|
ನ್ಯೂಜೆರ್ಸಿಯ ಬೃಂದಾವನದಲ್ಲಿ ಯುಗಾದಿಯ ಸಂಭ್ರಮ
ಶನಿವಾರ, ಎಪ್ರಿಲ್ ೨೧ ದಂದು ಸರ್ವಜಿತ್ ಸಂವತ್ಸರದ ಪ್ರಯುಕ್ತ,
ನ್ಯೂಜೆರ್ಸಿಯ ಬೃಂದಾವನ ಕಾರ್ಯಕಾರಿ ಸಮಿತಿಯು ಅಯೋಜಿಸಿರುವ
೨೦೦೬-೦೮ ಕಾರ್ಯಕಾರಿ ಸಮಿತಿಯ ಮೊಟ್ಟ ಮೊದಲ ಸರ್ವ ಸದಸ್ಯರ ಸಭೆ ಹಾಗು
ಯುಗಾದಿ ಹಬ್ಬವನ್ನು ಅಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಬೃಂದಾವನ
೨೦೦೬-೦೮ ಕಾರ್ಯಕಾರಿ ಸಮಿತಿಯು ಸರ್ವರಿಗೂ ಆಮಂತ್ರಣವನ್ನು ನೀಡಿದೆ.
ಸರ್ವ ಸದಸ್ಯರ ಸಭೆಯನ್ನ ಡಾ. ಎಂ. ಜಿ. ಪ್ರಸಾದ್ ಅವರ ನಿಯಂತ್ರಣದಲ್ಲಿ
ನಡೆಸಿ, ೨೦೦೬-೦೮ ರ ಸಾಲಿನ ಕಾರ್ಯಕಾರಿ ಸಮಿತಿಯು ೫೫% ರಷ್ಟು ಬೃಂದಾವನದ
ಸದಸ್ಯತ್ವವನ್ನು ಹೆಚ್ಚಿಸಿದಲ್ಲದೆ, ಅಮೇರಿಕದ ನೆಲದಲ್ಲಿ ಕನ್ನಡದ
ಕಲೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಶ್ರಮಿಸಿ, ಬಹಳ
ಅಚ್ಚುಕಟ್ಟಾದ ಕಾರ್ಯನಿರ್ವಹಿಸಿರುವ ವರದಿ ಹಾಗು ಕಜಾಂಚಿ ವರದಿಯನ್ನು
ಸದಸ್ಯರಿಗೆ ನೀಡಲಾಗುವುದು..
ಯುಗಾದಿ ಹಬ್ಬದ ಮುಖ್ಯ ಆಕರ್ಷಣೆ ಏನಪ್ಪಾ ಅಂದ್ರೆ...
ದೈವಾಧೀನರಾದ ನಮ್ಮ ಡಾ. ರಾಜ್ ಅವರ `ಶಾರೀರ' ವೆನಿಸಿಕೊಂಡು,
ಕನ್ನಡ ಚಿತ್ರರಂಗದ ಹಿರಿಯ ಹಿನ್ನೆಲೆ ಗಾಯಕರಾಗಿ ನಿರಂತರ ಸೇವೆ
ಸಲ್ಲಿಸಿರುವ - ಕಂಚಿನ ಕಂಠ ಸಿರಿಯಾದ ಡಾ. ಪಿ.ಬಿ.ಎಸ್ ಅವರೊಂದಿಗೆ
`ಸಂವಾದ' ಹಾಗು `ಲೈವ್ ಇನ್ ಕಾನ್ಸರ್ಟ್' ಕಾರ್ಯಕ್ರಮಗಳು..
ಇಷ್ಟೇ ಅಲ್ಲದೆ ಶ್ರೀಮತಿ. ವಸಂತಾ ಶಶಿಯವರ ನೇತೃತ್ವದಲ್ಲಿ ಹಲವಾರು
ಸ್ಥಳೀಯ ಕಲಾವಿದರನ್ನು ಗುರುತಿಸಿ ಪರಿಚಯಿಸಿಕೊಡುತ್ತಿರುವ
ಮಹಾಶಿವರಾತ್ರಿ ಲಲಾಟ ತಾಂಡವ ನೃತ್ಯರೂಪಕ ಕಾರ್ಯಕ್ರಮಗಳು..
ತಾವೆಲ್ಲರೂ ನಿಮ್ಮ ಬೃಂದಾವನದ ಆತ್ಮೀಯ ವಾತಾವರಣದರಲ್ಲಿ ಸಕುಟುಂಬ
ಸಪರಿವಾರ ಸಮೇತರಾಗಿ ಪಾಲ್ಗೊಂಡು ಬೃಂದಾವನಕ್ಕೆ ಯುಗಾದಿ ಹಬ್ಬದ
ಕಳೆ ಕಟ್ಟಬೇಕೆಂದು ನಮ್ಮ ಸವಿನಯ ಪ್ರಾರ್ಥನೆ...
೨೦೦೭-೦೮ ನೇ ಸದಸ್ಯತ್ವವನ್ನು ಇನ್ನು ನವೀಕರಿಸದೆ ಇದ್ದ ಪಕ್ಷದಲ್ಲಿ,
ದಯವಿಟ್ಟು ಶೀಘ್ರದಲ್ಲೇ ಅತವಾ ಎಪ್ರಿಲ್ ೨೧ ಕ್ಕೆ ಬಂದು ನವೀಕರಿಸಿ ನಿಮ್ಮ
ಬೃಂದಾವನದ ಏಳಿಗೆಗಾಗಿ ತನು ಮನ ಧನಗಳನ್ನು ಅರ್ಪಿಸಿ, ತಮ್ಮ
ಮಕ್ಕಳು, ಮೊಮ್ಮಕ್ಕಳಿಗೂ ನಮ್ಮ ಕನ್ನಡ ಭಾಷೆ, ಸಂಸ್ಕೃತಿಯನ್ನು
ಕಲಿಸಲು ಸಹಕರಿಸಿ.
ಇನ್ನೂ "ಬೃಂದಾವನದ" ಸದಸ್ಯರಾಗದೆ ಇರುವ ಕನ್ನಡಿಗರು ಆದಷ್ಟು
ಬೇಗ ಅಥವಾ ಎಪ್ರಿಲ್ ೨೧ ಕ್ಕೆ ಬಂದು ಸದಸ್ಯರಾಗಿ, ಸಕ್ರಿಯವಾಗಿ ಪಾಲ್ಗೊಂಡು,
ಬೃಂದಾವನದ ಸದಸ್ಯತ್ವದ ಅನುಕೂಲತೆಯನ್ನು ಪಡೆಯಬೇಕಾಗಿ
ವಿನಂತಿ.
ಮತ್ತಷ್ಟು ಮಾಹಿತಿಗೆ, ಈ ಅಂತರ್ಜಾಲ ತಾಣಕ್ಕೆ ದಯವಿಟ್ಟು ಬೇಟಿ ಕೊಡಿ:
www.brindavana.org
|