಂತೆ ವಿಶೇಷವಾಗಿ ಆಮಂತ್ರಿಸಿದೆ.

 

ಈ ಬಾರಿಯ ಸಮ್ಮೇಳನದಲ್ಲಿ ಜೆಎಸ್‌ಎಸ್/ ಜೆಸಿಇ ಹಳೆ ವಿದ್ಯಾರ್ಥಿಗಳದೇ ಒಂದು ವಿಶೇಷ ಅಧಿವೇಶನ ನಡೆಯಲಿದ್ದು, ಹಳೆಯ ಸ್ನೇಹಿತರು ಮತ್ತು ಸಹಪಾಠಿಗಳನ್ನು ಭೇಟಿಯಾಗಲು, ವಿದ್ಯಾರ್ಥಿ ದಿನಗಳ ನೆನಪುಗಳನ್ನು ತಾಜಾಗೊಳಿಸಲು, ಜೆಎಸ್‌ಎಸ್ ವಿದ್ಯಾಪೀಠವು ಶೈಕ್ಷಣಿಕ/ಸಾಮಾಜಿಕ ರಂಗಗಳಲ್ಲಿ ಸಾಧಿಸಿರುವ ಪ್ರಗತಿಪರ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ.

 

ಇಷ್ಟೇ ಅಲ್ಲದೆ ಮೇರಿಲ್ಯಾಂಡ್ ಸಂಸ್ಥಾನದ ಗೈಥರ್ಸ್‌ಬರ್ಗ್‌ನಲ್ಲಿ JSS Spiritual Missionನ ಸ್ಥಾಪನೆಯಾಗಿದ್ದು ಉತ್ತರ ಅಮೆರಿಕದಲ್ಲಿರುವ ಜೆಎಸ್‌ಎಸ್ ಹಳೆವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸ್ನೇಹಸಂಪರ್ಕದ ಕೇಂದ್ರವಾಗಿ ಇದು ಹೊರಹೊಮ್ಮಲಿದೆಯೆಂದು ಮಹಾವಿದ್ಯಾಪೀಠದ ಪ್ರಕಟಣೆ ತಿಳಿಸಿದೆ.

ವಿವರಗಳಿಗೆ ಸಂಪರ್ಕಿಸಿ:

ಕುಮಾರ್ ರಾಜಶೇಖರ್ kumar@jssmission.org,jss@jssmission.org   

ವೆಬ್‌ಸೈಟ್ ವಿಳಾಸ: www.jssonline.org  ಮತ್ತು www.jssmission.org  

ಸಮ್ಮೇಳನದ ಅಧಿಕೃತ ಜಾಲತಾಣ: www.akkaonline.org/2006  

ವಿ-ಅಂಚೆ: wkc2006@gmail.com

ದೂರವಾಣಿ ಮತ್ತು ಫ್ಯಾಕ್ಸ್: 1-877-WKC-2006

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com