ಅಮೆರಿಕಾದಲ್ಲಿ ಬೇವು ಬೆಲ್ಲ
ಮಧುಕಾಂತ್ ಕೃಷ್ಣಮೂರ್ತಿ
ಕ್ಯಾಲಿಫೋರ್ನಿಯ, ಅಮೆರಿಕ
madhukanthk@yahoo.com
ಈ ಸಿಲಿಕಾನ್ ಕಣಿವೆಯಲ್ಲಿ ಯಾರನ್ನು ಕೇಳಿದರೂ ಎಲ್ಲರದೂ ಒಂದೇ
ಗೋಳು. ಯಾವಾಗ ನೋಡಿದರೂ ಆಫೀಸ್ ಕೆಲಸ. ಹಗಲು, ರಾತ್ರಿ
ಹಾಗು ವಾರಾಂತ್ಯದಲ್ಲಿ - ಗಂಟೆಗಟ್ಟಲೆ ಕೆಲಸ. ಗಂಟೆಗೆ ಇಂಗ್ಲೀಷ್ ಪದ
ಗೊತ್ತಲ್ಲ - ಬೆಲ್
ಈ ಬಾರಿ ಏಪ್ರಿಲ್‌ನಲ್ಲಿ ಭಾರತಕ್ಕೆ ಪ್ರವಾಸ ಹೋದ ಪ್ರಯುಕ್ತ
ಕೆಕೆಎನೆಸಿಯ ಯುಗಾದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗಲಿಲ್ಲ.
ಆದರೆ ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಆ
ಕಾರ್ಯಕ್ರಮದ ವರದಿಯ ಕೊನೆಯ ಸಾಲು ನನ್ನ ಗಮನ
ಸೆಳೆಯಿತು. ಲೇಖಕ ಪ್ರಭು ಮೂರ್ತಿ ಅವರು ಬರೆದಂತೆ
ಕಾರ್ಯಕ್ರಮದ ಕೊನೆಯಲ್ಲಿ ಭಾರತದ ಅಧಿನಾಯಕನಿಗೂ ಹಾಗೂ
ಲ್ಯಾಂಡ್
ಅಫ್ ದಿ ಬೇವ್ಗೂ
ನಮನ ಸಲ್ಲಿಸಿದರಂತೆ. ಈ ಅಚಾತುರ್ಯದ ಬಗ್ಗೆ ಪ್ರಸ್ತಾಪಿಸಿದಾಗ
ಪ್ರಭು ಅವರು ಗಾಬರಿಯಾಗಿ ಇದರಲ್ಲಿ ತಮ್ಮದೇನೂ
ತಪ್ಪಿಲ್ಲವೆನ್ನುತ್ತ, ಮುದ್ರಾರಕ್ಕಸನತ್ತ ಅನುಮಾನದ ಕಿಡಿ
ಹಾರಿಸಿದರು. ಅವರಿಗೆ ಅಮೇರಿಕಾದಲ್ಲಿ ತಪ್ಪಕ್ಷರದ ಅಪರಾಧಕ್ಕೆ
ಇರುವ ಕಠಿಣ ಶಿಕ್ಷೆಯ ಭಯವಾಗಿರಬೇಕು. ಹೆಚ್ಚಿನ ವಿಚಾರಣೆ
ನಡೆಸಲಾಗಿ ಈ ತಪ್ಪಿನ ಹಿಂದೆ ಮುದ್ರಾರಕ್ಕಸನ ಕೈವಾಡ ಇರುವುದು
ಮನದಟ್ಟಾಯಿತು. ಯುಗಾದಿಯ ಸಮಯದಲ್ಲಿ
land of milk and honey
ಉರುಫ್
land of the
brave
ಅರ್ಥಾತ್
good old
US of Aಯನ್ನು
ಹಾಗೆ ಕರೆಯುವ ಉದ್ದೇಶವಿಲ್ಲದೆಯೆ,
ಲ್ಯಾಂಡ್
ಅಫ್ ದಿ ಬೇವ್
ಎಂದು ಕರೆದಿರುವುದು ಒಂದು ಮಾರ್ಮಿಕ ಸಂದೇಶವೇ ಸರಿ. ಇದು
ಮುದ್ರಾರಾಕ್ಷಸನ
freudian slip
ಅಲ್ಲದೆ ಮತ್ತೇನು? ಯುಗಾದಿ ಹಬ್ಬವನ್ನು ಬೆಂಗಳೂರಿನಲ್ಲಿ ಅನೇಕ
ವರುಷಗಳಿಂದ ಆಚರಿಸಿದ ಫಲವಾಗಿ ನಮ್ಮದು
land of bevu bella
ಎಂದು ಅರಿತು ಬಂದಿದ್ದೆ. ಆದರೆ ಅಮೇರಿಕಾದ ಬಗ್ಗೆ ಹೀಗೆ ಎಂದು
ಯೋಚಿಸಿರಲಿಲ್ಲ. ಎನ್ನಾರೈಗಳ ಧ್ವನಿಯಾಗಿರುವ
ದಟ್ಸ್‌ಕನ್ನಡದ ಹೊಟ್ಟೆಯಲ್ಲೆಲ್ಲೊ ಅಡಗಿದ್ದು ಈ ಸತ್ಯ ಈಗ
ಹೊರಬಿದ್ದಿದ್ದೆ.
