Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 09 February 2007 03:55 PM

ಬೃಂದಾವನದ `ಅನುಯಲ್ ಡಿನ್ನರ್ ಡ್ಯಾನ್ಸ್ ಗ್ಯಾಲರಿ'

 

ವರದಿ: ರಾಜ್ ಶಶಿ
kcob_member@yahoo.com

ಜನವರಿ ೨೭, ಶನಿವಾರದಂದು ನ್ಯೂಜೆರ್ಸಿಯ ಬೃಂದಾವನದ ವಾರ್ಷಿಕೋತ್ಸವ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ, ಹಮ್ಮಿಕೊಳ್ಳಲಾಗಿದ್ದ ಮೊಟ್ಟ ಮೊದಲ "ಅನುಯಲ್ ಡಿನ್ನರ್ ಡ್ಯಾನ್ಸ್ ಗ್ಯಾಲರಿ" ನ್ಯೂಜೆರ್ಸಿಯ "ರಾಯಲ್ ಆಲ್ಬರ್ಟ್ಸ್ ಪ್ಯಾಲೇಸ್‌ನ ಮಹಾರಾಜ ಸಭಾಂಗಣದಲ್ಲಿ" ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಜರುಗಿತು.

ಅಂದು ಸಂಜೆ ಐದರ ವೇಳೆಗಾಗಲೆ, ಬೃಂದಾವನದ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಜರತಾರಿ ಸೀರೆ, ಲೆಹೆಂಗಾಗಳ ಝಗಮಗ, ಮಹನೀಯರ ಹಾಗು ಗಂಡುಮಕ್ಕಳ ಸೂಟು, ಶೇರ್ವಾನಿಗಳ ಸಡಗರದಲ್ಲಿ ಅರಮನೆಯಂತೆ ಝಗಮಗಿಸುತ್ತಿದ್ದ "ರಾಯಲ್ ಆಲ್ಬರ್ಟ್ಸ್‌ನ ಮಹಾರಾಜ" ಸಭಾಂಗಣದಲ್ಲಿ, ವಿಶೇಷವಾಗಿ ರಾಜ್ ಶಶಿ ಅವರ ನೇತೃತ್ವದಲ್ಲಿ ಕರೆಸಿದ್ದ ಉದ್ಯಮಿ ಛಾಯಗ್ರಾಹಕರಿಂದ ಅಂದು ನೆರೆದಿದ್ದ ಎಲ್ಲಾ ಬೃಂದಾವನದ ಸದಸ್ಯರ ಕುಟುಂಬಗಳೆಲ್ಲರ ಚಿತ್ರಪಟಗಳ ಭರಾಟೆಯಿಂದ ಪ್ರಾರಂಭವಾಯ್ತು ನೋಡಿ ಕಾರ್ಯಕ್ರಮದ ಸಂಭ್ರಮ.. ಅತ್ತ ಸೊಗಸಾಗಿ ಅಲಂಕೃತವಾಗಿದ್ದ ಬಾಂಕ್ವೆಟ್‌ನಲ್ಲಿ ಬಿಸಿ ಬಿಸಿ ಬಜ್ಜಿ ಬೊಂಡ, ವಿವಿಧ ಪಾನೀಯಗಳ ಸರಬರಾಜು..


ಝಗಮಗಿಸುತ್ತಿದ್ದ ಸಭಾಂಗಣದ ವೇದಿಕೆಯಲ್ಲಿ, ಗಣರಾಜ್ಯೋತ್ಸವದ ಅಂಗವಾಗಿ ಭಾರತ, ಕರ್ನಾಟಕ ಹಾಗು ಅಮೇರಿಕೆಯ ಧ್ವಜಗಳ ಅಲಂಕಾರದ ಸಜ್ಜು....

ಸಂಜೆ ಏಳರ ವೇಳೆಗಾಗಲೆ ಬೃಂದಾವನದ ವೈವಿಧ್ಯಮಯ ಕಾರ್ಯಕ್ರಮಗಳ ಪಟ್ಟಿ ಹಿಡಿದು ಸಜ್ಜಾಗಿದ್ದರು ಅಂದಿನ "ಎಂ.ಸಿ." ಗಳಾಗಿದ್ದ ನಮ್ಮ ಯುವಪೀಳಿಗೆಯ ಸುಕೃತ ಶಂಕರ್ ಮತ್ತು ಅಶ್ವಿನ್ ರಾವ್ ಹಾಗೂ ಗಂಗ ಮತ್ತು ವಿದ್ಯಾಮೂರ್ತಿ.

