ಬೆಂಗ್ಳೂರಲ್ಲಿ ನೀರಿನಟ್ಯಾಂಕ್ ಒಡೆದು ಮಕ್ಕಳ ಸಾವು
ಬೆಂಗಳೂರು :
ನೀರಿನ ಟ್ಯಾಂಕ್ ಒಡೆದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ
ರಾಮಮೂರ್ತಿನಗರದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟ
ಮಕ್ಕಳು ಆಂಧ್ರ ಪ್ರದೇಶದಿಂದ ಬಂದ ಕಾರ್ಮಿಕ ಮಕ್ಕಳಾಗಿದ್ದು, ಗೀತಾ (೧೪), ರುಕ್ಸಾನಾ
(೨) ಎಂಬ ಮಕ್ಕಳೇ ಮೃತರಾದ ನತದೃಷ್ಟರಾಗಿದ್ದಾರೆ.
ಕಾರ್ಮಿಕರ
ದಿನಬಳಕೆಗಾಗಿ ನೀರು ಸಂಗ್ರಹಿಸಲು ೪ ಅಡಿ ಎತ್ತರ ನಿರ್ಮಿಸಿದ್ದ ಸಿಮೆಂಟ್ ಟ್ಯಾಂಕ್ ನೀರಿನ
ಒತ್ತಡ ತಾಳದೆ ಒಡೆದಾಗ ಮಕ್ಕಳು ಸ್ನಾನ ಮಾಡುತ್ತಿದ್ದರೆಂದು ತಿಳಿದು ಬಂದಿದೆ.