Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

`ಆನಂದ್ ಆಡಿಯೊ' ಪ್ರಾಯೋಜಿಸುವ AKKA IDOL ಸ್ಪರ್ಧೆ

ಕನ್ನಡ ಜನಪದಗೀತೆ, ಸುಗಮಸಂಗೀತ, ಚಿತ್ರಗೀತೆ ಹಾಡುವ ಹವ್ಯಾಸಿ/ಅಭ್ಯಾಸಿ ಗಾನಕೋಗಿಲೆಗಳಿಗೆ ಚಿನ್ನದಂಥ ಅವಕಾಶ! ಇದೇ ಮೊದಲ ಬಾರಿಗೆ AKKA IDOL ಸ್ಪರ್ಧೆ ಈ ಬಾರಿಯ ವಿಶ್ವ ಕನ್ನಡ ಸಮ್ಮೇಳನದಲ್ಲಿ. ಸಮ್ಮೇಳನಕ್ಕೆ ನೋಂದಾಯಿಸಿದವರೆಲ್ಲರೂ ಯಾವುದೇ ತಾರತಮ್ಯವಿಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಿಗಳಾಗಲು ಇಚ್ಛಿಸುವವರು ಮಾಡಬೇಕಾದ್ದಿಷ್ಟೇ: ಸುಗಮಸಂಗೀತ, ಜನಪದಗೀತೆ ಮತ್ತು ಚಲನಚಿತ್ರಗೀತೆ - ಈ ಮೂರು ಪ್ರಕಾರಗಳಲ್ಲೂ ನಿಮ್ಮ ಕಂಠಸಿರಿಯಲ್ಲಿ ಒಂದೊಂದು ಹಾಡನ್ನು ಧ್ವನಿಮುದ್ರಿಸಿ ಅದರ ಟೇಪ್ ಅಥವಾ ಸಿಡಿಯನ್ನು ಕಳಿಸಿ.

ವಿಳಾಸ: AKKA IDOL Contest, 18405 Broad Leaf Road, Boyds Maryland 20841, USA.

 

ಆಗಸ್ಟ್ ೧, ೨೦೦೬ರ ನಂತರದ ಅಂಚೆಮುದ್ರೆಯಿರುವ ಪ್ರವೇಶಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ಸ್ಪರ್ಧೆಯ ಎರಡನೆ ಸುತ್ತನ್ನು ಪ್ರವೇಶಿಸಿದವರ ಹೆಸರುಗಳನ್ನು ಸಮ್ಮೇಳನದಲ್ಲಿ ಸೆಪ್ಟಂಬರ್ ೧ರಂದು ಪ್ರಕಟಿಸಲಾಗುವುದು. ಸಮ್ಮೇಳನ ಸಮಿತಿಯು ನೇಮಿಸಿದ ತೀರ್ಪುಗಾರರ ಸಮ್ಮುಖದಲ್ಲಿ ಸೆಪ್ಟಂಬರ್ ೨ರಂದು ಮೊದಲ ಸುತ್ತಿನ ಸ್ಪರ್ಧೆ ನಡೆಯುತ್ತದೆ. ಅದರಲ್ಲಿ ಇಬ್ಬರು ಸ್ಪರ್ಧಿಗಳು ಮಾತ್ರ ಅಂತಿಮ ಸುತ್ತನ್ನು ಪ್ರವೇಶಿಸಲು ಆಯ್ಕೆಯಾಗುತ್ತಾರೆ. ಅಂತಿಮ ಸುತ್ತನ್ನು ಪ್ರವೇಶಿಸಿದ ಈ ಈರ್ವರು ಸ್ಪರ್ಧಿಗಳು ಸಮ್ಮೇಳನದಲ್ಲಿ `ಗುರುಕಿರಣ್ ರಸಮಂಜರಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಾಡುವ ಅವಕಾಶವನ್ನು ಪಡೆಯುತ್ತಾರೆ. ಪೂರ್ವನಿಯೋಜಿತ ಸಭಿಕರು ಈರ್ವರಲ್ಲಿ ಒಬ್ಬರನ್ನು AKKA IDOL ಆಗಿ ಚುನಾಯಿಸುತ್ತಾರೆ. ವಿಜೇತರಿಗೆ ಬಹುಮಾನವಾಗಿ AKKA IDOL ಕಿರೀಟವಷ್ಟೇ ಅಲ್ಲದೆ ಆನಂದ್ ಆಡಿಯೋ ಕಂಪೆನಿಯ ಧ್ವನಿಮುದ್ರಿಕೆಗಳಲ್ಲಿ ಹಾಡುವ ಅವಕಾಶದ ಬಂಪರ್ ಬಹುಮಾನವೂ ಸಲ್ಲುತ್ತದೆ!

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com