ಬೃಂದಾವನದ ಅಧ್ಯಕ್ಷಿಣಿ ವಸಂತಾ ಶಶಿ, ಶ್ರೀಧರ್ ಸುಬ್ಬರಾವ್ ಹಾಗು ಸಂತೋಷ್ ಕಮ್ಮಾಂಕರ್ ಅವರುಗಳಿಂದ ಬೃಂದಾವನದ ಸಂಕೇತ ಗೀತೆ, ಅಮೇರಿಕ ಹಾಗು ಭಾರತ ರಾಷ್ಟ್ರಗೀತೆ ಮತ್ತು ಗಣರಾಜ್ಯೋತ್ಸವದ ಅಂಗವಾಗಿ "ಯೇ ಮೆರೆ ವತನ್" ದೇಶಭಕ್ತಿ ಗೀತೆಗಳಿಂದ ಅಂದಿನ ಕಾರ್ಯಕ್ರಮಗಳ ಭರ್ಜರಿ ಆರಂಭ.

ಅನಂತರ ಬೃಂದಾವನದ ಅಧ್ಯಕ್ಷಿಣಿಯ ಸಂದೇಶ ಹಾಗು ಸ್ವಾಗತ ಭಾಷಣ. ಯಾವ ಪುಢಾರಿಗಳ ಹಾವಳಿ ಗದ್ದಲಗಳಿಲ್ಲದೆ ಶ್ರಮವಹಿಸಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳನ್ನ ಅಮೇರಿಕೆಯಲ್ಲಿ ಉಳಿಸಿಕೊಳ್ಳುವಂತಹ ಒಂದೇ ಉದ್ದೇಶವನ್ನಿಟ್ಟುಕೊಂಡು ಸ್ವಯಂಸೇವಕರಾಗಿ ದುಡಿಯುತ್ತಿರುವ ಬೃಂದಾವನದ ೨೦೦೬-೦೮ ಕಾರ್ಯಕಾರಿ ಸಮಿತಿಯ ಆಶ್ರಯದ ಸಂಚಿಕೆ ಸಂಪಾದಕೀಯ ಹೊಣೆಹೊತ್ತಿದ್ದ ರಾಜ್ ಶಶಿ ಅವರ ನೇತೃತ್ವದಲ್ಲಿ ಅತ್ಯಂತ ಉತ್ಸುಕರಾಗಿ ತಯಾರಿಸಿದ್ದ ಬೃಂದಾವನದ ಎರಡನೆಯ ಸ್ಮರಣ ಸಂಚಿಕೆ "ವನವಾಣಿ ೨೦೦೭" ಯನ್ನು ಬಿಡುಗಡೆ ಮಾಡಲಾಯಿತು.

ಇದಾದನಂತರ ಬೃಂದಾವನದ ಕಾರ್ಯಕಾರಿ ಸಮಿತಿಯ ದಂಪತಿಗಳಿಂದ ಬೆಳಗಿತು "ಫ್ಯೂಶನ್ ಫ್ಯಾಶನ್ ಶೊ" ನ ಜ್ಯೋತಿ. ಈ ಫ್ಯಾಶನ್ ಶೋ ವಿಶೇಷತೆ ಎಂದರೆ.. ಬೃಂದಾವನದ ಕಿರಿಯ ಯುವ ಪೀಳಿಗೆಯು ಉತ್ಸಾಹದಿಂದ ಭಾಗವಹಿಸಿದ್ದಷ್ಟೆ ಅಲ್ಲದೆ, ಕರ್ನಾಟಕದ ಕೊಡಗು, ಮೈಸೂರು, ಹುಬ್ಬಳ್ಳಿ, ಧಾರವಾಡ ಹೀಗೆ ವಿವಿಧ ಸಂಸ್ಕೃತಿ ಮಿಶ್ರಣದ ದಂಪತಿಗಳ ನೃತ್ಯ ಮತ್ತು ಹಿರಿಯರನ್ನೊಳಗೊಂಡು ನಡೆಸಿದ ವಿವಿಧ ಜರತಾರಿ ಸೀರೆ, ವೇಷ ಭೂಷಣಗಳ `ಬೆಕ್ಕಿನ ನಡಿಗೆ, ಅಷ್ಟೆ ಅಲ್ಲದೆ ವಿಶೇಷವಾದ ಭರತ/ಕುಚುಪುಡಿ ನಾಟ್ಯದ ಕ್ರಿಯಾಶೀಲತೆಯ `ಬೆಕ್ಕಿನ ನಡಿಗೆಯನ್ನ ಕೂಡ ನೃತ್ಯ ಪ್ರವೀಣೆಯರಾದ ಭ್ರಮರಿ ಶಿವಪ್ರಕಾಶ್ ಹಾಗು ಆಶಾ ಅಡಿಗ ಅವರಿಂದ ಫ್ಯೂಶನ್ ನ ಜುಗಲ್ ಬಂಧಿ ನೃತ್ಯ ಪ್ರದರ್ಶಿಸಲಾಯಿತು.