ಆ
ಗಾಢಾರ್ಥದ ಗುಟ್ಟು ಇಷ್ಟೆ,
America
is the land of
ಬೇವ್
[and
ಬೆಲ್].

ಈ
ಗಹನವಾದ ವಾಕ್ಯ ಏನು ಹೇಳುತ್ತಿದೆ? ಮೊದಲಿಗೆ
land of
the
ಬೇವ್
ಹೇಗೆ ಬಂತು ನೋಡೋಣ. ಇದು ತೀರ ಸುಲಭದ್ದು. ನನ್ನ ಅಭಿಪ್ರಾಯದಲ್ಲಿ,
ಲ್ಯಾಂಡ್
ಆಫ್ ಮಿಲ್ಕ್ ಎಂಡ್ ಹನಿಯಾದಂತಹ
ಅಮೇರಿಕಾದಲ್ಲಿ ಬಾಳಲು ಮುಕ್ಕಾಲು ಪಾಲು ಭಾರತೀಯರಿಗೆ
ಇರಲೇಬೇಕಾದ ಒಂದು ಅರ್ಹತೆ ಎಂದರೆ ಜೀವನದಲ್ಲಿ
Stressಉ.
ಬೇವು ಈ ಕಹಿಸತ್ಯದ ಸಂಕೇತವಿರಬಹುದೆ? ಹಾಲು ಜೇನಿನ
ಕಣಿಕೆಯಲ್ಲಿ ಅಡಗಿರುವುದು ಬೇವಿನ ಹೂರಣವೆ? ಅಥವಾ ಅಮೇರಿಕಾದ
ಸಂಕೇತಗಳಾದ ಕೋಕ್ ಮತ್ತು ಪೆಪ್ಸಿಯಂತೆ ಬೇವ್‌ರೇಜ್‌ನ ಸಂಕೇತವೆ?
ರೋಡ್ ರೇಜಿನಂತೆ ಈ ಬೇವ್‌ರೇಜ್ ಅಮೇರಿಕ ನಮಗಿತ್ತ ಬಳುವಳಿ.
ಅಮೇರಿಕದಲ್ಲಿರುವ ಕರಿಯರು ಈ
stressಗೆ
ಮಿಕ್ಕವರಿಗಿಂತ ಹೆಚ್ಚಾಗಿ ಬಲಿಯಾಗುತ್ತಾರೆ ಎಂಬುದು ಯಾರೋ ಸಂಶೋಧಕರು
ಪತ್ತೆ ಮಾಡಿರುವ ಒಂದು ಅಂಶ.
ಈ
ಬೇವು,
Stress
ಅಥವಾ
rageಗೆ
ಸಂಕೇತವಿರಬಹುದು ಎಂದೇನೋ ಹೇಳಿದೆವು. ಆದರೆ ಕರಿಯ ಜನಾಂಗದಲ್ಲಿ
ಸಾಮಾನ್ಯವಾಗಿರುವ ತೊಂದರೆಗಳಿಗೆ ಅಂದರೆ ಕರಿbevrageEಗೂ
ನಮ್ಮ ಕರಿಬೇವಿಗೂ ಯಾವುದೇ ಸಂಬಂಧ ಕಲ್ಪಿಸಬಾರದು ಎನ್ನುವುದನ್ನು
ಇಲ್ಲಿ ಮರೆಯಬಾರದು.
ಇನ್ನು
ಬೆಲ್‌ಗೆ ಬರೋಣ. ತಕ್ಷಣ ಹೊಳೆಯುವುದು
TACO BELL..
ಅಮೇರಿಕದಲ್ಲಿರುವ ಭಾರತೀಯರು -ಘಂಟೆಗೆ ೭ ಡಾಲರ್ ಸಂಪಾದಿಸುವ
ವಿದ್ಯಾರ್ಥಿಗಳು, ನೂರೈವತ್ತು ಕೇಳುತ್ತಿದ್ದ ಕನ್ಸಲ್ಟೆಂಟುಗಳು, ಕಾರಲ್ಲಿ
vacation
ಹೋಗುವ ಮಂದಿ, ಗ್ಯಾಸ್ ಸ್ಟೇಶನ್ ಪಂಜಾಬಿಗಳು, ಮೋಟೆಲ್
ಗುಜರಾತಿಗಳು, ವೀಸಾ ಸಿಕ್ಕ ಭಾಗ
ಶಾಲಿ ರಾಜಕಾರಣಿಗಳು - ಎಲ್ಲ ಹೊಟ್ಟೆ
ಹಸಿವಾದಾಗ ನಿರ್ಯೋಚನೆಯಿಂದ ನುಗ್ಗುವುದು
TACO BELL
ಗೇನೆ. ತಿನ್ನುವುದು ಅದೇ
Seven layered burritoವನ್ನು.
