ಸಪ್ಟೆಂಬರ್ ೧ರಂದು ಸಮ್ಮೇಳನ ಉದ್ಘಾಟನೆ
ನಾಲ್ಕನೇ ಅಕ್ಕ ವಿಶ್ವ
ಕನ್ನಡ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಸಪ್ಟೆಂಬರ್ ೧ರಂದು ಶುಕ್ರವಾರ
ಸಂಜೆ ೫ ಗಂಟೆಗೇ ನಡೆಯುತ್ತದೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿ
ಕುಮಾರಸ್ವಾಮಿ ಅವರು ವಿಧ್ಯುಕ್ತವಾಗಿ ಉದ್ಘಾಟಿಸಿದ ನಂತರ ಸಮ್ಮೇಳನದ ವಿವಿಧ
ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ. ಈ ಹಿಂದಿನ ಸಮ್ಮೇಳನಗಳಲ್ಲಿ ಹೆಚ್ಚಾಗಿ ಶುಕ್ರವಾರ
ಅನೌಪಚಾರಿಕ ಕಾರ್ಯಕ್ರಮಗಳು ಮಾತ್ರ ಇರುತ್ತಿದ್ದು ಶನಿವಾರ ಬೆಳಗ್ಗೆ ಮೆರವಣಿಗೆಯ
ನಂತರ ಮುಖ್ಯ ಸಭಾಂಗಣದ ವೇದಿಕೆಯಲ್ಲಿ ದೀಪ ಬೆಳಗಿ ಸಮ್ಮೇಳನ
ಉದ್ಘಾಟಿಸಲಾಗುತ್ತಿತ್ತು. ಈಬಾರಿ ಶುಕ್ರವಾರ ಸಂಜೆಯೇ ನುಡಿಹಬ್ಬದ ದೃಶ್ಯವೈಭವ
ತೆರೆದುಕೊಳ್ಳುತ್ತದೆ.
ಅತಿಜನಪ್ರಿಯವೆಂದುಕೊಳ್ಳಲಾಗಿರುವಹಾಸ್ಯೋತ್ಸವ ಮತ್ತು ಸಮ್ಮೇಳನದ ವಿಶೇಷ
ಆಕರ್ಷಣೆಯಾಗಿರುವನೃತ್ಯ ನೃತ್ಯಕಾರ್ಯಕ್ರಮಗಳೂ ಶುಕ್ರವಾರ ರಾತ್ರಿಯ
ವೇಳಾಪಟ್ಟಿಯಲ್ಲೇ ಇವೆ.
ಶನಿ-ಭಾನುವಾರಗಳಂದು ದಿನವಿಡೀ ಮುಖ್ಯವೇದಿಕೆಯಲ್ಲಿ ಮತ್ತು ಸಮಾನಾಂತರ
ಅಧಿವೇಶನಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ದೂರದೂರುಗಳಿಂದ
ಆಗಮಿಸುವ ಸಮ್ಮೇಳನಾರ್ಥಿಗಳು ಶುಕ್ರವಾರ ಸಂಜೆಯೇ ಉದ್ಘಾಟನಾ
ಸಮಾರಂಭವೆಂಬುದನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಳ್ಳಬೇಕೆಂದು ಸಮ್ಮೇಳನ
ಸಂಚಾಲಕರು ವಿನಂತಿಸಿದ್ದಾರೆ.