`ವೇವ್ ಜ್ ಮ್ಯೂಸಿಕ್ ಖ್ಯಾತಿಯ ಹಾಗೂ ನ್ಯೂಜೆರ್ಸಿಯ ಗಾನಕೋಗಿಲೆ ಎಂದೇ ಹೆಸರು ವಾಸಿಯಾಗಿರುವ ವಸಂತಾ ಶಶಿಯವರು ಕರ್ನಾಟಕದಿಂದ ಆಗಮಿಸಿದ ಕಲಾವಿದರೋ ಅಥವಾ ಸ್ಥಳೀಯ ಕಲಾವಿದರೇ ಆಗಿರಲಿ, ಅವರಲ್ಲಿರುವ ಕಲೆಗಳನ್ನ ತಕ್ಕ ರೀತಿಯಲ್ಲಿ ವೇದಿಕೆಗೆ ತಂದು ಕಲಾಭಿಮಾನಿಗಳಿಗೆ ಪರಿಚಯಿಸುವುದು ಹಾಗು ಸಭಿಕರನ್ನೊಳಗೊಂಡು ಕಾರ್ಯಕ್ರಮವನ್ನು ನಡೆಸುವುದು ಅವರ ವೈಶಿಷ್ಟ್ಯ. ಅಂದು ಕೂಡ, ವಸಂತಾ ಶಶಿಯವರ ನೇತೃತ್ವದಲ್ಲಿ ಎಲೆಮರೆಯ ಕಾಯಿ ಎನ್ನುವಂತಹ ಸ್ಥಳೀಯ ಕಲಾವಿದರಾದ ಮುರಳಿ ಅಯುಂಗಾರ್, ಸಂತೋಷ್ ಕಮ್ಮಾಂಕರ್, ಶ್ರೀಧರ್ ರಾವ್ ಹಾಗು ಅಶಾ ಅಡಿಗ ಅವರುಗಳನ್ನ ಹೊರ ತಂದು ಸುಮಧುರ ಸಂಗೀತ ಗೋಷ್ಠಿ ಹಾಗು ಸಂಗೀತಕ್ಕೆ ತಕ್ಕ ಭರ್ಜರಿ ನೃತ್ಯದ ಸಂಗಮವನ್ನ ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಈ ಸಂಗೀತದ ರಸದೌತಣಕ್ಕೆ ತಕ್ಕಂತೆ ರಸವತ್ತಾದ ತರಾವರಿ ಹಬ್ಬದೂಟ ಕೂಡ ಸದಭಿರುಚಿಯಾಗಿ ಮಸ್ತಾಗಿತ್ತು.

