Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 20 December 2006 01:53 PM

ವಿದ್ಯಾಭೂಷಣರ ಸಂಗೀತಕ್ಕೆ ತಲೆದೂಗಿದ ಅವಳಿ ನಗರಗಳ ಕನ್ನಡಿಗರು


ಶಾಂತಲಾ ರವೀಂದ್ರ, ಮಿನ್ನೆಸೊಟ, ಅಮೆರಿಕ
shantala.bhat@gmail.com
 

೫೦ನೇ ಸುವರ್ಣರಾಜ್ಯೋತ್ಸವದ ಅಂಗವಾಗಿ ಮಿನ್ನೆಸೋಟದ "ಸಂಗೀತ ಕನ್ನಡ ಕೂಟ" ಹಮ್ಮಿಕೊಂಡಿದ್ದ ಶ್ರೀ ವಿದ್ಯಾಭೂಷಣರ ಸುಗಮ ಸಂಗೀತ ಕಾರ್ಯಕ್ರಮವು ನವೆಂಬರ್ ೧೭, ೨೦೦೬ರ ಸಂಜೆ ಸೆಂಟಪೌಲ್ ವಿದ್ಯಾರ್ಥಿ ಕೇಂದ್ರದಲ್ಲಿ ಜರುಗಿತು.
 

ಸೆಂಟಪೌಲ್-ಮಿನ್ನೆಯಪೊಲಿಸ್ ಅವಳಿ ನಗರಗಳ ಸುಮಾರು ೩೦೦ಕ್ಕೂ ಹೆಚ್ಚಿನ ಕನ್ನಡಿಗರ ಮನಸೂರೆಗೊಂಡ ಸಂಗೀತ-ನೃತ್ಯ ಕಾರ್ಯಕ್ರಮಕ್ಕೆ ಸುಶ್ರಾವ್ಯ ಪ್ರಾರ್ಥನಾ ಗೀತೆಯೊಂದಿಗೆ ಚಾಲನೆ ನೀಡಿದವರು ಶ್ರೀಮತಿ ಶಾಂತಲಾ ಭಟ್. ನೃತ್ಯ ಕಾರ್ಯಕ್ರಮವು ಆರಂಭಗೊಂಡಿದ್ದು ಶ್ರೀಮತಿ ರೂಪಾ ರಾಜು ಅವರ ಗಣೇಶಸ್ತುತಿಯ ಮೂಲಕ. ಶಾಸ್ತ್ರೀಯ ಶ್ಲೋಕ ನೃತ್ಯವನ್ನು ಪ್ರದರ್ಶಿಸಿದವರು ಕುಮಾರಿ ನೇಹಾ ನಿರಂಜನ್ ಮತ್ತು ಕುಮಾರಿ ಮಾನಸಾ ರಘುನಂದನ್. ಕುಚಿಪುಡಿಯ ತರಾನಾವನ್ನು ಪ್ರದರ್ಶಿಸಿದವರು ಕುಮಾರಿ ಅನಿಷಾ ಧರ್ನಿಪ್ರಗಡ.
 

ಶ್ರೀ ವಿದ್ಯಾಭೂಷಣರ ಸುಗಮ ಸಂಗೀತದ ಇಂಪಿಗೆ ಶ್ರೀ ನಂದಾ ಮಾಸ್ತಿಯವರ ಮೃದಂಗಸ್ವರ ಮತ್ತು ಶ್ರೀ ವಿಜಯಾ ದೆಸಿಕನರ ವಾಯಲಿನ್ ಸ್ವರಗಳು ಮೇಳೈಸಿ, ಸಭಾಂಗಣದಲ್ಲೊಂದು ನಾದಲೋಕವನ್ನೇ ಸೃಷ್ಟಿಸಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಸಭಾಂಗಣದಲ್ಲಿನ ಪ್ರೇಕ್ಷಕರು ಕಿವಿಗಚ್ಚಿಡುವ ಕರತಾಡನದ ಬದಲಾಗಿ ತಾಳಬದ್ಧವಾಗಿ ಚಪ್ಪಾಳೆಯ ಮಳೆಗರೆದರು. ದೇವರನಾಮಗಳನ್ನೊಳಗೊಂಡಿದ್ದ ಸಂಗೀತ ಕಾರ್ಯಕ್ರಮವು ಅವಳಿ ನಗರಗಳ ಕನ್ನಡಿಗರಲ್ಲಿ ಭಕ್ತಿಯ ಹೊನಲನ್ನೇ ಹರಿಸಿತು.
 

೩ ತಾಸುಗಳು ಸುಗಮವಾಗಿ ಜರುಗಿದ ಕಾರ್ಯಕ್ರಮವು ಸಂಘದ ಉಪಾಧ್ಯಕ್ಷರಾದ ಶ್ರೀ ವೀರೇಶ್ ಮಠದರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭಗೊಂಡು, ಅಧ್ಯಕ್ಷರಾದ ಶ್ರೀ ನಿರಂಜನ್ ಬಾಬುರವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು ಹಾಗೂ ಮಿನ್ನೆಸೊಟ ಸಂಗೀತ ಕನ್ನಡ ಕೂಟದ ಯಶಸ್ವಿ ಕಾರ್ಯಕ್ರಮಗಳ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯವನ್ನು ಕಂಡುಕೊಂಡಿತು.

 

ಇನ್ನಷ್ಟು

ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ

ಅಕ್ರಮ ಆಸ್ತಿ ಪ್ರಕರಣ ಗೆದ್ದ ಲಾಲೂ ದಂಪತಿಗಳು

ರಜತ ಕಳೆದುಕೊಳ್ಳುವ ಭಯದಲ್ಲಿ ಶಾಂತಿ

ಗೌಡರ ಜೊತೆ ಸೇರುವ ಆಸೆ ಇತ್ತು ಆದರೆ...

ಫೆ.೧೧ಕ್ಕೆ ವಿಶ್ವ ಹಿಂದೂ ಅಧಿವೇಶನ

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com