|
ಮಸ್ಕತ್‌ನಲ್ಲಿ ನಡೆಯಲಿರುವ ಸಂಗೀತ ಸಮ್ಮೇಳನ
ಮಸ್ಕತ್: ಮಸ್ಕತ್‌ನ `ದಿ ಕರ್ನಾಟಕ ವಿಂಗ್ ಆಫ್ ಇಂಡಿಯನ್
ಸೋಶಿಯಲ್ ಕ್ಲಬ್(ಐಎಸ್‌ಸಿ)' ನವೆಂಬರ್ ೨೩ರಂದು ಮಸ್ಕತ್‌ನ `ಅಲ್
ಫಲಜ್ ಹೋಟೆಲ್'ನ `ಲೇ ಗ್ರ್ಯಾಂಡ್' ಸಭಾಂಗಣದಲ್ಲಿ ಸಂಗೀತ
ಸಮ್ಮೇಳನವನ್ನು ಆಯೋಜಿಸಿದೆ.
ನ.೨೩ರ ಸಂಜೆ ಕರ್ನಾಟಕ ಹೆಸರಾಂತ ಸಂಗೀತಗಾರರಿಂದ ಶಾಸ್ತ್ರೀಯ,
ಜಾನಪದ ಮತ್ತು ಚಲನಚಿತ್ರ ಸಂಗೀತಗಳ ವೈಭವಯುತ
ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕದ ಪ್ರಖ್ಯಾತ ಸಂಗೀತ ನಿರ್ದೇಶಕ ಪ್ರವೀಣ. ಡಿ. ರಾವ್,
ವಯೋಲಿನ್ ವಾದಕ ಚಂದು, ಹಿನ್ನೆಲೆಗಾಯಕಿ ಎಂ. ಡಿ. ಪಲ್ಲವಿ,
ಪರ್‍ಕ್ಯೂಶನಿಸ್ಟ್ ಅರುಣ್ ಸುಕುಮಾರ್, ಮೆಂಡೋಲಿನ್ ವಾದಕ
ಎನ್.ಎಸ್. ಪ್ರಸಾದ್, ಗಿಟಾರ್ ವಾದಕ ಶ್ರೀನಿವಾಸ್ ಆಚಾರ್, ತಬಲಾ ವಾದಕ
ಮಧುಸೂದನ್ ಅವರು ಕಾರ್ಯಕ್ರಮ ನೀಡಲಿದ್ದಾರೆ.
ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತಗಳ ಜುಗಲಬಂಧಿ ಸೇರಿದಂತೆ
ವಿವಿಧರೀತಿಯ ಸಂಗೀತಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪ್ರಸಿದ್ಧ
ಕನ್ನಡ ಭಾವಗೀತೆ, ರಿದಮ್ ಕೊನ್ವರ್‍ಸೇಶನ್, ಲ್ಯಾಟಿನ್ ಸಂಗೀತ,
ಭಾರತೀಯ ಜಾಜ್ ಸಂಗೀತ, ಜಾನಪದ ಸಂಗೀತ, ಜನಪ್ರಿಯ
ಕನ್ನಡ ಚಲನಚಿತ್ರ ಗೀತೆ, ಅರೇಬಿಕ್ ಸಂಗೀತದ ಸೊಗಡು ಇರುವ
ಭಾರತೀಯ ಮತ್ತು ಹಿಂದಿ ಚಲನಚಿತ್ರಗಳ ಸಂಗೀತಗಳು
ಮಸ್ಕತ್‌ನ ಜನರಿಗೆ ಸಂಗೀತ ರಸದೌತಣವನ್ನು ಉಣಿಸಲಿದೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ ದಿ ಎಕಾನಾಮಿಷ್ಟ್ ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|