ಈ ವೈಭವಪೂರ್ಣ ಕಾರ್ಯಕ್ರಮವನ್ನ ಯಶಸ್ವಿಗೊಳಿಸುವುದರಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಹಸ್ತವನ್ನ ಚಾಚಿದ ಪ್ರತಿಯೊಬ್ಬರಿಗೂ ಬೃಂದಾವನದ ಅಧ್ಯಕ್ಷೆ ವಸಂತಾ ಶಶಿ ಅವರು ಹೃತ್ಪೂರ್ವಕ ವಂದನೆಗಳನ್ನ ಅರ್ಪಿಸಿ, ಬೃಂದಾವನದ ೨೦೦೬-೦೮ ಸಮಿತಿ ಆಯೋಜಿಸಿರುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪ್ರಾಯೋಜಕರ ಸಹಾಯ ಹಸ್ತದಿಂದ ಬಹಳ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲಾಗಿದ್ದು, ಇಷ್ಟೇ ಅಲ್ಲದೆ ಜುಲೈ ೨೦೦೬ರ ನಂತರ ಬೃಂದಾವನದ ಸದಸ್ಯತ್ವ ಕೂಡ ಶೇಕಡ ೫೫ರಷ್ಟು ಹೆಚ್ಚಿದೆ!! ಎಂದು ತಿಳಿಸಿ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ಸದಸ್ಯರ ಬೆಂಬಲ ಅತ್ಯಗತ್ಯ. ಅದರಲ್ಲೂ ಆರ್ಥಿಕ ಸಹಾಯ ಬಹಳ ಪ್ರಧಾನ ಪಾತ್ರವನ್ನ ವಹಿಸುತ್ತದೆ ಎಂದು ನುಡಿದು ಬೃಂದಾವನದ ಉಗಮದಿಂದ ಸಹಾಯಹಸ್ತವನ್ನ ನೀಡುತ್ತಿರುವ ಶಂಕರ್ ಶೆಟ್ಟಿ, ಹಾಗೂ ಕನ್ನಡದವರಲ್ಲದಿದ್ದರೂ ಕನ್ನಡದ ಕೆಲಸಕ್ಕೆ ಸಹಾಯ ಹಸ್ತಚಾಚುತ್ತಿರುವ ಗಿರೀಶ್ ಸೋನಿ ಅವರಿಗೆ ಹಾಗೂ ಕೇವಲ ಆರು ತಿಂಗಳಾಗಿದ್ದರೂ ಬೃಂದಾವನದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಹಾಯ ಹಸ್ತ ನೀಡುತ್ತಿರುವ ಡಾ. ರಾಮ್ ಬೆಂಗಳೂರ್ ಅವರಿಗೂ "ಬೃಂದಾವನ ಪ್ರಶಸ್ತಿ"ಗಳನ್ನ ಬೃಂದಾವನದ ೨೦೦೬-೦೮ ಸಮಿತಿಯ ಪರವಾಗಿ ಅಧ್ಯಕ್ಷೆ ವಸಂತಾ ಶಶಿ ಹಾಗು ಕಾರ್ಯದರ್ಶಿ ರಾಜ್ ಶಶಿ ಅವರು ನೀಡಿ ಸತ್ಕರಿಸಿದರು.

ಮತ್ತೊಮ್ಮೆ ಈ ಅದ್ಧೂರಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಂದು ಪ್ರಾಯೋಜಕರಿಗೂ, ತನು ಮನ ಧನ ಸಹಾಯ ಹಸ್ತ ನೀಡಿದ್ದ ಪ್ರತಿಯೊಂದು ಸದಸ್ಯರಿಗೂ, ಉದ್ಯಮಿಗಳಿಗೂ ಬೃಂದಾವನದ ಅಧ್ಯಕ್ಷೆ ವಸಂತಾ ಶಶಿ ಹಾಗೂ ಸಾಧನ ಶಂಕರ್ ಅವರಿಂದ ವಂದನಾರ್ಪಣೆ ಅರ್ಪಿಸಲಾಯಿತು. ಅದಲ್ಲದೆ ಬೃಂದಾವನದ ವತಿಯಿಂದ ನಡೆಸಿದ ಸ್ವಯಂ ಸೇವಕ ಹಾಗು ಧಾರ್ಮಿಕ ಸೇವೆಯ ಅಡಿ ಟಿಪ್ಪಣಿಯನ್ನು ಸುಜಾತ ಬಾನವ್ ಹಾಗೂ ಯುವ ಪೀಳೆಗೆಯ ವತಿಯಿಂದ ಪವಿತ್ರ ಬಾನವ್ ಸಮರ್ಪಿಸಿದರು.

ಕಾರ್ಯಕ್ರಮದ ಸಮಾರೋಪ ಹಂತದಲ್ಲಿ, `ರಾಫಲ್ ಡ್ರಾ ಮುಗಿಯುವವರೆಗೂ ಪ್ರೇಕ್ಷಕರೆಲ್ಲಾ ಉತ್ಸಾಹದಿಂದ ಕುಳಿತಿದ್ದು ಮತ್ತೊಂದು ವಿಶೇಷ... ಇದಕ್ಕೆ ಕಾರಣ: "ನವಾಜ್ ಕನ್ಸ್‌ಟ್ರಕ್ಷನ್ಸ್ ವತಿಯಿಂದ: ಎಲ್.ಸಿ.ಡಿ. ಟೀ.ವಿ", "ಲೋಟಸ್ ಎಂಟರ್ ಪ್ರೈಸಸ್ ಡೈಮಂಡ್ ಜೂವೆಲರ್" ನ ವತಿಯಿಂದ: ಐದುವಜ್ರದ ಪೆಂಡೆಂಟ್", "ಅಸೆಟ್ ಶಾಪೆ ವತಿಯಿಂದ: ಚಿನ್ನದ ಸರ", "ವೇಜ್ ಮ್ಯೂಸಿಕ್‌ವತಿಯಿಂದ: ಡಿ.ವೀ.ಡಿ. ಹಾಗು ಸಿ.ಡಿ ಗಳು"; ಸಾಧನ ಅವರಿಂದ: ಮೇರಿಕೇ ಕಿಟ್"; "ತಿನಿಸು ರೆಸ್ಟೋರಂಟ್‌ವತಿಯಿಂದ: ಡಿನ್ನರ್ ಫಾರ್ ಟೂ" ಹೀಗೆ ಹಲವಾರು `ರಾಫಲ್ ಡ್ರಾ ನಡೆಸಿ ಬಹುಮಾನಗಳನ್ನು ಗೆದ್ದವರಿಗೆ ವಿತರಿಸಲಾಯಿತು. "ವನವಾಣಿ ೨೦೦೭" ಸಂಚಿಕೆಯ ಬಿಡುಗಡೆ, "ಬೃಂದಾವನ ಪ್ರಶಸ್ತಿ" ಮತ್ತು ರಾಫಲ್ ಡ್ರಾ ಅಂದಿನ ಹೈಲೈಟ್ ಕಾರ್ಯಕ್ರಮಗಳು ಎನ್ನಬಹುದು.