ತಿನ್ನಲು ಏನೋ ಖಾರವಾಗಿ ಸಿಗುತ್ತಲ್ಲ - ಅಷ್ಟೇ ಸಾಕು. ಮೆಕಿಕೊದ ಪದ್ಧತಿಯ
ಅಡುಗೆಯಾದರೂ
TACO BELL
ಅಮೇರಿಕದ ಜೀವನದ ಒಂದು ಮುಖ್ಯ ಎಳೆ. ನೆನಪಿಗೆ ಬರುವ ಇನ್ನೊಂದು
ಬೆಲ್ ಎಂದರೆ ಫಿಲಡೆಲ್ಫಿಯಾದ ಒಡೆದ ಲಿಬರ್ಟಿ ಬೆಲ್. ೧೭೭೬ ಜುಲೈ
೮ರಂದು ಅಮೇರಿಕ ತನ್ನ ಸ್ವಾವಲಂಬನೆಯ ಘೋಷಣೆಯನ್ನು ಬಂದು
ಕೇಳಲು, ತನ್ನ ಜನತೆಗೆ ಈ ಘಂಟೆಯನ್ನು ಮೊಳಗಿಸಿ ಕರೆ ನೀಡಿತಂತೆ.
ಅದೇಕೆ ಒಡೆಯಿತು ಎನ್ನುವುದು ಬೇರೆ ವಿಷಯ.
೭೦ರ ದಶಕದಲ್ಲಿ ಪ್ರಸಿದ್ಧಿಯಲ್ಲಿದ್ದ ಬೆಲ್‌ಬಾಟಮ್ ಸಹ ಅಮೇರಿಕದ
ಕೊಡುಗೆ. ಅಮೇರಿಕ ಎಂದ ಮೇಲೆ ಹಾಲಿವುಡ್ಡನ್ನು ಮರೆಯಲಾಗುವುದೆ?
ಹಾಲಿವುಡ್ಡಿನ ತಾರೆಗಳು ವಾಸ ಮಾಡುವುದು ಎಲ್ಲಿ ಗೊತ್ತಲ್ಲ! ಬೇವರ್ಲಿ
ಹಿಲ್ಸ್ ಮತ್ತು ಬೆಲ್ ಏರ್. ಓಹೊ! ಹಾಗಾದರೆ ಹಾಲಿವುಡ್ ಎನ್ನುವುದು ಬೇವ್
ಮತ್ತು ಬೆಲ್ ಮೇಳೈಸಿರುವ ಜಾಗ.
ಇನ್ನು
ಈ ಸಿಲಿಕಾನ್ ಕಣಿವೆಯಲ್ಲಿ ಯಾರನ್ನು ಕೇಳಿದರೂ ಎಲ್ಲರದೂ ಒಂದೇ
ಗೋಳು. ಯಾವಾಗ ನೋಡಿದರೂ ಆಫೀಸ್ ಕೆಲಸ. ಹಗಲು, ರಾತ್ರಿ ಹಾಗು
ವಾರಾಂತ್ಯದಲ್ಲಿ - ಗಂಟೆಗಟ್ಟಲೆ ಕೆಲಸ. ಗಂಟೆಗೆ ಇಂಗ್ಲೀಷ್ ಪದ
ಗೊತ್ತಲ್ಲ - ಬೆಲ್. ಗಂಟೆಗಟ್ಟಲೆ ಕೆಲಸದಿಂದ ಮತ್ತೆ
stressಉ.
ಅದೇ ಬೆಲ್, ಅದೇ ಬೇವು. ಈ ರೀತಿ ಹೊರಳಿ ಹೊರಳಿ ಬೇವ್ ಮತ್ತು ಬೆಲ್
ಒಂದಕ್ಕೊಂದು ಹೊಂದಿಕೊಂಡಿರುವುದು ಕಾಣಲು ಸಿಗುವುದು -
only in America - the land
of bev and bel.
ಛಾಯಾಚಿತ್ರಗಳು: ಪ್ರತಿಭಾ ಕೇಶವಮೂರ್ತಿ ಹಾಗೂ ಮಧುಕಾಂತ್
ಕೃಷ್ಣಮೂರ್ತಿ.
(ಈ ಲೇಖನ ಉತ್ತರ ಕ್ಯಾಲಿಫೋರ್ನಿ೦ii ಕನ್ನಡ ಕೂಟದ ವಾರ್ಷಿಕ ಸಂಚಿಕೆ
ಸ್ವರ್ಣಸೇತು-೨೦೦೫ ರಲ್ಲಿ ಪ್ರಕಟವಾದದ್ದು.)