ಫ್ಯೂಶನ್ ಫ್ಯಾಶನ್ ಶೊ ರಾಯಲ್ಲಾಗಿತ್ತು; ಸುಮಧುರ ಸಂಗೀತ ಸಾಕಾಗಲಿಲ್ಲ; ಸಂಗೀತ ನೃತ್ಯ ಕೂಡ ಅತ್ಯುತ್ತಮವಾಗಿತ್ತು; ಡೀ.ಜೆ. ಕುಣಿತವಂತೂ ಮತ್ತೆ ಮತ್ತೆ ಊಟವಾದ್ಮೇಲೂ ಬಿಡದೆ ಕುಣಿದ ಜನಕ್ಕೆ ಸೂಪರ್ ಹಿಟ್ ಆಯ್ತು ಬಿಡಿ; ಈ ಕಾರ್ಯಕ್ರಮದ ಪೂರ್ತಿ ಯೋಜನೆ ಬಹಳ ಕ್ಲಾಸಿಯಾಗಿತ್ತು ಎನ್ನುವ ಉದ್ಗಾರ ಕೇಳಿಬಂತು ಅಂದು ನೆರೆದಿದ್ದ ಸಭಿಕರಿಂದ...

ಇಂತಹ ಒಂದು ಬೃಹತ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟ ಬೃಂದಾವನದ ಕಿರಿಯ ಹಾಗು ಹಿರಿಯ ಕಲಾವಿದರೆಲ್ಲರಿಗೂ ಮತ್ತು ಕಡೆಯಲ್ಲಿ ಹಬ್ಬದ ಕಳೆಕಟ್ಟಿದಂತ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸಿದ ಎಲ್ಲಾ ಸದಸ್ಯರಿಗೂ ಬೃಂದಾವನದ ಕಾರ್ಯಕಾರಿ ಸಮಿತಿಯ ಪರವಾಗಿ ಹಾರ್ದಿಕ ಧನ್ಯವಾದಗಳ ವಂದನಾರ್ಪಣೆ ಸಲ್ಲಿಸಿ, ಮತ್ತೊಮ್ಮೆ ಭೇಟಿಯಾಗೋಣ ಮುಂದಿನ "ಎಪ್ರಿಲ್, ೧೪ ರ ೨೦೦೭ ಕ್ಕೆ ಬೃಂದಾವನದ ಯುಗಾದಿ ಹಬ್ಬದಲ್ಲಿ" ಎಂದು ತಿಳಿಸಿ, ಎಲ್ಲರೂ ಹರ್ಷದಿಂದ ಐಸ್ ಕ್ರೀಮ್, ಸಿಹಿ (ಡೆಸ್ಸರ್ಟ್ಸ್) ತಿಂದು ಹೊರಟಾಗ ರಾತ್ರಿ ಹನ್ನೆರಡರ ಗಡಿ ದಾಟಿತ್ತು...

 


ಈ ವೈಭವಪೂರ್ಣ ಕಾರ್ಯಕ್ರಮದ ಸವಿನೆನಪಿನ ಮತ್ತಷ್ಟು ಚಿತ್ರಪಟಕ್ಕೆ ಇಲ್ಲಿ ಕ್ಲಿಕ್ಕಿಸಿ:


ಮತ್ತಷ್ಟು ಮಾಹಿತಿಗೆ, ಈ ಅಂತರ್ಜಾಲ ತಾಣಕ್ಕೆ ಬೇಟಿ ಕೊಡಿ: www.brindavana.org

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com